ನವದೆಹಲಿ: ಹರಿಯಾಣ ಸರ್ಕಾರವು ದೆಹಲಿಗೆ ಸಮರ್ಪಕವಾಗಿ ನೀರನ್ನು ನೀಡುತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಡಬೇಕಾದರೆ ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಆದ್ದರಿಂದ ನಾನು ಶುಕ್ರವಾರ (ಜೂನ್​ 21) ‘ಜಲ ಸತ್ಯಾಗ್ರಹ’ ಆರಂಭಿಸುತ್ತೇನೆ. ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ದಕ್ಷಿಣ ದೆಹಲಿಯ ಭೋಗಲ್ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸುತ್ತೇನೆ ಎಂದು ಸಚಿವೆ ಅತಿಶಿ ಹೇಳಿದ್ದಾರೆ.
ಇದನ್ನು ಓದಿ:ಆರೋಗ್ಯವಾಗಿರಲು ಡಿಟಾಕ್ಸ್ ಡ್ರಿಂಕ್ ಅತ್ಯವಶ್ಯಕ; ದೇಹದೊಳಗಿನ ವಿಷಕಾರಿ ಅಂಶ ತೆಗೆಯಲಿರುವ ಮಾರ್ಗ
ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರೂ ಹರಿಯಾಣ ಸರ್ಕಾರವು ದೆಹಲಿಗೆ ಪೂರ್ಣ ಪ್ರಮಾಣದ ನೀರನ್ನು ನೀಡುತ್ತಿಲ್ಲ. ಆದ್ದರಿಂದ ಸತ್ಯಾಗ್ರಹ ನಡೆಸುವುದಾಗಿ ಅತಿಶಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಕಳೆದ ಎರಡು ವಾರಗಳಿಂದ ಹರಿಯಾಣ ತನ್ನ ಪಾಲಿನ 613 MGD ಗಿಂತ ದೆಹಲಿಗೆ ದಿನಕ್ಕೆ 100 ಮಿಲಿಯನ್ ಗ್ಯಾಲನ್ ಕಡಿಮೆ ನೀರನ್ನು ನೀಡುತ್ತಿದೆ, ಇದರ ಪರಿಣಾಮವಾಗಿ ದೆಹಲಿಯಲ್ಲಿ 28 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಸಚಿವೆ ಈ ಹಿಂದೆ ಹೇಳಿದ್ದರು.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಕ್ಕೂ ಮುನ್ನು ಸಚಿವೆ ಅತಿಶಿ ಅವರು ಮುಂಜಾನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಸಿಎಂ ಅರವಿಂದ್​ ಕೇಜ್ರಿವಾಲ್​​ ಅವರ ಪತ್ನಿ ಸುನೀತಾ ಕೇಜ್ರಿವಾಲ್​ ಸೇರಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವರಾದ ಸೌರಭ್ ಭಾರದ್ವಾಜ್, ಇಮ್ರಾನ್ ಹುಸೇನ್ ಮತ್ತು ಇತರ ಶಾಸಕರು ಕೂಡ ರಾಜ್​​​​ಘಾಟ್​ಗೆ ಭೇಟಿ ನೀಡಿಲಿದ್ದಾರೆ. ಬಳಿಕ ರಾಜ್​ಘಾಟ್‌ನಿಂದ ಜಂಗ್‌ಪುರಕ್ಕೆ ಸಚಿವೆ ಅತಿಶಿ ಅವರೊಂದಿಗೆ ಎಎಪಿ ನಾಯಕರು ತೆರಳಲಿದ್ದು ಅಲ್ಲಿ ಅತಿಶಿ ಉಪವಾಸ ಆರಂಭಿಸಲಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.
ಈ ಹಿಂದೆ ಸುಪ್ರೀಂಕೋರ್ಟ್​​ ಹೆಚ್ಚುವರಿ ನೀರನ್ನು ದೆಹಲಿಗೆ ಬಿಡುಗಡೆ ಮಾಡಲು ಹಿಮಾಚಲ ಪ್ರದೇಶ ಸರ್ಕಾರ ಒಪ್ಪಿಗೆ ನೀಡಿದೆ ಎಂದಿತ್ತು ಹಾಗೂ ಹತ್ನಿಕುಂಡ ಬ್ಯಾರೇಜ್‌ನಿಂದ ಬಿಡುಗಡೆಗೊಂಡ ನೀರನ್ನು ವಜೀರಾಬಾದ್‌ಗೆ ತಲುಪಿಸಲು ಸಹಾಯ ಮಾಡಬೇಕೆಂದು ಹರಿಯಾಣ ಸರ್ಕಾರಕ್ಕೆ ಸೂಚಿಸಿತ್ತು. (ಏಜೆನ್ಸೀಸ್​​)
ನಳಂದ ವಿಶ್ವವಿದ್ಯಾಲಯದ ಇತಿಹಾಸ ಏನು ಗೊತ್ತಾ; ಹೊಸ ಕ್ಯಾಂಪಸ್​​ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ… ಇಲ್ಲಿದೆ ಸಂಪೂರ್ಣ ಮಾಹಿತಿ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:twenty + 12 =
Remember me
