| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಬಾಹ್ಯಾಕಾಶಕ್ಕೆ ಉಪಗ್ರಹ ಉಡಾವಣೆ ಮಾಡುವ ಕೈಗಳು ಪಂಚಾಂಗ ಹಿಡಿದು ಅಂತರಿಕ್ಷದ ರಹಸ್ಯ, ಸ್ವಾರಸ್ಯಗಳನ್ನು ಭೇದಿಸಿ, ಗ್ರಹಗತಿಗಳ ಜಾಡು ಅರಿಯಲು ಸಾಹಸ ನಡೆಸುವ ಅಚ್ಚರಿಯ ಪ್ರಯತ್ನವೊಂದು ಸದ್ದಿಲ್ಲದೇ ನಡೆದಿದೆ!
ಜ್ಯೋತಿಷದ ಬಗ್ಗೆ ಸಮಾಜದಲ್ಲಿ ಮೂರು ಬಗೆಯ ಅಭಿಪ್ರಾಯ ಗುರುತಿಸಬಹುದು. ಪೂರ್ಣ ನಂಬುವವರು.. ಮೂಗು ಮುರಿಯುವವರು ಹಾಗೂ ಈ ಎರಡೂ ಅಭಿಪ್ರಾಯದಿಂದ ದೂರ ಇರುವ ಇನ್ನೊಂದು ವರ್ಗ… ಈ ಜ್ಯೋತಿಷ ನಂಬುವ ವರ್ಗದಲ್ಲೂ ಬಗೆಗಳಿವೆ. ಕುತೂಹಲಕ್ಕಾಗಿ ಕಲಿಯುವವರು.. ವೃತ್ತಿಯಾಗಿ ಪರಿಗಣಿಸುವವರು ಹಾಗೂ ಸಂಶೋಧನೆ ಮಾಡುವವರು. ಈ ಕೊನೆಯ ವರ್ಗಕ್ಕೆ ಸೇರಿದ ಇಸ್ರೋದ ಮೂವರು ವಿಜ್ಞಾನಿಗಳು ಕಳೆದ ನಾಲ್ಕು ವರ್ಷಗಳಿಂದ ಜ್ಯೋತಿಷ ಶಾಸ್ತ್ರ ಅಧ್ಯಯನದಲ್ಲಿ ತೊಡಗಿದ್ದಾರೆ!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿರುವ ಅನೂಪ್, ಶ್ರೀವಿದ್ಯಾ ಹಾಗೂ ಪಿ. ವಿಜಯಶ್ರೀ ಜ್ಯೋತಿಷ ಕಲಿಕಾ ವಿದ್ಯಾರ್ಥಿಗಳಾಗಿದ್ದಾರೆ. ಈ ಮೂವರು ಹಲಸೂರಿನ ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಇರುವ ಆದಿತ್ಯ ಜ್ಯೋತಿರ್ವಿಜ್ಞಾನ ಶಾಲೆಯಲ್ಲಿ ಕಲಿಕೆಯಲ್ಲಿ ತೊಡಗಿದ್ದಾರೆ. ಪ್ರತಿ ಭಾನುವಾರ ನಾಲ್ಕು ತಾಸು ಕಲಿಕೆಗೆ ಮೀಸಲಿಡುತ್ತಿದ್ದಾರೆ.
ವೈಜ್ಞಾನಿಕ ದೃಷ್ಟಿಕೋನದಲ್ಲಿ ತಮ್ಮಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರ ಪಡೆದá-ಕೊಂಡು ಕಲಿಕೆ ಮುಂದುವರಿಸಿದ್ದಾರೆ. ಸಮಾಜದಲ್ಲಿ ಜ್ಯೋತಿಷದ ಬಗ್ಗೆ ಇರುವ ನಂಬಿಕೆ, ಅಪನಂಬಿಕೆ, ಟೀಕೆ-ಟಿಪ್ಪಣಿಗಳ ಗೊಡವೆಯಿಲ್ಲದೇ ತಮ್ಮದೇ ದೃಷ್ಟಿಕೋನದಲ್ಲಿ ವ್ಯಾಸಂಗ ನಡೆಸಿದ್ದಾರೆ.
