ಬೆಂಗಳೂರು:ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಬಾಲಿವುಡ್​​ ನಟ ಸುನೀಲ್ ಶೆಟ್ಟಿ ಅವರ ಇತ್ತೀಚಿನ ಕಾಮೆಂಟ್ ಅಥಿಯಾ ಶೆಟ್ಟಿ ಮತ್ತು ಅವರ ಪತಿ ಕ್ರಿಕೆಟಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ದಂತೆ-ತಾಯಿ ಆಗಲಿದ್ದಾರೆ ಎಂಬ ವದಂತಿಯನ್ನು ಹುಟ್ಟುಹಾಕಿದೆ.
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ತಂದೆಯಾಗಿ ಬಡ್ತಿ ಪಡೆಯಲಿದ್ದಾರಾ? ಅವರ ಪತ್ನಿ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಶೀಘ್ರದಲ್ಲೇ ಗಂಡು ಮಗುವಿಗೆ ಜನ್ಮ ನೀಡುತ್ತಿದ್ದಾರೆಯೇ? ಹೌದು ಎಂಬ ಉತ್ತರ ಬಾಲಿವುಡ್‌ನಲ್ಲಿದೆ.ಇತ್ತೀಚೆಗಷ್ಟೇ ಆಥಿಯಾ ಶೆಟ್ಟಿ ಅವರ ತಂದೆ, ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ ಅವರು ಮಾಡಿರುವ ಕಾಮೆಂಟ್‌ಗಳು ಅಥಿಯಾ ಶೆಟ್ಟಿ ಗರ್ಭಿಣಿ ಎಂಬುದಕ್ಕೆ ಬಲ ತುಂಬಿವೆ.
https://twitter.com/ColorsTV/status/1773994825282359471
ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದ ಅಥಿಯಾ ತಂದೆ ಸುನೀಲ್ ಶೇಠ್ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಸುನೀಲ್ ರಿಯಾಲಿಟಿ ಶೋ ‘ಡ್ಯಾನ್ಸ್ ದೀವಾನೆ’ ತೀರ್ಪುಗಾರರಾಗಿದ್ದಾರೆ.  ಈ ಕಾರ್ಯಕ್ರಮದ ವೇಳೆ ಶೆಟ್ಟಿ, ‘ಈ ರಿಯಾಲಿಟಿ ಶೋ ಮುಂದಿನ ಸೀಸನ್‌ಗೆ ಬಂದಾಗ ನಾನು ಅಜ್ಜನಾಗುತ್ತೇನೆ’ ಎಂದು ಉತ್ತರಿಸಿದರು. ತಮಾಷೆಗೆ ಹೇಳಿದ್ದಾರೋ ಅಥವಾ ಸೀರಿಯಸ್ ಆಗಿ ಹೇಳಿದ್ದಾರೋ ಗೊತ್ತಿಲ್ಲ ಆದರೆ ಸುನೀಲ್ ಶೆಟ್ಟಿಗೆ ತಾತನಾಗಿ ಪ್ರಮೋಷನ್ ಸಿಗಲಿದೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕೆಎಲ್ ರಾಹುಲ್ ಅಥಿಯಾ ಶೆಟ್ಟಿ ಆರಂಭದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಆ ನಂತರ ಅವರ ಸ್ನೇಹ ಪ್ರೀತಿಯಾಗಿ ಅರಳಿತು.  2023ರಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ರಾಹುಲ್-ಅಥಿಯಾ ವಿವಾಹ ನೆರವೇರಿತು. ಸುನೀಲ್ ಶೆಟ್ಟಿ ಅವರ ಖಂಡಾಲ ಎಸ್ಟೇಟ್‌ನಲ್ಲಿ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕ್ರಿಕೆಟಿಗ ಕೆಎಲ್ ರಾಹುಲ್ ಸದ್ಯ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 5 =
Remember me
