ನವದೆಹಲಿ:ದೇಶದಲ್ಲಿ ಕರೊನಾ ಲಸಿಕೆ ಲಭ್ಯವಾಗುತ್ತಲೇ ಮುಂಚೂಣಿಯಲ್ಲಿ ಸೇವೆ ನೀಡುತ್ತಿರುವ ಸುಮಾರು 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ವಿತರಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಶೇಕಡ 92 ಸರ್ಕಾರಿ ಆಸ್ಪತ್ರೆಗಳು ಹಾಗೂ ಎಲ್ಲ ರಾಜ್ಯಗಳ ಶೇಕಡ 55 ಖಾಸಗಿ ಆಸ್ಪತ್ರೆಗಳಿಂದ ಸಂಗ್ರಹಿಸಲಾದ ಡೇಟಾದ ಮೂಲಕ ಮೊದಲು ಲಸಿಕೆ ವಿತರಿಸಬೇಕಾದ 1 ಕೋಟಿ ಮುಂಚೂಣಿ ಆರೋಗ್ಯ ಕಾರ್ಯಕರ್ತರನ್ನು ಕೇಂದ್ರ ಗುರುತಿಸಿದೆ.
ಲಸಿಕೆಯನ್ನು ಸದ್ಯ ಅಸ್ತಿತ್ವದಲ್ಲಿರುವ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ (ಯುಐಪಿ) ತಂತ್ರಜ್ಞಾನ ಮತ್ತು ನೆಟ್​ವರ್ಕ್ ಬಳಸಿ ವಿತರಿಸಲಾಗುತ್ತದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ ಎಲ್ಲ ರಾಜ್ಯಗಳು ನೀಡಿರುವ ಮಾಹಿತಿಯನ್ನು ಆಧರಿಸಿ ಒಟ್ಟು 30 ಕೋಟಿ ಆದ್ಯತೆಯ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಕೇಂದ್ರ ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.
ಲಸಿಕೆ ವಿತರಣೆಗಾಗಿ ನಾಲ್ಕು ವಿಭಾಗಗಳನ್ನು ಮಾಡಿಕೊಳ್ಳಲಾಗಿದ್ದು, ಮೊದಲ ವಿಭಾಗದಲ್ಲಿ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತರನ್ನು ಒಳಗೊಂಡ ಸುಮಾರು 1 ಕೋಟಿ ಆರೋಗ್ಯ ಕಾರ್ಯಕರ್ತರಿರುತ್ತಾರೆ. ಎರಡನೇ ವಿಭಾಗದಲ್ಲಿ ಪುರಸಭೆ, ಮಹಾನಗರ ಪಾಲಿಕೆಯ ಕಾರ್ವಿುಕರು, ಪೊಲೀಸರು, ಸಶಸ್ತ್ರ ಪಡೆಗಳ ಸಿಬ್ಬಂದಿ ಸೇರಿ ಮುಂಚೂಣಿಯ ಸುಮಾರು 2 ಕೋಟಿ ಮಂದಿಯನ್ನು ಗುರುತಿಸಲಾಗುತ್ತಿದೆ. ಮೂರನೇ ವಿಭಾಗದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 26 ಕೋಟಿ ಮಂದಿಯಿದ್ದು, ನಾಲ್ಕನೇ ವಿಭಾಗದಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಆಯ್ಕೆ ಮಾಡಲಾಗುತ್ತದೆ. ಲಸಿಕೆ ಪಡೆದ ಪ್ರತಿಯೊಬ್ಬ ಫಲಾನುಭವಿಯನ್ನು ಗುರುತಿಸುವ ಸಲುವಾಗಿ ಆಧಾರ್ ಕಾರ್ಡ್ ಜತೆಗೆ ಅವರು ಲಸಿಕೆ ಪಡೆದ ಮಾಹಿತಿಗಳನ್ನು ಲಿಂಕ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆಧಾರ್ ಕಾರ್ಡ್ ಹೊಂದಿರದಿದ್ದವರು ಮತದಾರರ ಗುರುತಿನ ಚೀಟಿಯನ್ನೂ ಬಳಸಬಹುದಾಗಿದೆ. ದೇಶಾದ್ಯಂತ ಸದ್ಯ ಅಸ್ತಿತ್ವದಲ್ಲಿರುವ 28 ಸಾವಿರ ಸ್ಟೋರೇಜ್ ಪಾಯಿಂಟ್​ಗಳಿಗೆ ಹೆಚ್ಚುವರಿಯಾಗಿ 1 ಸಾವಿರ ಕೋಲ್ಡ್ ಸ್ಟೋರೇಜ್​ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಿರಿಂಜ್ ಪೂರೈಕೆಗೆ ಸಿದ್ಧ:ಕರೊನಾ ಲಸಿಕೆಯ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕಾಗಿ ಅಗತ್ಯವಾದ ಬಳಸಿ ಬಿಸಾಡಬಹುದಾದ ಅಪಾರ ಪ್ರಮಾಣದ ಸಿರಿಂಜ್ ಮತ್ತು ಸೂಜಿಗಳನ್ನು ಪೂರೈಸಲು ತಾವು ಸಿದ್ಧರಿದ್ದೇವೆ ಎಂದು ಅಖಿಲ ಭಾರತ ಸಿರಿಂಜ್ ಮತ್ತು ಸೂಜಿ ತಯಾರಕರ ಸಂಘ (ಎಐಎಸ್​ಎನ್​ಎಂಎ) ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದೆ. ಹೆಚ್ಚುವರಿಯಾಗಿ ಪ್ರತಿ ತಿಂಗಳು 35 ಕೋಟಿ ಸಿರಿಂಜ್​ಗಳನ್ನು ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಲಾಗಿದೆ.
ಪಾಸಿಟಿವಿಟಿ ದರ ಶೇ.4ಕ್ಕಿಂತ ಕಡಿಮೆ:ದೇಶದಲ್ಲಿ ಪ್ರತಿದಿನದ ಕರೊನಾ ಪಾಸಿಟಿವಿಟಿ ದರ ಶೇಕಡ 4ಕ್ಕಿಂತ ಕಡಿಮೆಯಾಗಿದೆ. ಈವರೆಗೆ 13.36 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಳೆದ 24 ತಾಸಿನಲ್ಲಿ 10.99 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶಾದ್ಯಂತ ಸದ್ಯ 2,134 ಲ್ಯಾಬ್​ಗಳಲ್ಲಿ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಕಳೆದ ನವೆಂಬರ್ 8ರಿಂದ ಪ್ರತಿದಿನ ವರದಿಯಾಗುವ ಹೊಸ ಪ್ರಕರಣಗಳ ಪ್ರಮಾಣ 50 ಸಾವಿರಕ್ಕಿಂತ ಕಡಿಮೆ ಇದ್ದು, ಸಾವಿನ ಪ್ರಮಾಣವೂ ಸರಾಸರಿ 500ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿ ಈವರೆಗೆ 91.94 ಲಕ್ಷ ಪ್ರಕರಣಗಳು ವರದಿಯಾಗಿದ್ದು, 1.34 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 86.18 ಲಕ್ಷ ಸೋಂಕಿತರು ಗುಣಮುಖರಾಗಿದ್ದು, ಇನ್ನೂ 4.39 ಲಕ್ಷ ಸಕ್ರಿಯ ಪ್ರಕರಣಗಳಿವೆ.
ಆರ್​ಟಿ-ಪಿಸಿಆರ್ ಪರೀಕ್ಷೆಗೆ ಗರಿಷ್ಠ ದರ:ಭಾರತದಾದ್ಯಂತ ಆರ್​ಟಿ-ಪಿಸಿಆರ್ ಪರೀಕ್ಷೆಗೆ ಗರಿಷ್ಠ ದರ ನಿಗದಿಪಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆರ್​ಟಿ-ಪಿಸಿಆರ್ ಪರೀಕ್ಷೆಗೆ ದೇಶಾದ್ಯಂತ -ಠಿ; 400 ಗರಿಷ್ಠ ದರ ನಿಗದಿಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಸದ್ಯ ವಿವಿಧ ರಾಜ್ಯಗಳಲ್ಲಿ ಈ ಪರೀಕ್ಷೆಗೆ -ಠಿ; 900ರಿಂದ 2,800ವರೆಗೆ ದರವಿದೆ.