ನಾವು 3-4 ವರ್ಷದಿಂದ ಕಲಿಯುತ್ತಿದ್ದೇವೆ. ಇದರ ವ್ಯಾಪ್ತಿ, ವಿಸ್ತಾರ ಅಗಾಧ. ನಮ್ಮ ಆಸಕ್ತಿ ಹೆಚ್ಚಾಗುತ್ತಲೇ ಇದೆ. ಅನೇಕ ಸಂಗತಿಗಳು ನಮ್ಮನ್ನು ಅಚ್ಚರಿಗೆ ದೂಡಿವೆ ಎಂದು ತಾವು ಸಾಗಿ ಬಂದ ದಾರಿಯ ಕುರಿತು ಹೇಳುತ್ತಾರೆ ಚಂದ್ರಯಾನ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಇಸ್ರೋ ಹಿರಿಯ ವಿಜ್ಞಾನಿ ವಿಜಯಶ್ರೀ. ನಮ್ಮ ವೃತ್ತಿಯಲ್ಲಿ ಕಕ್ಷೆಗೆ ಸಂಬಂಧಿಸಿದ, ಅಲ್ಲಿಗೆ ಉಪಗ್ರಹ ಉಡಾವಣೆ, ಉಡಾವಣಾ ವಾಹನಕ್ಕೆ ಸಂಬಂಧಿಸಿದ ಸಂಶೋಧನೆ, ಅಧ್ಯಯನ, ಚಟುವಟಿಕೆಗಳು ನಡೆಯುತ್ತವೆ. ಅದೊಂದು ತಾಂತ್ರಿಕ ಚಟುವಟಿಕೆ. ಆದರೆ, ಜ್ಯೋತಿಷದ ವ್ಯಾಪ್ತಿ ದೊಡ್ಡದು. ಇಲ್ಲಿ ಅನೇಕ ಸಂಗತಿ ಕಲಿತಿದ್ದು, ಅರಿಯುವುದು ಸಾಕಷ್ಟಿದೆ ಎನ್ನುತ್ತಾರೆ.
ಇದನ್ನೂ ಓದಿ:ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ: ‘ಇದು ಬ್ರ್ಯಾಂಡಿಂಗ್ ಅಲ್ಲ, ಬಾಂಡಿಂಗ್ ಇವೆಂಟ್’: ಪ್ರಧಾನಿ ಮೋದಿ
ಚಂದ್ರಯಾನಕ್ಕೆ ಮುನ್ನ ವಿಜ್ಞಾನಿಗಳ ತಂಡ ತಿರುಪತಿಯಲ್ಲಿ ಪೂಜೆ ಸಲ್ಲಿಸಿದ್ದು ಸಾಕಷ್ಟು ಚರ್ಚೆಯಾಯಿತು, ಪರ-ವಿರೋಧವೂ ವ್ಯಕ್ತವಾಯಿತು. ಇದರ ಬಗ್ಗೆಯೂ ವಿಜ್ಞಾನಿಗಳ ತಂಡ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಳ್ಳೆಯ ಉದ್ದೇಶ ಈಡೇರಲು ಮುಹೂರ್ತ ತುಂಬ ಮುಖ್ಯವಾಗುತ್ತದೆ. ಅನೇಕರಿಗೆ ನಂಬಿಕೆ ಒಳಗಿರುತ್ತದೆ, ಹೇಳಿಕೊಳ್ಳಲು ಮುಜುಗರ ಎನಿಸಬಹುದು. ನಮ್ಮಲ್ಲಿ ಪೂಜೆ ಮಾಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಬಂದಿದೆ. ಇಂದಿಗೂ ಮುಂದುವರಿದಿದೆ. ಅದು ನಮ್ಮ ನಂಬಿಕೆ ಎನ್ನುವುದು ಅವರ ಅಭಿಪ್ರಾಯ.
