ನವದೆಹಲಿ:ಬಾಂಗ್ಲಾದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭದ್ರತಾ ಸಂಸ್ಥೆಗಳ ಮುಖಂಡರೊಂದಿಗಿನ ಸಭೆಯ ನಂತರ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಲು ಸ್ಪಷ್ಟವಾಗಿ ನಿರ್ಧರಿಸಿದ್ದಾರೆ ಎಂದು ಮಂಗಳವಾರ (ಆಗಸ್ಟ್ 6) ಹೇಳಿದರು. ಶೇಖ್ ಹಸೀನಾ ಅವರು ಅಲ್ಪಾವಧಿಗೆ ಭಾರತಕ್ಕೆ ಬರಲು ಅನುಮತಿ ಕೋರಿದರು. ನಾವು ಏಕಕಾಲದಲ್ಲಿ ಬಾಂಗ್ಲಾದೇಶದ ಅಧಿಕಾರಿಗಳಿಂದ ಫ್ಲೈಟ್ ಕ್ಲಿಯರೆನ್ಸ್‌ಗಾಗಿ ವಿನಂತಿಯನ್ನು ನಾವು ಸ್ವೀಕರಿಸಿದ ಬಳಿಕ ದೇಶಕ್ಕೆ ಬಂದಿದ್ದಾರೆ ಎಂದು ಸಂಸತ್ತಿಗೆ ಸಚಿವ ಜೈಶಂಕರ್​​ ತಿಳಿಸಿದರು.
ಇದನ್ನು ಓದಿ:ಬಾಂಗ್ಲಾ ಸೇನಾ ಮುಖ್ಯಸ್ಥರ ಭೇಟಿ!; ಸಹಜ ಸ್ಥಿತಿಗೆ ಮರಳಿಸಲು ಭಾರತದ ಪ್ರಯತ್ನ
ನಾವು ನಮ್ಮ ರಾಜತಾಂತ್ರಿಕ ಕಾರ್ಯಗಳ ಮೂಲಕ ಬಾಂಗ್ಲಾದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ನಿಕಟ ಮತ್ತು ನಿರಂತರ ಸಂಪರ್ಕದಲ್ಲಿದ್ದೇವೆ. ಅಂದಾಜು 19,000 ಭಾರತೀಯ ನಾಗರಿಕರಿದ್ದು, ಅವರಲ್ಲಿ ಸುಮಾರು 9000 ವಿದ್ಯಾರ್ಥಿಗಳು ಇದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಜುಲೈನಲ್ಲಿ ಮರಳಿದ್ದಾರೆ ಎಂದು ತಿಳಿಸಿದರು.
ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅಲ್ಪಸಂಖ್ಯಾತರ ರಕ್ಷಣೆ ಮತ್ತು ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವವರೆಗೆ ಇದನ್ನು ಮುಂದುವರಿಸುತ್ತೇವೆ ಎಂದರು.
ಬಾಂಗ್ಲಾದೇಶದ ಅಧಿಕಾರಿಗಳು ಢಾಕಾದಲ್ಲಿನ ಹೈಕಮಿಷನ್ ಮತ್ತು ಚಿತ್ತಗಾಂಗ್, ರಾಜ್‌ಶಾಹಿ, ಖುಲ್ನಾ ಮತ್ತು ಸಿಲ್ಹೆಟ್‌ನಲ್ಲಿರುವ ಸಹಾಯಕ ಹೈಕಮಿಷನ್‌ಗಳಿಗೆ ಅಗತ್ಯವಿರುವ ಭದ್ರತೆಯನ್ನು ಒದಗಿಸಬೇಕೆಂದು ಭಾರತ ನಿರೀಕ್ಷಿಸುತ್ತದೆ. ನಮ್ಮ ಗಡಿ ಭದ್ರತಾ ಪಡೆಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಕಳೆದ 24 ಗಂಟೆಗಳಿಂದ ಢಾಕಾದಲ್ಲಿನ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದರು.
#WATCH| Speaking in Rajya Sabha on the situation in Bangladesh, External Affairs Minister Dr S Jaishankar says, "…We are in close and continuous touch with the Indian community in Bangladesh through our diplomatic missions. There are an estimated 19,000 Indian nationals there…pic.twitter.com/SJSv1hkQ1f
ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ಜುಲೈ 21 ರಂದು ಬಾಂಗ್ಲಾದೇಶದ ಸುಪ್ರೀಂಕೋರ್ಟ್ ಮೀಸಲಾತಿ ರದ್ದುಗೊಳಿಸಿದರು, ಹಸೀನಾ ಸರ್ಕಾರವು ನಂತರ ತೆಗೆದುಕೊಂಡ ವಿವಿಧ ನಿರ್ಧಾರಗಳು ಮತ್ತು ಕ್ರಮಗಳು ಬಾಂಗ್ಲಾ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದವು ಎಂದು ತಿಳಿಸಿದರು. ಬಾಂಗ್ಲಾಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂಥೆ ಸದನದ ತಿಳುವಳಿಕೆ ಮತ್ತು ಬೆಂಬಲವನ್ನು ಕೋರುತ್ತೇನೆ ಎಂದು ಸಚಿವರು ಸಂಸತ್ತಿನಲ್ಲಿ ಹೇಳಿದರು.(ಏಜೆನ್ಸೀಸ್​​)
ಭಾರತಕ್ಕೆ ಬಂದಿಳಿದ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ; ಹಿಂಡನ್ ಏರ್​​ಬೇಸ್​​​​ನಲ್ಲಿ ಲ್ಯಾಂಡಿಂಗ್ ಆಗಿದ್ದು ಯಾಕೆ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