ಲಸಿಕೆಯಿಂದ 9-12 ತಿಂಗಳು ರಕ್ಷಣೆ:ಕರೊನಾ ಲಸಿಕೆ ಜನರಿಗೆ ವೈರಸ್​ನಿಂದ 9 ತಿಂಗಳಿಂದ ಒಂದು ವರ್ಷದವರೆಗೆ ರಕ್ಷಣೆ ನೀಡಬಲ್ಲದು ಎಂದು ದೆಹಲಿಯ ಏಮ್್ಸ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ. ಜತೆಗೆ ಸೋಂಕು ಪಸರಿಸುವಿಕೆಯ ಸರಪಳಿಯನ್ನು ತುಂಡರಿಸಲು ಸಹಾಯ ಮಾಡುತ್ತದೆ. ಲಸಿಕೆ ಬಂದ ತಕ್ಷಣ ಕರೊನಾ ಸಂಪೂರ್ಣವಾಗಿ ನಾಶವಾಗುವುದಿಲ್ಲ. ನಂತರದ ದಿನಗಳಲ್ಲಿ ಇದು ಸೌಮ್ಯ ಗುಣಲಕ್ಷಣಗಳ ಕಾಯಿಲೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 2023ರಲ್ಲಿ ಸೋಂಕು ನಿವಾರಣೆಯಾಗಬಹುದು ಎಂದು ಡಬ್ಲ್ಯುಎಚ್​ಒ ಘೋಷಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಕರೊನಾ ವೈರಸ್​ನ ಭೀತಿಯಿಂದಾಗಿ ಜನರು ತಾವು ಯಾವಾಗ ಲಸಿಕೆ ಪಡೆಯುತ್ತೇವೋ ಎಂಬ ಕಾತರದಲ್ಲಿದ್ದಾರೆ. ಇದನ್ನೇ ಸದುಪಯೋಗಪಡಿಸಿಕೊಳ್ಳುತ್ತಿರುವ ಕೆಲ ಟ್ರಾವೆಲ್ ಸಂಸ್ಥೆಗಳು ತಮ್ಮಲ್ಲಿ ಟೂರಿಂಗ್ ಪ್ಯಾಕೇಜ್ ಪಡೆದರೆ ಲಸಿಕೆಯನ್ನು ಉಚಿತವಾಗಿ ನೀಡುತ್ತೇವೆ ಎಂದು ಆಮಿಷವೊಡ್ಡುತ್ತಿವೆ. ಈ ರೀತಿ ಮುಂಬೈನ ಟ್ರಾವೆಲ್ ಸಂಸ್ಥೆಯೊಂದು ನೀಡಿರುವ ಆಫರ್ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈನಿಂದ ನ್ಯೂಯಾರ್ಕ್​ಗೆ ಕರೆದೊಯ್ದು 4 ದಿನಗಳ ಬಳಿಕ ವಾಪಸ್ ಮುಂಬೈಗೆ ಕರೆತರುವ ಪ್ರವಾಸದ ಪ್ಯಾಕೇಜ್ ಪಡೆದ ಮೊದಲ ಕೆಲ ಅದೃಷ್ಟವಂತರಿಗೆ ಫೈಜರ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ವಿಮಾನ ಟಿಕೆಟ್ ದರ, ಹೋಟೆಲ್ ಬಿಲ್ ಎಲ್ಲ ಸೇರಿ ಆ ಪ್ಯಾಕೇಜ್​ನ ಒಟ್ಟು ಮೊತ್ತ -ಠಿ; 1,74,999 ಎಂದು ಹೇಳಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 13 =
Remember me
