ಸಂಭಾಲ್​:ಸತತ ಒಂದು ತಿಂಗಳಿನಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದ ಹೋರಾಟಗಾರರಿಗೆ ಉತ್ತರ ಪ್ರದೇಶದ ಸಾಂಭಾಲ್​ ಜಿಲ್ಲಾಡಳಿತ ಬಿಗ್​ ಶಾಕ್​ ನೀಡಿದೆ. ಹನ್ನೊಂದು ತೀವ್ರ ಹೋರಾಟಗಾರರನ್ನು ಗುರುತಿಸಲಾಗಿದ್ದು, ಅವರಿಗೆ 50 ಲಕ್ಷ ಬೆಲೆಯ ಬಾಂಡ್​ಗೆ ಸಹಿ ಮಾಡುವಂತೆ ನೋಟಿಸ್​ ಜಾರಿ ಮಾಡಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ಸಾಕಷ್ಟು ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಹೋರಾಟ ಹಿಂಸಾತ್ಮಕ ಹಾದಿ ಹಿಡಿದಿದ್ದು ಅನೇಕರು ಗಾಯಾಳುಗಳಾಗಿದ್ದಾರೆ. ಇದರ ನಿಯಂತ್ರಣಕ್ಕೆಂದು ಜಿಲ್ಲಾಡಳಿತವು ಕೆಲ ಹೋರಾಟಗಾರರನ್ನು ಗುರುತಿಸಿ ಅವರಿಗೆ ನೋಟಿಸ್​ ಕಳಿಸಿದೆ. ಸೆಕ್ಷನ್​ 111ರ (ಶಾಂತಿ ಉಲ್ಲಂಘಿಸುವ ಸಾಧ್ಯತೆ ಇರುವ ಯಾವುದೇ ವ್ಯಕ್ತಿಯ ವಿರುದ್ಧ ಮ್ಯಾಜಿಸ್ಟ್ರೇಟ್​ ಆದೇಶ) ಪ್ರಕಾರ ನೋಟಿಸ್​ ಕಳುಹಿಸಲಾಗಿದ್ದು, ತಾವು ಇನ್ನು ಮುಂದೆ ಯಾವುದೇ ಹಿಂಸಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲವೆಂದು 50 ಲಕ್ಷದ ಬಾಂಡ್​ ಪೇಪರ್​ನಲ್ಲಿ ಸಹಿ ಹಾಕಿಕೊಡಬೇಕೆಂದು ಕೇಳಲಾಗಿದೆ.
ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಒಟ್ಟು 24 ಹೋರಾಟಗಾರರಿಗೆ ನೋಟಿಸ್​ ಕಳುಹಿಸಲಾಗಿದೆ. ಅದರಲ್ಲಿ ಕನಿಷ್ಠ 11 ಜನರಿಗೆ ಬಾಂಡ್​ಗೆ ಸಹಿ ಹಾಕುವಂತೆ ಕೇಳಲಾಗಿದೆ ಎಂದು ನಖಾಸಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ರಾಜೇಶ್​ ಕುಮಾರ್​ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್​ 188 ಮತ್ತು ಸೆಕ್ಷನ್​ 505 ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿರುವುದಾಗಿ ನಖಾಸಾ ಪೊಲೀಸ್​ ಠಾಣೆಯ ಸ್ಟೇಷನ್​ ಹೌಸ್​ ಆಫೀಸರ್​ ಆಗಿರುವ ದೇವೇಂದ್ರ ಸಿಂಗ್​ ಧಮಾ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ 36 ಜನರ ಹೆಸರಿದ್ದ ವರದಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದ್ದ, ಸಿಆರ್​ಪಿಸಿಯ ಸೆಕ್ಷನ್​ 107/116ರ ಅಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಆ ವ್ಯಕ್ತಿಗಳಿಗೆ ಬಾಂಡ್​ಗೆ ಸಹಿ ಹಾಕಲು ತಿಳಿಸಬೇಕು ಎಂದು ವಿನಂತಿ ಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್​ 19 ಮತ್ತು 20ರಂದು ಸಂಭಾಲ್​ನಲ್ಲಿ ನಡೆದ ಸಿಎಎ ವಿರೋಧದ ಹೋರಾಟದಲ್ಲಿ ಇಬ್ಬರು ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದರು. ಆ ವಿಚಾರವಾಗಿ 12 ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು. 43 ಆರೋಪಿಗಳನ್ನು ಬಂಧಿಸಲಾಗಿತ್ತು. ಕೆಲವು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 1 =
Remember me
