ಅಸ್ಸಾಂ:ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಕೆಮ್ಮಿನ ಸಿರಪ್ ಬಾಟಲಿಗಳನ್ನು ರಾಜ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಜಪ್ತಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ರಹಸ್ಯ ಮಾಹಿತಿಯ ಆಧಾರದ ಮೇಲೆ ಸಿಆರ್‌ಪಿಎಫ್‌ನೊಂದಿಗೆ ಗೋಲ್‌ಪಾರಾ ಜಿಲ್ಲಾ ಪೊಲೀಸರ ತಂಡವು ವಿವಿಧ ಭಾಗಗಳಲ್ಲಿ ತಪಾಸಣೆಯನ್ನು ಸ್ಥಾಪಿಸಿತು.  ಪೈಕನ್ ಪ್ರದೇಶದಲ್ಲಿ ಎರಡು ವಾಹನಗಳನ್ನು ತಡೆದು ಶೋಧ ಮಾಡಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕ್ ಖರ್ಗೆ ಬಲಗೈ ಬಂಟ ಅರೆಸ್ಟ್..!
‘ಖಚಿತ ಮಾಹಿತಿ ಆಧಾರದ ಮೇಲೆ ಪೈಕಾನ್ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 5,075 ಕೆಮ್ಮಿನ ಸಿರಪ್ ಬಾಟಲಿಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಕೆಮ್ಮಿನ ಸಿರಪ್ ಸುಮಾರು 25 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.
Assam | Police seized cough syrup bottles worth Rs 25 lakhs in Goalpara district. 3 persons arrested in connection with the case.
We intercepted two vehicles in the Paikan area and during the search, we found 5075 cough syrup bottles from one vehicle. 3 arrested in the case. The…pic.twitter.com/Tmm9Q9LEcS
— ANI (@ANI)May 22, 2023

ಅಸ್ಸಾಂ ಪೊಲೀಸರ ಪ್ರಕಾರ, ಕೆಮ್ಮಿನ ಸಿರಪ್ ಬಾಟಲಿಗಳನ್ನು ತುಂಬಿದ್ದ ಪಿಕಪ್ ವ್ಯಾನ್‌ ಮೇಘಾಲಯದ ತುರಾ ಕಡೆಗೆ ಹೋಗುತ್ತಿತ್ತು. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಕಾಲುವೆಯ ನೀರಿನಲ್ಲಿ ಆಟವಾಡುವಾಗ ಆಯ ತಪ್ಪಿ ಬಿದ್ದು ಮೂವರ ದುರಂತ ಅಂತ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
