ಹೈದರಾಬಾದ್ :ಗೌರಿ, ಗಣೇಶ ಚತುರ್ಥಿ ಹಬ್ಬದ ಸಡಗರ ಎಲ್ಲೆಡೆ ಮುಗಿಲುಮುಟ್ಟಿದೆ. ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಗೌರಿ-ಗಣೇಶ ವಿಗ್ರಹಗಳ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತಿದೆ. ಶುಕ್ರವಾರ(ಸೆ.6) ಗೌರಿ ವ್ರತ ಮನೆಗಳಿಗೆ ಸೀಮಿತವಾದರೆ, ವಿಘ್ನನಿವಾರಕ ಆರಾಧನೆ ಶನಿವಾರ(ಸೆ.7) ಬೆಳಗ್ಗೆ ಮೊದಲ ಪೂಜೆ ಸ್ವೀಕರಿಸಲಿದ್ದಾರೆ. ಲಂಬೋದರನನ್ನು ಯಾವ ಸಮಯದಲ್ಲಿ ಪ್ರತಿಷ್ಠಾಪಿಸಬೇಕು? ಪೂಜೆ ಯಾವಾಗ ನೆರವೇರಿಸಬೇಕು ಎಂಬುದರ ಕುರಿತು ಶಾಸ್ತ್ರಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯೋಣ.
ಇದನ್ನೂ ಓದಿ:ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಮೆಡಿಕಲ್​ ಕಾಲೇಜು ಮಾಜಿ ಪ್ರಿನ್ಸಿಪಾಲ್​ಗೆ ಸೇರಿದ 6 ಸ್ಥಳಗಳ ಮೇಲೆ ಇಡಿ ದಾಳಿ
ಶಾಸ್ತ್ರಗಳ ಪ್ರಕಾರ ವಿನಾಯಕ ಚೌತಿ ಶನಿವಾರ ಆಚರಿಸಲಾಗುತ್ತಿದೆ. ಬೆಳಗ್ಗೆ 11.03ರಿಂದ ಮಧ್ಯಾಹ್ನ 1.30ರ ಒಳಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮುಹೂರ್ತವಾಗಿದೆ. ಸಂಜೆ 6.22ರಿಂದ 7.30ರ ಒಳಗೆ ವಿನಾಯಕ ವ್ರತ ಸಂಕಲ್ಪ ಪೂಜೆ ಮಾಡಬೇಕು ಎಂದು ಹೇಳಲಾಗಿದೆ. ಈ ಎರಡು ಕಾಲದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆ ಎನ್ನುತ್ತಾರೆ ಅರ್ಚಕರು.
ಗಣನಾಥನಿಗೆ ಕೆಂಪು ಬಟ್ಟೆಯೆಂದರೆ ತುಂಬಾ ಇಷ್ಟ. ಹಾಗಾಗಿ ವಿನಾಯಕ ಚೌತಿ ದಿನ ಆ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ. ಅಲ್ಲದೆ, ಈ ವರ್ಷ ಚೌತಿ ಶನಿವಾರ ಬರುತ್ತದೆ. ಶನಿವಾರದ ಅಧಿಪತಿ ಶನೇಶ್ವರನಾಗಿರುವುದರಿಂದ ಆತನಿಗೆ ಪ್ರಿಯವಾದ ನೀಲಿ ಬಣ್ಣದ ವಸ್ತ್ರವನ್ನು ಧರಿಸಿದರೆ ಉತ್ತಮ. ಆದ್ದರಿಂದ ಕೆಂಪು ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ.
ಪೂಜೆಯ ಅಂಗವಾಗಿ ಐದು ಬತ್ತಿ ಹಾಕಿ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ಗಣಪತಿಯ ಕೃಪೆ ಸಂಪೂರ್ಣವಾಗಿ ನಮ್ಮ ಮೇಲಿರುತ್ತದೆ. ಹಾಗೆಯೇ ಹಬ್ಬದಂದು 21 ಎಲೆಗಳಿಂದ ಗಣಪತಿಯನ್ನು ಪೂಜಿಸಬಹುದು. ಇದಾವುದೂ ಆಗದವರು ಗಣಪತಿಗೆ ಭಕ್ತಿಯಿಂದ ಗರಿಕೆ ಹುಲ್ಲು ಅರ್ಪಿಸಿದರೆ ಸಾಕು ಎಂದು ಹೇಳಲಾಗುತ್ತದೆ.ತಿಳಿ ಶ್ರೀಗಂಧದ ಬಣ್ಣದ ಗಣಪತಿ ಮೂರ್ತಿಯನ್ನು ಪೂಜಿಸುವುದು ಉತ್ತಮ. ಪ್ರತಿಮೆಯಲ್ಲಿ ಇಲಿ ಒಟ್ಟಿಗೆ ಇರಬೇಕು. ಇದು ಮನೆಯ ಇತರರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ವೃತ್ತಿ ಜೀವನ ತೃಪ್ತಿದಾಯಕವಾಗಿರುತ್ತದೆ. ಗಣೇಶನ ಕೈಯಲ್ಲಿ ಮೋದಕ ಇರಬೇಕು.
ಗಣೇಶನ ಸೊಂಡಿಲು ಎಂದಿಗೂ ಬಲಕ್ಕೆ ತಿರುಗಬಾರದು. ಎಡಭಾಗಕ್ಕೆ ತಿರುಗಿರಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಗಣೇಶನನ್ನು ಅತ್ಯಂತ ಭಕ್ತಿ ಮತ್ತು ಬದ್ಧತೆಯಿಂದ ಕಾಯಿ, ಹೂ, ಹಣ್ಣು ಮತ್ತು ವಿಘ್ನೇಶ್ವರನಿಗರ ಪ್ರಯವಾದ ಕಡಬು ಇಟ್ಟು ಪೂಜಿಸಬೇಕು.
ಇನ್ನು ಪ್ರಕೃತಿ ಆರಾಧನೆ ನಮ್ಮ ಸನಾತನ ಧರ್ಮದ ಮೂಲವಾದ್ದರಿಂದ ಗಣಪತಿ ಪ್ರಕೃತಿಗೆ ಹತ್ತಿರವಾದ ಮಣ್ಣಿನ ವಿನಾಯಕ ಕೊಂಡು ತಂದರೆ ತುಂಬಾ ಒಳ್ಳೆಯದು. ವಿಗ್ರಹವು ಕಿರೀಟವನ್ನು ಹೊಂದಿರಬೇಕು. ಅಂತಹ ವಿಗ್ರಹವನ್ನು ಮನೆಗೆ ತಂದು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಪೂಜೆ ಮಾಡುವ ದಿನ ಮದ್ಯ, ಮಾಂಸ ಮತ್ತು ಇತರ ಅನೈತಿಕ ಚಟುವಟಿಕೆಗಳಲ್ಲಿ ತೊಡಗಬಾರದು. ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು. ದೇವರ ಮೇಲೆ ಗಮನ ಮತ್ತು ಭಕ್ತಿ. ಹೀಗೆ ಮಾಡಿದರೆ ವಿಘ್ನೇಶ್ವರನ ಅನುಗ್ರಹ ಸಿಗುತ್ತದೆ ಎನ್ನುತ್ತವೆ ಶಾಸ್ತ್ರಗಳು.
ಸಿಬಿಐ ತನಿಖೆ ಪ್ರಶ್ನಿಸಿ ಆರ್‌ಜಿ ಕರ್ ಕಾಲೇಜು ಮಾಜಿ ಪ್ರಾಂಶುಪಾಲ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 2 =
Remember me
