ಮುಂಬೈ:“ಕಲ್ಕಿ 2898 ಎಡಿ” ಪ್ರೀ-ರಿಲೀಸ್ ಸಮಾರಂಭ ಮುಂಬೈನಲ್ಲಿ ನಡೆದಿದ್ದು, ಅಮಿತಾಬ್ ಬಚ್ಚನ್ ಅವರು ನಿರ್ಮಾಪಕ ಅಶ್ವಿನಿ ದತ್ ಅವರ ಪಾದಸ್ಪರ್ಶ ಮಾಡಿದದ ಅನಿರೀಕ್ಷಿತ ಘಟನೆ ಎಲ್ಲರನ್ನು ಬೆರಗುಗೊಳಿಸಿದೆ. ಅಶ್ವಿನಿ ದತ್ ಅವರನ್ನೂ ಅಚ್ಚರಿಗೊಳಿಸುವ ಈ ಗೌರವದ ಕಾರ್ಯವನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ. ಅವರು ಟ್ವಿಟ್ಟರ್‌ನಲ್ಲಿ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಬಿಗ್ ಬಿ ಬೇರೆ ಯಾವುದೇ ನಿರ್ಮಾಪಕರಿಗೆ ಇಂತಹ ಗೌರವ ಕೊಡುವುದನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಿಯಲ್ ಹೀರೋ ಅನ್ನಿಸಿಕೊಂಡ ಪವನ್ ಕಲ್ಯಾಣ್.. ವಿಧಾನಸಭೆಯಲ್ಲಿ ಕುತೂಹಲಕಾರಿ ದೃಶ್ಯ!
ಇದೀಗ, ಅಶ್ವಿನಿ ದತ್, ಹೃತ್ಪೂರ್ವಕ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮನಸ್ಪೂರ್ವಕ ಕೃತಜ್ಞತೆ ಮತ್ತು ನಮ್ರತೆಯನ್ನು ವ್ಯಕ್ತಪಡಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರದ್ದು ಮೇರು ವ್ಯಕ್ತಿತ್ವ. ಅವರು ಮತ್ತೊಬ್ಬರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುವ ಬಗೆ ಹಾಗೂ ಅವರ ಉದಾರ ಮನೋಭಾವಕ್ಕೆ ಇದು ಸಾಕ್ಷಿಯಾಗಿದೆ ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ:
ಬಚ್ಚನ್ ಅವರ ಶುದ್ಧತೆ ಮತ್ತು ಅಲೌಕಿಕ ಸ್ಪರ್ಶವನ್ನು ಶ್ಲಾಘಿಸುತ್ತಾ ಇದು ತಮ್ಮ ಶಾಶ್ವತ ಬಂಧದ ಪವಿತ್ರ ಲಾಂಛನ ಎಂದು ದತ್ ವಿವರಿಸಿದ್ದಾರೆ. ಅಮಿತಾಬ್​ ದಂತಕಥೆಯಿದ್ದಂತೆ, ಅವರಿಗೆ ನನ್ನ ಮನಸ್ಪೂರ್ವಕ ಧನ್ಯವಾದಗಳು ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.
ಎರಡು ಐಕಾನ್‌ಗಳ ನಡುವಿನ ಪರಸ್ಪರ ಗೌರವಿಸುವ ಈ ಹೃದಯಸ್ಪರ್ಶಿ ಮನೋಭಾವಕ್ಕೆ ನೆಟಿಜನ್‌ಗಳು ಸ್ಪಂದಿಸುತ್ತಿದ್ದಾರೆ. ಅವರು ಪರಸ್ಪರರ ಗೌರವ ಮತ್ತು ಅಭಿಮಾನವನ್ನು ಎತ್ತಿ ತೋರಿಸಿದ್ದಾರೆ. ಇಂತಹ ಗುಣ ಪ್ರತಿಯೊಬ್ಬರಿಗೂ ಅನುಕರಣೀಯ ಎಂದು ಅಭಿಪ್ರಾಯಪಡುತ್ತಿದ್ದಾರೆ.
“ಕಲ್ಕಿ 2898 ಎಡಿ” ಯ ಎರಡನೇ ಟ್ರೇಲರ್ ಇನ್ನಷ್ಟೇ ಬಿಡುಗಡೆಯಾಗಲಿದ್ದು, ಚಿತ್ರದ ಬಿಡುಗಡೆಯ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಎರಡು ದಂತಕಥೆಗಳ ನಡುವಿನ ಅಸಾಧಾರಣ ಬಾಂಧವ್ಯ ಚಿತ್ರದಲ್ಲಿ ಹೇಗೆ ಪ್ರದರ್ಶಿತಗೊಂಡಿದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಏಳು ಎಕ್ಸ್‌ಪ್ರೆಸ್ ರೈಲುಗಳ ಸಮಯ ಬದಲಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
