ಮುಂಬೈ:ಭಾರತದ ಆರ್ಥಿಕ ರಾಜಧಾನಿ ಮುಂಬೈ ಬಳಿ ಅರಬ್ಬಿ ಸಮುದ್ರದಲ್ಲಿ ನಿರ್ವಿುಸಲಾಗಿರುವ ದೇಶದ ಅತಿ ದೊಡ್ಡ ಸಾಗರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಲಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ಸೇವ್ರಿ-ನ್ಹವಾ ಶೇವಾ ಅಟಲ್ ಸೇತು ಹೆಸರಿನ 21.8 ಕಿಮೀ ಉದ್ದದ ಈ ಸೇತುವೆ ದಕ್ಷಿಣ ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣದ ದೂರ ಹಾಗೂ ಸಮಯವನ್ನು ಗಣನೀಯವಾಗಿ ತಗ್ಗಿಸಲಿದೆ. ಇಂಧನವೂ ಉಳಿತಾಯವಾಗಲಿದೆ. ಅಟಲ್ ಸೇತು ಅಥವಾ ಮುಂಬೈ ಟ್ರಾನ್ಸ್ ಹಾರ್ಬರ್ ಸೀಲಿಂಕ್ (ಎಂಟಿಎಚ್​ಎಲ್) ಈ ಮಾರ್ಗದ ಸಂಕ್ಷಿಪ್ತ ಹೆಸರಾಗಿದೆ. ಸೇವ್ರಿ-ವರ್ಲಿ ಎಲಿವೇಟೆಡ್ ಕಾರಿಡಾರ್, ಈಸ್ಟರ್ನ್ ಫ್ರೀವೇ ಮರೈನ್ ಡ್ರೈವ್ ಸುರಂಗ, ಪ್ರಸ್ತಾಪಿತ ಚಿರ್ಲೆ-ಪಲಾಸ್ಪೆ ಕಾಮಗಾರಿ ಪೂರ್ಣಗೊಂಡ ನಂತರ ಮುಂಬೈ-ಪುಣೆ ಎಕ್ಸ್ ಪ್ರೆಸ್​ವೇ ಮತ್ತು ನವಿ ಮುಂಬೈಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವಿನ ಸಂಪರ್ಕದ ಸಂಪೂರ್ಣ ಅವಕಾಶ ತೆರೆದು ಕೊಳ್ಳಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.
ಪ್ರಸ್ತುತ ಮಾರ್ಗ:ನವಿ ಮುಂಬೈ ಸಂಪರ್ಕಕ್ಕೆ ಪ್ರಸ್ತುತ ಎರಡು ಮಾರ್ಗಗಳಿವೆ. ಮೊದಲನೆಯದು ಐರೋಲಿ-ಮುಲುಂದ್ ಕನೆಕ್ಟರ್ ಹಾಗೂ ಎರಡನೆಯದು ವಶಿ ಕನೆಕ್ಟರ್. ಆಲಿಬಾಗ್ ಅಥವಾ ಅಥವಾ ಲೋನಾವಾಲಾಕ್ಕೆ ಹೋಗಬೇಕಾದರೆ ಭಾರಿ ಸಂಚಾರ ದಟ್ಟಣೆ ಇರುವ ಈ ಮಾರ್ಗಗಳ ಮೂಲಕ ಪ್ರಯಾಣಿಸಬೇಕಾಗುತ್ತದೆ.
ಆರು ದಶಕದ ಕನಸು:ಇಂಥದ್ದೊಂದು ಸಂಪರ್ಕ ಮಾರ್ಗದ ಪರಿಕಲ್ಪನೆ ಮೂಡಿದ ಆರು ದಶಕದ ನಂತರ ಈ ಸಾಗರ ಸೇತುವೆ ನನಸಾಗುತ್ತಿದ್ದು, ಸಂಚಾರ ದಟ್ಟಣೆಯ ಶಾಪದಿಂದ ಕೂಡಿದ ಮಹಾನಗರಕ್ಕೆ ಒಂದು ವರವಾಗಿ ಪರಿಣಮಿಸಲಿದೆ. ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣ ಸಮಯವನ್ನು ಕಡಿಮೆ ಮಾಡುವುದಲ್ಲದೆ ನೆರೆಯ ರಾಯಗಢ ಜಿಲ್ಲೆಯ ಆರ್ಥಿಕತೆಯನ್ನು ಮುಂಬೈಯ ಪರಿಸರದ ಸಮೀಪಕ್ಕೆ ತರುವಲ್ಲಿ ನೆರವಾಗಲಿದೆ.
ದೈನಿಕ ವಾಹನ ಸಂಚಾರ:ಪ್ರಯಾಣಕ್ಕೆ ಮುಕ್ತವಾದ ನಂತರ, ಸೇವ್ರಿ ಮತ್ತು ಶಿವಾಜಿ ನಗರ ಇಂಟರ್​ಚೇಂಜ್ ನಡುವೆ ಪ್ರತಿದಿನ ಸುಮಾರು 39,300 ವಾಹನಗಳು ಹಾಗೂ ಶಿವಾಜಿ ನಗರ ಮತ್ತು ಚಿರ್ಲೆ ಇಂಟರ್​ಚೇಂಜ್ ನಡುವೆ 9,800 ವಾಹನಗಳು ಸಂಚರಿಸುವ ನಿರೀಕ್ಷೆಯಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 15 =
Remember me
