ಚೆನ್ನೈ:ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಸರ್ಕಾರಗಳು, ಸೆಲೆಬ್ರಿಟಿಗಳು ಎಷ್ಟೇ ಪ್ರಚಾರ ಮಾಡಿದರೂ ಮಾದಕ ವ್ಯಸನಿಗಳು ಮಾತ್ರ ಬದಲಾಗುವುದಿಲ್ಲ. ಮದ್ಯಪಾನದಿಂದ ಎಷ್ಟೇ ಅವಘಡಗಳು ನಡೆಯುತ್ತಿದ್ದರೂ, ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದ್ದರೂ ಮತ್ತು ಎಷ್ಟು ಮಂದಿಯ ಬದುಕು ದುರ್ಬಲವಾಗುತ್ತಿದ್ದರೂ ಮಾದಕ ವ್ಯಸನಿಗಳು ಮಾತ್ರ ತಮ್ಮ ದಾರಿ ಬದಲಿಸುತ್ತಿಲ್ಲ. ಸಮಾಜದಲ್ಲಿ ನಡೆಯುವ ಅನೇಕ ಅಪರಾಧಗಳಿಗೆ ಮದ್ಯಪಾನವೇ ಮುಖ್ಯ ಕಾರಣ. ಆದರೆ, ಈ ಮದ್ಯದಿಂದ ಸರ್ಕಾರಗಳಿಗೆ ಎಷ್ಟು ಲಾಭವೋ ಅಷ್ಟೇ ನಷ್ಟ ಜನರಿಗೆ ಆಗುತ್ತಿದೆ. ಬಹುತೇಕ ರಾಜ್ಯಗಳು ಮದ್ಯದಿಂದ ಬರುವ ಆದಾಯದಲ್ಲಿ ಸರ್ಕಾರವೆಂಬ ಬಂಡಿಯನ್ನು ಮುಂದಕ್ಕೆ ಎಳೆಯುತ್ತಿರುವುದು ಎಲ್ಲರಿಗೂ ತಿಳಿದಿದೆ.
ಎಷ್ಟೇ ದರ ಹೆಚ್ಚಿಸಿದರೂ, ಎಷ್ಟೇ ಕಲಬೆರಕೆ ಮಾಡಿದರೂ ಮದ್ಯದ ಬೇಡಿಕೆ ಕಡಿಮೆಯಾಗುತ್ತಿಲ್ಲ. ಇಂದು ಯಾವುದೇ ಆಹಾರ ಪದಾರ್ಥದಲ್ಲಿಯೂ ಕಲಬೆರೆಕೆ ಎಂಬುದು ಸಾಮಾನ್ಯವಾಗಿದೆ. ಇದಕ್ಕೆ ಮದ್ಯವೂ ಸಹ ಹೊರತಾಗಿಲ್ಲ. ಕಲಬೆರೆಕೆ ಮದ್ಯ ಕುಡಿಯುವುದರಿಂದ ತೀವ್ರತರವಾದ ಆರೋಗ್ಯ ಸಮಸ್ಯೆಗಳು ಮತ್ತು ಪ್ರಾಣಹಾನಿಯೂ ಉಂಟಾಗುತ್ತದೆ. ಇಂತಹದ್ದೇ ಘಟನೆ ಇತ್ತೀಚೆಗೆ ನಡೆದಿದೆ. ಕಲಬೆರಕೆ ಮದ್ಯ ಸೇವಿಸಿ ಸುಮಾರು 33 ಮಂದಿ ಮೃತಪಟ್ಟಿದ್ದು, 30 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ದುರಂತ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ.
ಈ ದುರಂತ ಘಟನೆ ಇದೀಗ ತಮಿಳುನಾಡನ್ನು ಬೆಚ್ಚಿಬೀಳಿಸಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಸ್ಟಾಲಿನ್ ಪ್ರತಿಕ್ರಿಯಿಸಿದ್ದು, ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.
ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಲ್ಲದೆ, ಘಟನೆ ನಡೆದ ಕಲ್ಲಕುರುಚಿ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ದುಷ್ಕೃತ್ಯ ಎಸಗಿದ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಭಾರಿ ಕಲಬೆರಕೆ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಸಂತ್ರಸ್ತರಿಗೆ ಚಿಕಿತ್ಸೆ ನೀಡಲು 18 ವಿಶೇಷ ವೈದ್ಯಕೀಯ ತಂಡಗಳನ್ನು ಚೆನ್ನೈನಿಂದ ಕಲ್ಲಕುರಿಚಿಗೆ ಕಳುಹಿಸಲಾಗಿದೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.
ಕಲಬೆರಕೆ ಮದ್ಯ ಮಾರಾಟ ಮಾಡುತ್ತಿರುವವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಟಾಲಿನ್ ಬಹಿರಂಗಪಡಿಸಿದ್ದಾರೆ. ಸಮಾಜವನ್ನು ಹಾಳು ಮಾಡುವ ಇಂತಹ ಅಪರಾಧಗಳನ್ನು ಹತ್ತಿಕ್ಕಲಾಗುವುದು ಎಂದಿದ್ದಾರೆ. ಕಲಬೆರಕೆ ಮದ್ಯ ಸೇವಿಸಿ ಇಷ್ಟೊಂದು ಮಂದಿ ಸಾವಿಗೀಡಾಗಿರುವುದು ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದು ಎಕ್ಸ್​ ಖಾತೆಯಲ್ಲಿ ಸ್ಟಾಲಿನ್ ಬರೆದುಕೊಂಡಿದ್ದಾರೆ.
ಕಲಬೆರಕೆ ಸಾರಾಯಿ ಕುಡಿದು ಅಸ್ವಸ್ಥರಾದವರನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.(ಏಜೆನ್ಸೀಸ್​)
ಹುಡುಗಿಯರೇ ನೀವು ಸದಾ ರೀಲ್ಸ್​ನಲ್ಲಿ ಮುಳುಗಿದ್ದೀರಾ? ಈಕೆಯ ದುರಂತ ಕತೆ ಕೇಳಿದ್ರೆ ನೀವು ಭಯಪಡುವಿರಿ!

ಒಂದು ಕಾಲದ ಕುಚಿಕು ಗೆಳೆಯನ ಪತ್ನಿಗೆ ಮಧ್ಯರಾತ್ರಿಯಲ್ಲಿ ವಾಯ್ಸ್​ ಮೆಸೇಜ್ ಕಳುಹಿಸಿದ್ದ! ದಚ್ಚು​ ವಿರುದ್ಧ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
