ನವದೆಹಲಿ:ಇದು ಲಾಕ್​ಡೌನ್​ ಸಮಯ. ಲಾಕ್​ಡೌನ್​ಗಿಂತ ಮುಂಚೆ ಎಲ್ಲೆಲ್ಲೋ ಇದ್ದವರು ತಮ್ಮೂರಿಗೆ ಬರಲಾರದೇ ಪರದಾಡುವ ಅವಧಿಯಿದು. ಮನೆಯಲ್ಲಿ ಒಂಟಿ ವೃದ್ಧರಿದ್ದರೂ, ಅನಾರೋಗ್ಯಪೀಡಿತರಿದ್ದರೂ ಊರು ಬಿಟ್ಟು ಹೋದವರು ವಾಹನವಿಲ್ಲದೇ ವಾಪಸ್​ ಬರಲಾಗದೇ ಪರದಾಡುವ ಸಮಯವಿದು.
ಹೌದು. ಇಂಥದ್ದೇ ಒಂದು ಪ್ರಸಂಗ ಎದುರಾದದ್ದು ಅಸ್ಸಾಂನ 78 ವರ್ಷದ ವೃದ್ಧ ಕೆ.ಪಿ.ಅಗರವಾಲ್​ ಅವರಿಗೆ. ಅವರ ಹೆಂಡತಿ ಮತ್ತು ಮಕ್ಕಳು ಲಾಕ್​ಡೌನ್​ ಘೋಷಣೆಯಾಗುವ ಮೊದಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅವರು ಅಲ್ಲಿಯೇ ಇದ್ದಾಗ ದಿಢೀರ್​ ಲಾಕ್​ಡೌನ್​ ಘೋಷಣೆಯಾಯಿತು. ಇದರಿಂದ ವಾಪಸ್​ ಊರಿಗೆ ಬರಲು ಆಗಲಿಲ್ಲ.
ಇದನ್ನೂ ಓದಿ:ಹೆಂಡಕ್ಕೆ ಡಬಲ್​ ರೇಟ್​- ಡೋಂಟ್​ ಕೇರ್​, ನಮ್ದು ದೇಶ ಸೇವೆ ಎಂದರು ಮದ್ಯ ಪ್ರೇಮಿಗಳು!
ಮನೆಯಲ್ಲಿ ಅಗರವಾಲ್​ ಒಬ್ಬರೇ ಇರುವ ಸ್ಥಿತಿ. ಲಾಕ್​ಡೌನ್​ ಮುಗಿಯುವ ಸಮಯವನ್ನೇ ಕಾಯುತ್ತಿದ್ದರು ಇವರು. ಒಂಟಿಯಾಗಿದ್ದು ಸೋತು ಹೋಗಿದ್ದರೂ ಏನೂ ಮಾಡದ ಅಸಹಾಯಕರಾಗಿದ್ದರು.
ಮೇ 4. ಇವರು 78 ವರ್ಷ ಮುಗಿಸಿ 79ನೇ ವರ್ಷಕ್ಕೆ ಕಾಲಿಡುವ ದಿನ. ಮನೆಯಲ್ಲಿ ಯಾರೂ ಇರಲಿಲ್ಲ. ತನ್ನವರನ್ನು ನೆನೆದು ಅಗರವಾಲ್​ ಅವರು ಭಾವುಕರಾಗಿ ಮನೆಯ ಹೊರಕ್ಕೆ ಕಾಲಿಟ್ಟಾಗ ಅಲ್ಲಿ ಕೆಲವು ಪೊಲೀಸರು ನಿಂತಿದ್ದರು. ಅವರು ಪೋಸ್ಟರ್​ ಹಿಡಿದುಕೊಂಡಿದ್ದರು. ಅದರಲ್ಲಿ “ನಾನು ನಿಮ್ಮ ಮಗಳು” “ನಾನು ನಿಮ್ಮ ಮಗ” ಎಂದು ಬರೆಯಲಾಗಿತ್ತು!‘
ಇದನ್ನೂ ಓದಿ:ಚೀನಾ ಕೊಟ್ಟಿದೆ ಇನ್ನೊಂದು ಆಘಾತ… ಭಾರತಕ್ಕೂ ಕಾಲಿಟ್ಟಿದೆ ಈ ಜ್ವರ!
ಇದೇನಿದು ಎಂದು ನೋಡುವಷ್ಟರಲ್ಲಿಯೇ ಅಲ್ಲಿದ್ದ ಪೊಲೀಸ್​ ಅಜ್ಜನ ತಲೆಗೆ ಹುಟ್ಟುಹಬ್ಬದ ಕ್ಯಾಪ್​ ಹಾಕಿ, ಅವರಿಗೆ ಕೇಕ್​ ತಿನ್ನಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು! ಈ ಅನಿರೀಕ್ಷಿತ ಘಟನೆಯಿಂದ ಭಾವುಕರಾದ ಅಗರವಾಲ್​ ಅವರು ಕಣ್ಣೀರಾದರು.
ಇವರು ಮನೆಯಲ್ಲಿ ಒಬ್ಬರೇ ಇದ್ದುದು ಹಾಗೂ ಇವರ ಹುಟ್ಟುಹಬ್ಬದ ಬಗ್ಗೆ ಅಕ್ಕಪಕ್ಕದ ಮನೆಯವರಿಂದ ತಿಳಿದುಕೊಂಡಿದ್ದ ಪೊಲೀಸರು ಹೀಗೊಂದು ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದರು.
ಇದನ್ನೂ ಓದಿ:ಇನ್ನೊಂದು ವರ್ಷ ಕರೊನಾ ಹೊಸ ರೂಲ್ಸ್​: ಫಾಲೋ ಮಾಡದಿದ್ರೆ ಬೀಳತ್ತೆ ದಂಡ!
ಈ ಘಟನೆಯ ವೀಡಿಯೋ ವೈರಲ್​ ಆಗಿದ್ದು, ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಬಹು ಶ್ಲಾಘನೆ ವ್ಯಕ್ತವಾಗಿದೆ. ಸಾರ್ವಜನಿಕರ ಸೇವೆಯೇ ನಮ್ಮ ಧ್ಯೇಯವಾಗಿದ್ದು, ಲಾಕ್​ಡೌನ್​ ಅವಧಿಯಲ್ಲಿ ಎಲ್ಲರ ಹಿತವನ್ನೂ ನಾವು ಕಾಪಾಡುತ್ತೇವೆ ಎಂದಿದ್ದಾರೆ ಪೊಲೀಸರು(ಏಜೆನ್ಸೀಸ್​)
A beautiful and moving surprise!
When@nagaonpoliceknocked the door of Shri KP Agarwal to wish him on his 78th Birthday, as his family members were not around due to the#Lockdown.
May today & all of your days be amazing.
Happy Birthday!!#MayThe4thBeWithYoupic.twitter.com/qVmNmIjzeF
— Assam Police (@assampolice)May 4, 2020

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × 1 =
Remember me
