ನವದೆಹಲಿ:ದೇಶಾದ್ಯಂತ ಕರೊನಾ ಹಾವಳಿ ಇಟ್ಟಿರುವ, ಸೋಂಕಿನ ಪ್ರಕರಣಗಳ ಸಂಖ್ಯೆ ಕೂಡ ತೀವ್ರಗತಿಯಲ್ಲಿ ಏರಿರುವ ನಡುವೆಯೇ ಐದು ರಾಜ್ಯಗಳ ಚುನಾವಣೆ ಘೋಷಣೆ ಆಗಿದ್ದು, ದಿನಾಂಕಗಳು ಕೂಡ ಪ್ರಕಟಗೊಂಡಿವೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರು ಉತ್ತರಪ್ರದೇಶ, ಪಂಜಾಬ್‌, ಉತ್ತರಖಂಡ, ಗೋವಾ, ಮಣಿಪುರ ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದರು.
ಉತ್ತರಪ್ರದೇಶದಲ್ಲಿ ಫೆ.10ರಿಂದ ಮಾ. 7ರವರೆಗೆ ಏಳು ಹಂತಗಳಲ್ಲಿ; ಪಂಜಾಬ್‌, ಉತ್ತರಖಂಡ, ಗೋವಾ ರಾಜ್ಯಗಳಲ್ಲಿ ಫೆ. 14ರಂದು ಹಾಗೂ ಮಣಿಪುರದಲ್ಲಿ ಫೆ. 27 ಮತ್ತು ಮಾ. 3ರಂದು ಚುನಾವಣೆ ನಡೆಯಲಿದೆ ಎಂದು ಅವರು ಘೋಷಿಸಿದರು.
ಜ. 15ರ ವರೆಗೂ ರಾಜಕೀಯ ಪಕ್ಷಗಳಿಗೆ ಭೌತಿಕ ಪ್ರಚಾರ, ರೋಡ್‌ಶೋಗಳಿಗೆ ಅವಕಾಶ ಇರುವುದಿಲ್ಲ. ನಂತರ ಆ ಸಮಯದ ಪರಿಸ್ಥಿತಿಗೆ ಅನುಗಣವಾಗಿ ಹೊಸ ಸೂಚನೆಗಳನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಎಲ್ಲ ಮತಗಟ್ಟೆಗಳಲ್ಲೂ ಇವಿಎಂ-ವಿವಿಪ್ಯಾಟ್‌ಗಳನ್ನು ಬಳಸಲಾಗುವುದು. ಸಾಕಷ್ಟು ಸಂಖ್ಯೆಯಲ್ಲಿ ಇವಿಎಂ-ವಿವಿಪ್ಯಾಟ್‌ ಯಂತ್ರಗಳ ವ್ಯವಸ್ಥೆಗೆ ಚುನಾವಣಾ ಆಯೋಗ ಈಗಾಗಲೇ ಕ್ರಮಕೈಗೊಂಡಿದೆ ಎಂದು ಅವರು ತಿಳಿಸಿದರು.
ಎಲ್ಲ ಚುನಾವಣಾಧಿಕಾರಿ ಹಾಗೂ ಉದ್ಯೋಗಿಗಳನ್ನು ಮುಂಚೂಣಿ ಕೆಲಸಗಾರರು ಎಂದು ಪರಿಗಣಿಸಿ, ಎಲ್ಲ ಅರ್ಹ ಅಧಿಕಾರಿಗಳಿಗೆ ಮುನ್ನೆಚ್ಚರಿಕೆಯ ಡೋಸ್‌ ಕೂಡ ಕೊಡಿಸಲಾಗುವುದು ಎಂದರು.
ರಾಜಕೀಯ ಪಕ್ಷಗಳು ಅಭ್ಯರ್ಥಿಯ ವಿವರ, ಆತನ ವಿರುದ್ಧ ಬಾಕಿ ಇರುವ ಅಪರಾಧ ಮೊಕದ್ದಮೆಯ ಮಾಹಿತಿ ಪ್ರಕಟಿಸುವ ಜತೆಗೆ ಆತನನ್ನು ಆಯ್ಕೆ ಮಾಡಿದ್ದಕ್ಕೆ ಕಾರಣವನ್ನೂ ತಂತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು ಎಂದೂ ಹೇಳಿದ್ದಾರೆ.
ಚುನಾವಣಾ ಅಕ್ರಮಗಳ ಕುರಿತಂತೆ ಸಾರ್ವಜನಿಕರು ಸಿವಿಜಿಲ್‌ ಅಪ್ಲಿಕೇಷನ್‌ ಮೂಲಕ ತಿಳಿಸಬಹುದು. ಎಲ್ಲೇ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದರೆ, ಅಕ್ರಮ ನಡೆದರೆ ದೂರು ನೀಡಿದ 100 ನಿಮಿಷಗಳಲ್ಲಿ ಅಧಿಕಾರಿಗಳು ಸಂಬಂಧಿತ ಸ್ಥಳದಲ್ಲಿ ಇರುತ್ತಾರೆ ಎಂಬ ಭರವಸೆಯನ್ನೂ ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + ten =
Remember me
