ದೇಶಾದ್ಯಂತ ರಾಜಕಾರಣಿಗಳಲ್ಲೂ ಕರೊನಾ ಸೋಂಕು ಹೆಚ್ಚಾಗುತ್ತಿದ್ದು, ರಾಜ್ಯವೊಂದರಲ್ಲೇ ಮೂವರು ಸಚಿವರು ಸೇರಿ ಒಟ್ಟು ಸುಮಾರು 15 ಶಾಸಕರಲ್ಲಿ ಕೋವಿಡ್​-19 ಪಾಸಿಟಿವ್​ ದೃಢಪಟ್ಟಿದೆ ಎನ್ನಲಾಗಿದೆ.
ಅಧಿವೇಶನದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜನಪ್ರತಿನಿಧಿಗಳನ್ನು ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಡಿಶಾದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಅಲ್ಲಿನ ಉಪ ಸಭಾಪತಿ ರಜನಿಕಾಂತ್ ಸಿಂಗ್​ ಸೇರಿ ಮೂವರು ಸಚಿವರಲ್ಲಿ ಕರೊನಾ ಪಾಸಿಟಿವ್​ ದೃಢಪಟ್ಟಿದೆ.
ನನ್ನ ಕೋವಿಡ್​​ ಟೆಸ್ಟ್ ವರದಿ ಪಾಸಿಟಿವ್​ ಬಂದಿದ್ದು, ನಾನು ಭುವನೇಶ್ವರದ ಎಸ್​ಯುಎಮ್​ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆಬಂದ ಎಲ್ಲರೂ ಪರೀಕ್ಷೆಗೆ ಒಳಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪ ಸಭಾಪತಿ ಟ್ವೀಟ್​ ಮೂಲಕ ಕೋರಿಕೊಂಡಿದ್ದಾರೆ.
ಇದನ್ನು ಓದಿ:ಕರೊನಾ 2ನೇ ಅಲೆ ನಿಜವೇ? ಗುಣವಾದವರಿಗೂ ಮತ್ತೆ ಸೋಂಕು.. ಕೇಂದ್ರದ ಸಚಿವರು ಏನಂತಾರೆ?
ಒಡಿಶಾದ ಅಧಿವೇಶನ ನಾಳೆಯಿಂದಲೇ ಆರಂಭಗೊಳ್ಳಲಿದ್ದು, ಅ. 7ರಂದು ಮುಗಿಯಲಿದೆ. ಆದರೆ ಈಗಾಗಲೇ ನಡೆದ ಕೋವಿಡ್ ಪರೀಕ್ಷೆಯಲ್ಲಿ ಕನಿಷ್ಠ 15 ಶಾಸಕರಿಗೆ ಸೋಂಕು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eighteen =
Remember me