ಮಾರ್ಗದರ್ಶಕರು ಹೇಳೋದೇನು?: ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಹೊಂದಿರುವ ಆದಿತ್ಯ ಜ್ಯೋತಿರ್ವಿಜ್ಞಾನ ಶಾಲೆಗೆ ಪ್ರತಿ ಭಾನುವಾರ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಭಾನುವಾರದ ವಿಶ್ರಾಂತಿ ಬದಿಗಿಟ್ಟು, ಕೌಟುಂಬಿಕ ಚಟುವಟಿಕೆಗಳ ನಡುವೆಯೂ ಸಮಯ ಹೊಂದಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಹಾಜರಾಗಿ ಸಂಜೆ 6 ಗಂಟೆವರೆಗೂ ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗುತ್ತಾರೆ. ಈ ಪ್ರಕ್ರಿಯೆ ಕಳೆದ 4 ವರ್ಷದಿಂದಲೂ ನಡೆದಿದೆ ಎಂದು ಕೇಂದ್ರದ ಮುಖ್ಯಸ್ಥ ಗಜೇಂದ್ರ ವಿಜಯವಾಣಿಗೆ ವಿವರಿಸಿದರು.
ಚಂದ್ರಯಾನ ಅವಲೋಕನ: ಇಸ್ರೋದಲ್ಲಿ ಚಂದ್ರಯಾನದ ಚಟುವಟಿಕೆ ಆರಂಭವಾಗುತ್ತಿದ್ದಂತೆ ನಮ್ಮ ಕೇಂದ್ರದಲ್ಲಿ ಜ್ಯೋತಿಷ ಆಧಾರದಲ್ಲಿ ಅವಲೋಕನ ನಡೆಸಲಾಯಿತು. ವಿಜ್ಞಾನಿಗಳು ತಮ್ಮಲ್ಲಿನ ಅನೇಕ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಕಂಡುಕೊಂಡರು. ಚಂದ್ರಯಾನ ಲಾಂಚಿಂಗ್ ಸಮಯ ಬಂದಾಗ, ಮಹೂರ್ತದ ಡೇಟ್ ತಂದು, ಯಾವ ರೀತಿ ಅನುಕೂಲಕರ ಎಂಬುದನ್ನು ಇಲ್ಲಿ ಚರ್ಚೆ ಮಾಡಲಾಗಿತ್ತು. ಉಡಾವಣೆಗೆ ಅಡೆತಡೆ ಬರಲಿದೆಯೇ? ಪ್ರಯಾಣಕ್ಕೆ ಅಡಚಣೆಯಾಗುವುದೇ? ಲ್ಯಾಂಡಿಂಗ್ ಸರಿಯಾಗಿ ಆಗಲಿದೆಯೇ ಎಂದು ಚರ್ಚೆ ಮಾಡುತ್ತಾರೆ. ಸಂಬಂಧಪಟ್ಟ ಮಹೂರ್ತ ಕುಂಡಲಿ ಹಾಕಿ ತಾಂತ್ರಿಕ ಸಮಸ್ಯೆ ಯಾವುದೂ ಬರುವುದಿಲ್ಲ ಎಂದು ಅಂದೇ ತಿಳಿಸಲಾಗಿತ್ತು. ನವಾಂಶ ಕುಂಡಲಿ, ಷಷ್ಠಿ ಅಂಶ (60ಭಾಗ ಮಾಡುವುದು) ಸೂಕ್ಷ್ಮವಾಗಿ ಕಂಡು ಹಿಡಿದು, ವಿಶ್ವಾದ್ಯಂತ ಭಾರತಕ್ಕೆ ಹೆಸರು ಬರಲಿದೆ ಎಂಬ ಸಂಗತಿ ಆರಂಭದಲ್ಲೇ ತಿಳಿಸಲಾಗಿತ್ತು ಎಂದು ಗಜೇಂದ್ರ ನೆನಪಿಸಿಕೊಳ್ಳುತ್ತಾರೆ.
