ಗುವಾಹಟಿ:ಅಸ್ಸಾಂ ಸರ್ಕಾರವು ಅಕ್ಟೋಬರ್ 2 ರಿಂದ 1 ಲೀಟರ್‌ಗಿಂತ ಕಡಿಮೆ ಪ್ರಮಾಣ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಬಳಕೆಯನ್ನು ನಿಷೇಧಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ:ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?
ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮಾ ಮಾತನಾಡಿ, ” 1 ಲೀಟರ್‌ಗಿಂತ ಕಡಿಮೆ ಪ್ರಮಾಣ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಬಳಕೆಯನ್ನು ಹಾಗೂ ನೀರಿನ ಬಾಟಲಿಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಜತೆಗೆ 2024ರ ಅಕ್ಟೋಬರ್‌ನಿಂದ 2 ಲೀ.ಗಿಂತ ಕಡಿಮೆ ಪ್ರಮಾಣದ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಮಾರಾಟವನ್ನೂ ನಿಷೇಧಿಸಲು ನಿರ್ಧರಿಸಲಾಗಿದೆ ”ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:“ನಂದ ಲವ್ಸ ನಂದಿತಾ” ನಟಿಗೆ ಇದೆ ವಿಚಿತ್ರ ಕಾಯಿಲೆ; ನಿದ್ರೆ ಬರಲ್ಲ.. ವ್ಯಾಯಾಮ ಮಾಡುವಂತಿಲ್ಲ!
ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ಕಾಯ್ದೆ, 2021ರ ಅನ್ವಯ ಈ ನಿಯಮ ಜಾರಿಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಜತೆಗೆ, ರಾಜ್ಯದಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ಬಳಕೆಯನ್ನೂ ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಶರ್ಮಾ ಪ್ರಕಟಿಸಿದ್ದಾರೆ.
ಇದನ್ನೂ ಓದಿ:ಹೆಂಡತಿ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ತಿಳಿದ ನಂತರ ಮಗುವಿಗೆ ಜನ್ಮ ಕೊಟ್ಟ ಪತಿ!
ಮುಖ್ಯಮಂತ್ರಿರ್ ದಕ್ಷ ಪೋಹರ್ ಸೋನಿ/ಮುಖ್ಯಮಂತ್ರಿ ಸಂಚಯ್ ಪೋಹರ್ ಅಸೋನಿ ಅಡಿಯಲ್ಲಿ ಅಸ್ಸಾಂನ ಅಂದಾಜು 50 ಲಕ್ಷ ಕಡಿಮೆ ಬೆಲೆಯ ಮನೆಗಳಿಗೆ ₹ 130 ಕೋಟಿ ಅಂದಾಜು ವೆಚ್ಚದಲ್ಲಿ ನಾಲ್ಕು 9-ವ್ಯಾಟ್ ಎಲ್‌ಇಡಿ ಬಲ್ಬ್‌ಗಳನ್ನು ಉಚಿತವಾಗಿ ವಿತರಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.
ಟ್ರಾಫಿಕ್ ರೂಲ್ಸ್​​​ ಕಿರಿಕಿರಿಯಿಂದ ಬೈಕ್​​ನ ಅಂತ್ಯಕ್ರಿಯೆ ಮಾಡಿದ ಸವಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
