ನವದೆಹಲಿ :ಭಾರತದಲ್ಲಿ ಕರೊನಾ ಲಸಿಕಾ ಅಭಿಯಾನ ನಡೆಯುತ್ತಿರುವ ವೇಗದ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯೊಂದು ಕಳವಳ ವ್ಯಕ್ತಪಡಿಸಿದೆ. ಈ ವೇಗದಲ್ಲೇ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರಿದಲ್ಲಿ, ಇಡೀ ದೇಶದ ಜನರಿಗೆ ಲಸಿಕೆ ನೀಡಲು ಹಲವು ವರ್ಷಗಳೇ ಬೇಕಾಗುತ್ತವೆ ಎಂದು ಸಮಿತಿ ಹೇಳಿದೆ.
ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ (ಸ್ಟಾಂಡಿಂಗ್ ಕಮಿಟಿ ಆನ್ ಹೋಂ ಅಫೇರ್ಸ್) ಇಂದು ಸಂಸತ್ತಿನಲ್ಲಿ ಗೃಹ ಸಚಿವಾಲಯದ ಅನುದಾನದ ಬೇಡಿಕೆಗಳ ಬಗ್ಗೆ ಸಲ್ಲಿಸಿದ ವರದಿಯಲ್ಲಿ, ಲಸಿಕೆ ಪಡೆಯಲು ಮುಂದೆ ಬರುತ್ತಿರುವ ಹೆಚ್ಚಿನ ಜನರು ಎರಡನೇ ಡೋಸ್ ಪಡೆಯದಿರುವುದರ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !
ಈವರೆಗೆ ಭಾರತದ ಜನಸಂಖ್ಯೆಯ ಶೇ.1 ರಷ್ಟಕ್ಕೂ ಕಡಿಮೆ ಜನರು ಲಸಿಕೆ ನೀಡಲ್ಪಟ್ಟಿದ್ದು, “ಈ ದರದಲ್ಲಿ, ಇಡೀ ಜನಸಂಖ್ಯೆಗೆ ಲಸಿಕೆ ನೀಡಲು ಹಲವು ವರ್ಷಗಳೇ ಹಿಡಿಯಲಿವೆ” ಎಂದಿರುವ ಸಮಿತಿಯು, ಆದಷ್ಟು ಬೇಗ ಗರಿಷ್ಠ ಸಂಖ್ಯೆಯ ಜನರನ್ನು ಲಸಿಕೆಗೆ ಒಳಪಡಿಸಲು ಪ್ರಯತ್ನ ನಡೆಯಬೇಕು ಎಂದಿದೆ.
“ವೈರಸ್ ರೂಪಾಂತರಗೊಳ್ಳುತ್ತಲೇ ಇರುವುದು ವಿಶ್ವದ ವಿವಿಧ ಭಾಗಗಳಿಂದ ವರದಿಯಾಗುತ್ತಿರುವ ಈ ಸಂದರ್ಭದಲ್ಲಿ, ಇದು ಬಹಳ ಗಂಭೀರವಾದ ವಿಷಯ. ಪಾರಾಮಿಲಿಟರಿ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲಾ ಮುಂಚೂಣಿ ಕಾರ್ಯಕರ್ತರು ಮತ್ತು ಕರೊನಾ ವಾರಿಯರ್​​ಗಳು ನಿಗದಿಪಡಿಸಲಾಗಿರುವ ಎರಡೂ ಡೋಸ್​ಗಳನ್ನು ಪಡೆಯಬೇಕು” ಎಂದೂ ಸಮಿತಿ ಹೇಳಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕರೊನಾ ನಿಯಮ ಉಲ್ಲಂಘನೆ : ಬಾಲಿವುಡ್ ನಟಿ ವಿರುದ್ಧ ಮುಂಬೈ ಪಾಲಿಕೆ ದೂರು

ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !

“ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