ಜ್ಯೋತಿಷ ತರಗತಿಯಲ್ಲಿ ವಿಜ್ಞಾನಿಗಳು ಏನು ಕಲಿಯುತ್ತಾರೆ? ಕಲಿಕೆಗೆ ಯಾವ ಗ್ರಂಥ ಅನುಸರಿಸುತ್ತಾರೆ? ಕಲಿಕೆ ವಿಧಾನ ಹೇಗೆ ಎಂಬ ಕುತೂಹಲ ಸಹಜ. ಆರ್ಯಭಟ, ಸೂರ್ಯ ಸಿದ್ಧಾಂತ, ವರಾಹ ಮಿಹಿರರ ಬೃಹತ್ ಸಂಹಿತೆ, ಬೃಹತ್ ಜಾತಕ, ಭೃಗುಸಂಹಿತೆ ಸೇರಿದಂತೆ ಅನೇಕ ನಾಡಿ ಗ್ರಂಥಗಳನ್ನೇ ಆಧಾರವಾಗಿಟ್ಟುಕೊಂಡು ಕಲಿಕೆ ನಡೆಯುತ್ತದೆ. ಹಂತಹಂತವಾಗಿ ಒಂದೊಂದೇ ವಿಷಯ ಕಲಿಸಲಾಗುತ್ತದೆ ಎಂದು ಗಜೇಂದ್ರ ವಿವರಿಸುತ್ತಾರೆ.
ವೃತ್ತಿಯಲ್ಲಿ ಕಕ್ಷೆ, ಲ್ಯಾಂಡರ್, ಉಡಾವಣಾ ವಾಹಕ… ವಿವಿಧ ಕೆಲಸ ಮಾಡುತ್ತೇವೆ. ಇಲ್ಲಿ ಗ್ರಹಗಳ ಚಲನೆ, ವರ್ತನೆ, ಪರಿಣಾಮದ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಕಲಿಯುವುದು ಅಗಾಧ ವಾಗಿದೆ. ಕಲಿಕೆಯಿಂದ ತಿಳಿವಳಿಕೆ ಹೆಚ್ಚಾಗಲಿದೆ.
| ಪಿ. ವಿಜಯಶ್ರೀ ಇಸ್ರೋ ಹಿರಿಯ ವಿಜ್ಞಾನಿ
ವಿಜ್ಞಾನಿಗಳು ಚಂದ್ರನ ಬಳಿಕ ಸೂರ್ಯ, ಶುಕ್ರನ ಕುರಿತು ಕಲಿಕೆಯಲ್ಲಿದ್ದಾರೆ. ಆರ್ಯಭಟ, ಸೂರ್ಯ ಸಿದ್ಧಾಂತ, ವರಾಹ ಮಿಹಿರ, ಪರಾಶರ, ಮಂತ್ರೇಶ್ವರ ಗ್ರಂಥಗಳೇ ಕಲಿಕೆಗೆ ಆಧಾರ.
| ಬಿ. ಗಜೇಂದ್ರ, ಆದಿತ್ಯ ಜ್ಯೋತಿಷ ಕಲಿಕಾ ಕೇಂದ್ರದ ಮುಖ್ಯಸ್ಥ
ಸೆ. 29ರಿಂದ ವಾಷಿಂಗ್ಟನ್​ನಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ: ಶ್ರೀ ಶ್ರೀ ರವಿಶಂಕರ್ ಮುಂದಾಳತ್ವದಲ್ಲಿ ಸಾಂಸ್ಕೃತಿಕ ಒಲಿಂಪಿಕ್ಸ್

ಕಾವೇರಿ ಬಿಕ್ಕಟ್ಟು: ರಾಜ್ಯ ಸರ್ಕಾರ ಸರ್ಕಾರದ ವಿರುದ್ಧ ಬಿಎಸ್​ವೈ, ಎಚ್​ಡಿಕೆ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − three =
Remember me
