ಅಹಮದಾಬಾದ್:ಸಮೃದ್ಧ ನೈಸರ್ಗಿಕ ಸಂಪನ್ಮೂಲ, ಅಪಾರ ಮಾನವ ಸಂಪನ್ಮೂಲ, ಉದ್ಯಮಶೀಲತೆ, ಕೃಷಿ, ಉತ್ಪಾದನಾ ಕ್ಷೇತ್ರ ಮತ್ತು ಸೇವಾ ಕ್ಷೇತ್ರಗಳನ್ನು ದೇಶದ ಪರಿವರ್ತನೆಗೆ ಉಪಯೋಗಿಸಿಕೊಳ್ಳುವಲ್ಲಿ ಅಪಾರವಾದ ಅವಕಾಶ ಮತ್ತು ಸಾಮರ್ಥ್ಯವನ್ನು ಭಾರತ ಹೊಂದಿದೆ. ಇದರ ಮೂಲಕ ದೇಶದ ಸಮಗ್ರ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಆರ್​ಎಸ್​ಎಸ್ ಅಖಿಲ ಭಾರತ ಪ್ರತಿನಿಧಿ ಸಭಾದ (ಎಬಿಪಿಎಸ್) ಬೈಠಕ್​ನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನಿರುದ್ಯೋಗದ ಸವಾಲು ಎದುರಿಸುವ, ಅದಕ್ಕಾಗಿ ಹೊಸ ಅವಕಾಶಗಳನ್ನು ಸೃಜಿಸುವ ಕೆಲಸಕ್ಕೆ ಸಮಾಜವೇ ಕ್ರಿಯಾಶಿಲವಾಗಿ ತನ್ನ ಪಾತ್ರವನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಉತ್ಪಾದನಾ ಕ್ಷೇತ್ರವು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ಆಮದಿನ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಮಹಿಳೆ ಯರು, ಗ್ರಾಮೀಣ ಜನರು ಮತ್ತು ವನವಾಸಿ ಭಾರತೀಯರಲ್ಲೂ ಸ್ವಾವಲಂಬಿತನ ಜಾಗೃತಿ ಮೂಡಿಸಬೇಕಿದೆ. ಅತಿ ಸಣ್ಣ ಮತ್ತು ಸಣ್ಣ ಹಾಗೂ ಕೃಷಿ ಆಧಾರಿತ ಕೈಗಾರಿಕೋದ್ಯಮಗಳಿಗೆ ಒತ್ತು ನೀಡಲು ಎಬಿಪಿಎಸ್ ಹೇಳಿದೆ.
ಭಾರತೀಯ ಮೂಲದ ಆರ್ಥಿಕ ವ್ಯವಸ್ಥೆಯ ಮಾದರಿಯನ್ನು ಅಂದರೆ ಮಾನವ ಕೇಂದ್ರಿತ, ಕಾರ್ವಿುಕ ಕೇಂದ್ರಿತ, ಪ್ರಕೃತಿ ಸ್ನೇಹಿ ಮತ್ತು ವಿಕೇಂದ್ರೀಕರಣಕ್ಕೆ ಒತ್ತು ನೀಡಬೇಕು. ಸಮಾಜದ ಉಪಯೋಗಗಳನ್ನು ನ್ಯಾಯಸಮ್ಮತವಾದ ರೀತಿಯಲ್ಲಿ ವಿವಿಧ ಸ್ಥರಗಳಿಗೆ ಒದಗಿಸುವ ನಿಟ್ಟಿನಲ್ಲಿ, ಗ್ರಾಮಾಧಾರಿತ ಅರ್ಥವ್ಯವಸ್ಥೆಗೆ ಸಲ್ಲಬೇಕಾದ ಭಾಗವು ಸಲ್ಲಿಕೆ ಆಗಬೇಕು ಎಂದು ಎಬಿಪಿಎಸ್ ಆಗ್ರಹಿಸಿದೆ. ಒಟ್ಟಾರೆ ಆರ್ಥಿಕ ವ್ಯವಸ್ಥೆಯಲ್ಲಿ ಅಸಂಘಟಿತ ಕಾರ್ವಿುಕ ವಲಯ, ಮಹಿಳೆಯರು ಭಾಗವಹಿಸುವಿಕೆಯು ಹೆಚ್ಚಾಗಬೇಕಿದೆ. ಸಾಮಾಜಿಕ ಜೀವನದ ಮೌಲ್ಯಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮತ್ತು ಸಾಫ್ಟ್ ಸ್ಕಿಲ್​ಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಹೆಚ್ಚಾಗಬೇಕಿದೆ ಎಂದು ಸಭಾ ಸಲಹೆ ನೀಡಿದೆ. ಆರ್ಥಿಕ ಮತ್ತು ತಾಂತ್ರಿಕ ಸನ್ನಿವೇಶಗಳ ಸವಾಲುಗಳನ್ನು ಎದುರಿಸಲು ನವ ನವೀನ ಮಾರ್ಗಗಳನ್ನು ಹುಡುಕುವ ಅಗತ್ಯವಿದೆ. ಡಿಜಿಟಲ್ ಆರ್ಥಿಕತೆ ಮತ್ತು ರಫ್ತು ಸಾಧ್ಯತೆಗಳನ್ನು ಅನ್ವೇಶಿಸುವ ಮೂಲಕ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ಎಬಿಪಿಎಸ್ ಅಭಿಪ್ರಾಯಿಸುತ್ತದೆ. ಎಬಿಪಿಎಸ್​ನಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಆರ್​ಎಸ್​ಎಸ್​ನ 1,252 ಪದಾಧಿಕಾರಿಗಳು ಭಾಗಿಯಾಗಿದ್ದರು.
ಭಾರತಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಈಗಲೂ ಕೆಲವು ತಪ್ಪು ಗ್ರಹಿಕೆಗಳು ಇವೆ. ಇವು ಬ್ರಿಟಿಷರ ಕಾಲದಿಂದಲೂ ಹಾಗೆ ಉಳಿದುಕೊಂಡು ಬಂದಿವೆ. ಈ ತಪು್ಪಗಳನ್ನು ಹೋಗಲಾಡಿಸಿ ಸತ್ಯಾಧರಿತ ಭವ್ಯ ಭಾರತದ ದರ್ಶನವನ್ನು ಮಾಡಿಸಬೇಕಿದೆ. ದೇಶದ ನಿಜಸ್ವರೂಪ ಅನಾವರಣವಾಗಬೇಕಿದೆ. ಭಾರತಕ್ಕೆ ಸಂಬಂಧಿಸಿದ ವಿಷಯಗಳು, ಹಿಂದು ಸಮುದಾಯ, ದೇಶದ ಚರಿತ್ರೆ, ಸಂಸ್ಕೃತಿ, ಜೀವನ ವಿಧಾನಗಳನ್ನು ಸರಿಯಾಗಿ ತಿಳಿಸಿಕೊಡಬೇಕಿದೆ.
|ದತ್ತಾತ್ರೇಯ ಹೊಸಬಾಳೆಆರ್​ಎಸ್​ಎಸ್​ನ ಸಹಕಾರ್ಯವಾಹ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
