ಅಸ್ಸಾಂ:ಮುಸ್ಲಿಮರಂತೆ ಹಿಂದೂಗಳು ಬದಲಾಗಬೇಕು. ಸಣ್ಣ ವಯಸ್ಸಿನಲ್ಲೇ ಹಿಂದೂಗಳು ಮುಸ್ಲಿಮರಂತೆ ಮದುವೆಯಾಗಲು ಮುಂದಾಗಬೇಕು. ಆಗ ಮಾತ್ರ ಹಿಂದೂಗಳ ಜನಸಂಖ್ಯೆ ಹೆಚ್ಚಾಗಲು ಸಾಧ್ಯ ಎಂದು ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದರು. ಇವರ ಮಾತುಗಳು ವಿವಾದದ ಸ್ವರೂಪ ಪಡೆದುಕೊಂಡು, ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.
ಇದೀಗ ಬದ್ರುದ್ದೀನ್ ಅಜ್ಮಲ್ ತಾನಾಡಿರುವ ವಿವಾದದ ಮಾತಿಗೆ ಕ್ಷಮೆ ಕೇಳಿದ್ದಾರೆ. ನನಗೆ ಯಾರ ಭಾವನೆಗೂ ಧಕ್ಕೆ ತರುವ ಉದ್ಧೇಶವಿರಲಿಲ್ಲ ಎಂದು ಹೇಳಿದ್ದಾರೆ.
ಯಾವುದೇ ಧರ್ಮಕ್ಕೆ ನೋವುಂಟು ಮಾಡುವ ಉದ್ಧೇಶ ನನಗಿರಲಿಲ್ಲ. ಸಾರ್ವಜನಿಕ ವಲಯದಲ್ಲಿ ನಾನೊಬ್ಬ ಹಿರಿಯ ನಾಯಕನಾಗಿ ಜನರ ಭಾವನೆಗಳಿಗೆ ಗೌರವ ನೀಡಬೇಕಿತ್ತು. ಇದೀಗ ನನ್ನ ಮಾತಿನಿಂದ ನನಗೇ ನಾಚಿಕೆಯಾಗುತ್ತಿದೆ. ಈ ಹೇಳಿಕೆಯಿಂದ ನೋವಾದ ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
ಸರ್ಕಾರವು ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ನೀಡಿ ನ್ಯಾಯ ಒದಗಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿಕೊಂಡಿದ್ದಾರೆ.
ಬದ್ರುದ್ದೀನ್ ಅಜ್ಮಲ್ ಮುಸ್ಲಿಂಮರ ಜನಸಂಖ್ಯೆ ಹೆಚ್ಚಳದ ವಿಚಾರವಾಗಿ ಮಾತನಾಡುತ್ತಾ, ಹಿಂದೂಗಳು ಹೆತ್ತವರ ಒತ್ತಾಯಕ್ಕೆ 40 ವರ್ಷದ ನಂತರ ವಿವಾಹ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ಮುಸ್ಲಿಮರು ಸಣ್ಣ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಪೋಷಕರು ಒತ್ತಡಕ್ಕೆ ಒಳಗಾಗಿ 40 ವರ್ಷದ ನಂತರ ವಿವಾಹವಾದರೆ, ಅವರು ಮಕ್ಕಳನ್ನು ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಮುಂದುವರಿದು ಮಾತನಾಡುತ್ತಾ, ಫಲವತ್ತಾದ ಭೂಮಿಯಲ್ಲಿ ಬೀಜ ಬಿತ್ತಿದರೆ ಮಾತ್ರ ಉತ್ತಮ ಫಸಲು ಪಡೆಯಲು ಸಾಧ್ಯ ಎಂದು ಹೇಳಿಕೆ ನೀಡಿದ್ದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 12 =
Remember me
