ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ನಿಗೂಢ ಸಾವಿಗೆ ಡ್ರಗ್ಸ್ ದಂಧೆಯ ಸಂಬಂಧವಿದೆಯೇ ಎಂದು ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಇದೀಗ ಸಹಾಯಕ ನಿರ್ದೇಶಕ ರಿಷಿಕೇಶ್ ಪವಾರ್​ನನ್ನು ಬಂಧಿಸಿದೆ. ಸುಶಾಂತ್ ಸ್ನೇಹಿತರಾಗಿದ್ದ ಪವಾರ್, ತನಿಖೆಯಲ್ಲಿ ಹೆಸರು ಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ನಾಪತ್ತೆಯಾಗಿದ್ದರು.
2020ರ ಜೂನ್ 14 ರಂದು ಸುಶಾಂತ್ ಸಿಂಗ್, ತಮ್ಮ ಮುಂಬೈ ನಿವಾಸದಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವಿಗೀಡಾಗಿದ್ದರು. ಸೆಪ್ಟೆಂಬರ್​ನಲ್ಲಿ ಸುಶಾಂತ್​ನ ಅಡಿಗೆಯವನನ್ನು ವಿಚಾರಣೆ ಮಾಡುವಾಗ ಪವಾರ್ ಹೆಸರು ಹೊರಬಿದ್ದಿತ್ತು.
ಇದನ್ನೂ ಓದಿ:ತಳ್ಳುಗಾಡಿಯಲ್ಲಿ ಬೈಕ್ ಶವಯಾತ್ರೆ
ತನಿಖೆಯ ಹಿನ್ನೆಲೆಯಲ್ಲಿ ಬಂಧನದ ಸಾಧ್ಯತೆ ಕಂಡಾಗ, ಪವಾರ್ ನಿರೀಕ್ಷಿತ ಜಾಮೀನಿಗಾಗಿ ಮುಂಬೈ ಸೆಷನ್ಸ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ನ್ಯಾಯಾಲಯ ಜಾಮೀನು ನಿರಾಕರಿಸಿದ ಮೇಲೆ ಪೊಲೀಸರು ಚೆಂಬೂರ್​ನಲ್ಲಿರುವ ಪವಾರ್​ ಮನೆಗೆ ದಾಳಿ ಇಟ್ಟಾಗ, ನಾಪತ್ತೆಯಾಗಿದ್ದರು. ಪವಾರ್​ನ ಕೆಲವು ಗ್ಯಾಜೆಟ್​ಗಳನ್ನು ವಶಪಡಿಸಿಕೊಂಡು ಹುಡುಕಾಟ ನಡೆಸಿದ್ದ ಪೊಲೀಸರು ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಶಾಂತ್ ಸಿಂಗ್​ನೊಂದಿಗೆ ಕೆಲಸ ಮಾಡುವಾಗ ಪವಾರ್ ಅವನಿಗೆ ಡ್ರಗ್ಸ್​ ಪೂರೈಸುತ್ತಿದ್ದರೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಪೊಲೀಸರು ಈವರೆಗೂ 29 ಜನರನ್ನು ಬಂಧಿಸಿದ್ದಾರೆ. ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸೋದರ ಶೋವಿಕ್​ರನ್ನು ಕೂಡ ಬಂಧಿಸಲಾಗಿದ್ದು, ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.(ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
