ಪ್ರಯಾಗ್​ರಾಜ್​:ಉತ್ತರಪ್ರದೇಶದಲ್ಲಿ ಗುಂಡಿನ ಮೊರೆತ ಕೇಳಿಸಿದ್ದು, ಇನ್ನಿಬ್ಬರು ಪಾತಕಿಗಳು ಬಲಿಯಾಗಿದ್ದಾರೆ. ಪಾತಕಿ ಅತೀಖ್ ಅಹಮದ್​ನ ಪುತ್ರ ಅಸದ್​ನನ್ನು ಮೊನ್ನೆ ಎನ್​ಕೌಂಟರ್​ ಮೂಲಕ ಹೊಡೆದುರುಳಿಸಲಾಗಿದ್ದು, ಇಂದು ಅತೀಕ್​ ಜತೆಗೆ ಆತನ ಸಹೋದರ ಅಶ್ರಫ್ ಅಹಮದ್​ ಕೂಡ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಅತೀಖ್ ಅಹಮದ್​ 2005ರಲ್ಲಿ ನಡೆದಿದ್ದ ಬಿಎಸ್​ಪಿ ಶಾಸಕ ರಾಜು ಪಾಲ್ ಹತ್ಯೆ ಹಾಗೂ ಇದೇ ಫೆಬ್ರವರಿಯಲ್ಲಿ ನಡೆದ ಉಮೇಶ್ ಪಾಲ್ ಕೊಲೆಯನ್ನೂ ಆರೋಪಿಯಾಗಿದ್ದ. ಇಂದು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕೊಂಡೊಯ್ದಿದ್ದಾಗ ಪ್ರಯಾಗ್​ರಾಜ್​ನಲ್ಲಿ ಶೂಟ್ ಮಾಡಿ ಸಾಯಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಾಗಿದೆ. ಅವರಿಬ್ಬರು ಪೊಲೀಸರ ಜೊತೆಗಿದ್ದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿರುವಾಗಲೇ ಗುಂಡಿನ ದಾಳಿ ಮಾಡಲಾಗಿದೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.
ಇದನ್ನೂ ಓದಿ:ಮಾಡಾಳ್ ವಿರೂಪಾಕ್ಷಪ್ಪ ಜೈಲಿನಿಂದ ಬಿಡುಗಡೆ; ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ
ಅಸದ್​​ನನ್ನು ಏ. 13ರಂದು ಎನ್​ಕೌಂಟರ್​ ಮಾಡಲಾಗಿದ್ದು, ಆತನೊಂದಿಗೆ ಗುಲಾಮ್ ಎಂಬಾತನನ್ನೂ ಶೂಟ್ ಮಾಡಿ ಹೊಡೆದುರುಳಿಸಲಾಗಿತ್ತು. ಇಬ್ಬರೂ ಉಮೇಶ್ ಪಾಲ್ ಮರ್ಡರ್​ ಕೇಸ್​ನಲ್ಲಿ ವಾಂಟೆಡ್ ಲಿಸ್ಟ್​ನಲ್ಲಿದ್ದರು. ಇವರ ತಲೆಗೆ ಐದು ಲಕ್ಷ ರೂ. ಇನಾಮು ಕೂಡ ಘೋಷಿಸಲಾಗಿತ್ತು.
ಭಾಜಪದ ಮತ್ತೊಂದು ವಿಕೆಟ್ ಪತನ, ಶೆಟ್ಟರ್​ ಬಿಜೆಪಿಗೆ ಗುಡ್​ಬೈ; ನಾಳೆಯೇ ರಾಜೀನಾಮೆ

ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
