ಗುವಾಹಟಿ:ಕಚ್ಚಾ ತೈಲ ಸೋರಿಕೆಯಿಂದಾಗಿ ನದಿ ನೀರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಆಸ್ಸಾಂನ ಗಿಬ್ರುಗ ಜಿಲ್ಲೆಯ ನಹರ್ಕಟಿಯಾ ಪಟ್ಟಣದಲ್ಲಿ ಕಂಡುಬಂದಿದೆ. ಎರಡು ದಿನಗಳ ಹಿಂದೆ ಡಿಹಿಂಗ್​ ನದಿಯ ಬಳಿ ತೈಲ ಸೋರಿಕೆಯಾಗಿದ್ದು, ಸತತ ಎರಡು ದಿನಗಳಿಂದ ಬೆಂಕಿ ಹೊತ್ತಿ ಉರಿಯುತ್ತಿರುವುದಾಗಿ ವರದಿಯಾಗಿದೆ.
ಡಿಹಿಂಗ್​ ನದಿಯ ಬಳಿ ಕಚ್ಚಾ ತೈಲದ ಪೈಪ್​ಪೈನ್​ ಇದೆ. ಈ ಕಚ್ಚಾ ತೈಲವು ಸೆಂಟ್ರಲ್​ ಟ್ಯಾಂಕ್​ ಒಂದರಲ್ಲಿ ಸಂಗ್ರಹವಾಗಬೇಕಿದ್ದು, ಅದರಲ್ಲಿ ಕೆಲವು ತಾಂತ್ರಿಕ ದೋಷ ಉಂಟಾದ ಹಿನ್ನೆಲೆ ಪೈಪ್​ಲೈನ್​ನಲ್ಲಿ ಒತ್ತಡ ಉಂಟಾಗಿ ಸ್ಫೋಟಗೊಂಡಿದೆ. ಜನವರಿ 31ರ ರಾತ್ರಿ ಈ ಘಟನೆ ನಡೆದಿದ್ದು ಮಾರನೇ ದಿನ ರಾತ್ರಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ನಂದಿಸಲು ವಿಶೇಷ ತಂಡವನ್ನು ಕಳುಹಿಸಲಾಗಿದ್ದು, ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಇಂದು ನದಿಯ ನೀರಿನಲ್ಲಿಯೂ ಸಹ ಬೆಂಕಿ ಹತ್ತಿಕೊಂಡಿದ್ದು, ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿರುವುದಾಗಿ ಆಯಿಲ್​ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ನದಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡಿರುವ ಅಧಿಕಾರಿಗಳು, ಬೆಂಕಿ ನಿಯಂತ್ರಣದಲ್ಲಿಯೇ ಇದೆ. ಆದರೆ ಇಂದು ನದಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಗ್ರಾಮಸ್ಥರೇ ಕಾರಣವಿದ್ದಿರಬಹುದು. ತೈಲ ಸೋರಿಕೆಯಾಗಿದೆ ಎಂದು ತಿಳಿದ ಯಾವುದೋ ಗ್ರಾಮಸ್ಥರೇ ನದಿಯಲ್ಲಿ ಬೆಂಕಿಯನ್ನು ಹಚ್ಚಿರಬೇಕು ಎಂದು ದೂರಿದ್ದಾರೆ.
ಎರಡು ದಿನಗಳಿಂದ ದಟ್ಟ ಹೊಗೆಯನ್ನು ಹೊರಸೂಸುತ್ತಿರುವ ಬೆಂಕಿಯಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಹೇಳಲಾಗಿದೆ. ಅಪಾರ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುತ್ತಿದ್ದು, ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
