ಗುವಾಹಟಿ:ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಖುಷಿಯಾಗಿದ್ದಾರೆ. ಕಾರಣ ಅವರಿಗೆ 31ರ ಹರೆಯದ ವ್ಯಕ್ತಿಯೊಬ್ಬ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ!
ಅರ್ರೇ… ಮುಖ್ಯಮಂತ್ರಿಗೆ ಯುವಕನೊಬ್ಬ ಲ್ಯಾಂಬೋರ್ಗಿನಿ ಕಾರನ್ನು ಯಾಕೆ ನೀಡಿದ ಎಂಬ ಅನುಮಾನ ಮತ್ತು ಪ್ರಶ್ನೆ ಮೂಡುವುದು ಸಹಜ. ಆದರೆ ನಿಜ ಸಂಗತಿ ಬೇರೆಯೇ ಇದೆ. ಅಸಲಿಗೆ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಉಡುಗೊರೆಯಾಗಿ ಲಭಿಸಿರುವುದು ಲ್ಯಾಂಬೋರ್ಗಿನಿ ಕಾರಲ್ಲ. ನೂರುಲ್ ಹಕ್ ಎಂಬಾತ ಮಾರುತಿ ಸುಝುಕಿ ಕಂಪೆನಿಯ ಸ್ವಿಫ್ಟ್​ ಕಾರು. ಆದರೆ ಸ್ವಿಫ್ಟ್​ ಕಾರನ್ನು ಲ್ಯಾಂಬೋರ್ಗಿನಿ ಕಾರಿನಂತೆ ಮರು ವಿನ್ಯಾಸಗೊಳಿಸಿದ್ದಾನೆ. ವಿನ್ಯಾಸಗೊಂಡಿರುವ ಈ ಕಾರನ್ನು ನೋಡಿದರೆ ಒಂದು ಕ್ಷಣ, ಇದು ಲ್ಯಾಂಬೋರ್ಗಿನಿ ಕಾರಿನಂತೆ ಭಾಸವಾಗುತ್ತದೆ.
ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಮೆಕ್ಯಾನಿಕ್ ನೂರುಲ್ ಹಕ್​ನ ಶ್ರಮವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ವಿನ್ಯಾಸಗೊಳಿಸಿರುವ ಲ್ಯಾಂಬೋರ್ಗಿನಿ ಕಾರನ್ನು ಸ್ವೀಕರಿಸಲು ಸಂತೋಷವಾಗುತ್ತಿದೆ. ಅವರ ಎಲ್ಲಾ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಹೇಳಿಕೊಂಡಿದ್ದಾರೆ.
Wrapped up my day at Silchar with a walk from Itkhola to Circuit House along with our karyakartas. Happy to meet a lot of warm-hearted along the way.Also had the thrill of being at the wheel of a 'Lamborghini' assembled by Nurul Haque, a car enthusiast from Karimganj.pic.twitter.com/7EMsG4MtbT— Himanta Biswa Sarma (@himantabiswa)November 29, 2022
Wrapped up my day at Silchar with a walk from Itkhola to Circuit House along with our karyakartas. Happy to meet a lot of warm-hearted along the way.Also had the thrill of being at the wheel of a 'Lamborghini' assembled by Nurul Haque, a car enthusiast from Karimganj.pic.twitter.com/7EMsG4MtbT
ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಮೆಕ್ಯಾನಿಕ್ ಆಗಿರುವ ನೂರುಲ್ ಹಕ್ ಮಾರುತಿ ಸ್ವಿಫ್ಟ್ ಕಾರನ್ನು, ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಂತೆ ಮಾರ್ಪಾಡು ಮಾಡಿದ್ದಾರೆ. ನಂತರ ಗುವಾಹಟಿಗೆ ತೆರಳಿ ಮುಖ್ಯಮಂತ್ರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ನನಗೆ ಲ್ಯಾಂಬೋರ್ಗಿನಿಯಂತಹ ಸ್ಪೋರ್ಟ್​ ಕಾರುಗಳನ್ನು ಡ್ರೈವ್ ಮಾಡಲು ಇಷ್ಟ. ಹೀಗಾಗಿ ಸ್ವಿಫ್ಟ್​ ಕಾರನ್ನು ಲ್ಯಾಂಬೋರ್ಗಿನಿಯಂತೆ ವಿನ್ಯಾಸಗೊಳಿಸಿದೆ. ಸ್ವಿಫ್ಟ್​ ಕಾರನ್ನು ಮಾರ್ಪಾಡು ಮಾಡಲು ನಾಲ್ಕು ತಿಂಗಳು ಸಮಯ ತಗುಲಿದ್ದು, 10 ಲಕ್ಷ ರೂ. ಖರ್ಚಾಗಿದೆ ಎಂದು ನೂರುಲ್ ಹಕ್ ಹೇಳಿಕೊಂಡಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
