ದಿಸ್ಪುರ್​:ಪೊಲೀಸ್​ ಅಧಿಕಾರಿಗೆ 15 ಲಕ್ಷ ರೂ. ಲಂಚ ನೀಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ಪೊಲೀಸರು ಮಾರಿಗಾಂವ್​ ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇಂದ್ರ ಅಸ್ಸಾಂ ಜಿಲ್ಲೆಯ ಮೊಯಿರಾಬಾರಿ ಏರಿಯಾ ನಿವಾಸಿ ಮನ್ನಾಸ್​ ಅಲಿ ಎಂದು ಗುರುತಿಸಲಾಗಿದೆ. ಪೊಲೀಸ್​ ಕಚೇರಿಯಲ್ಲೇ 15 ಲಕ್ಷ ರೂ. ಲಂಚ ನೀಡುವಾಗ ಮಾರಿಗಾಂವ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ನಂದ ಸಿಂಗ್​ ಬಾರ್ಕೋಲ ರೆಡ್​ ಹ್ಯಾಂಡ್​ ಆಗಿ ಹಿಡಿದು ಹಾಕಿದ್ದಾರೆ.
ಇದನ್ನೂ ಓದಿ:ಕಂಡೋರ ಹೆಂಡತಿಯನ್ನು ಕರೆದೊಯ್ದ ಪೊಲೀಸಪ್ಪ: ಪತ್ನಿಗಾಗಿ ಸಂತ್ರಸ್ತ ಪತಿಯ ಅಳಲು!
ಈ ಬಗ್ಗೆ ಮಾತನಾಡಿರುವ ನಂದ ಸಿಂಗ್​ ಬಾರ್ಕೋಲ, ಮೊಯಿರಾಬಾರಿ ಏರಿಯಾದಲ್ಲಿ ಅಕ್ರಮವಾಗಿ ಬೆಲ್ಲದ ಪಾಕ ತಯಾರಿಸುತ್ತಿದ್ದ ಐದು ಕಾರ್ಖಾನೆಗಳ ಮೇಲೆ ಪೊಲೀಸರು ಆಗಸ್ಟ್​ 8ರಂದು ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಮಾಹಿತಿ ನೀಡಿದರು.
ಮುಂದುವರಿದು ಮಾತನಾಡಿದ ಅವರು, ಐದು ಅಕ್ರಮ ಕಾರ್ಖಾನೆಗಳ ಮಾಲೀಕ ಪರಾರಿಯಾಗಿದ್ದಾರೆ. ಪ್ರಕರಣವನ್ನು ಹೇಗಾದರೂ ನಿರ್ವಹಣೆ ಮಾಡುವಂತೆ ನನಗೆ ಲಕ್ಷಾಂತರ ರೂಪಾಯಿ ಲಂಚ ನೀಡಲು ಯತ್ನಿಸಿದರು. ಇಂದು ವ್ಯಕ್ತಿಯೊಬ್ಬ ಬ್ಯಾಗ್​ನಲ್ಲಿ ರಹಸ್ಯವಾಗಿ 15 ಲಕ್ಷ ರೂ.ನೊಂದಿಗೆ ನನ್ನ ಕಚೇರಿಗೆ ಆಗಮಿಸಿದ. ತಕ್ಷಣ ಆರೋಪಿಯನ್ನು ಹಿಡಿದುಕೊಳ್ಳುವಂತೆ ಸಹೋದ್ಯೋಗಿಗಳಿಗೆ ಹೇಳಿದೆ. ಆತ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಎಂದು ಬಾರ್ಕೋಲ ಹೇಳಿದ್ದಾರೆ.
ಇದನ್ನೂ ಓದಿ:ಹಿಂದಿನ ಸಿಎಂ ಕೊಟ್ಟಿದ್ದನ್ನು ನಮ್ಮ ಸಿಎಂ ಕಿತ್ತುಕೊಂಡಿದ್ದಾರೆ: ಶಾಸಕ ಬಸನಗೌಡ ಪಾಟೀಲ್ ಅಸಮಾಧಾನ​
ಸದ್ಯ ಆರೋಪಿಯಿಂದ ಪೊಲೀಸರು 15 ಲಕ್ಷ ರೂ. ವಶಕ್ಕೆ ಪಡೆದಿದ್ದು, ಆತನ ವಿರುದ್ಧ ವಿವಿಧ ಪ್ರಕರಣಗಳ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.(ಏಜೆನ್ಸೀಸ್​)
ನಿಮ್ಮ ತಾಯಿ, ಅಜ್ಜಿಯ ಗಂಟಲು ಸೀಳಿದ್ದೇನೆ, ನೋಡಿ ಬನ್ನಿ ಎಂದು ಕರೆದ ಷಾಟ್‌ಪುಟ್‌ ಚಾಂಪಿಯನ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + four =
Remember me
