ನವದೆಹಲಿ:ಹಣಕ್ಕಾಗಿ ಎಟಿಎಂನಿಂದ ಎಟಿಎಂಗೆ ಅಲೆದಾಡುವ ಜನಸಾಮಾನ್ಯರಿಗೆ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಶುಭ ಸುದ್ದಿ ನೀಡಿದೆ. ಎಟಿಎಂನಲ್ಲಿ 10 ಗಂಟೆಗಿಂತ ಹೆಚ್ಚು ಕಾಲ ನಗದು ಇಲ್ಲದೇ ಹೋದರೆ ಅಂಥ ಎಟಿಎಂ ನಿರ್ವಹಿಸುತ್ತಿರುವ ಬ್ಯಾಂಕಿಗೆ ಪ್ರತಿ ಎಟಿಎಂಗೆ 10,000 ರೂಪಾಯಿ ದಂಡ ವಿಧಿಸುವುದಾಗಿ ಆರ್​ಬಿಐ ಘೋಷಿಸಿದೆ.
ವೈಟ್​ ಲೇಬಲ್​ ಎಟಿಎಂಗಳಾದರೆ ಅಂತಹ ಎಟಿಎಂಗಳಿಗೆ ಹಣ ತುಂಬುವ ಹೊಣೆಗಾರಿಕೆ ಹೊತ್ತುಕೊಂಡಿರುವ ಬ್ಯಾಂಕು ಅನ್ನು ಬಾಧ್ಯಸ್ಥನನ್ನಾಗಿ ಪರಿಗಣಿಸಲಾಗುತ್ತದೆ. ಹೊಸ ಉಪಕ್ರಮ ಅಕ್ಟೋಬರ್​ 1ರಿಂದ ಜಾರಿ ಆಗಲಿದೆ.
ತಿಂಗಳುಗಟ್ಟಲೆ ಕೆಲವು ಎಟಿಎಂಗಳು ನಿಷ್ಕ್ರಿಯವಾಗಿರು ವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ಸಮರ್ಪಕವಾಗಿ ಎಟಿಎಂ ಸೇವೆ ಒದಗಿಸುವುದು ಆಯಾ ಬ್ಯಾಂಕುಗಳ ಹೊಣೆ ಎಂದು ಆರ್​ಬಿಐ ಎಚ್ಚರಿಸಿದೆ. ಎಟಿಎಂ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಮಯದ ಡೇಟಾ ಮಷಿನ್​ಗಳಲ್ಲಿ ಲಭ್ಯವಿದ್ದು, ಅದನ್ನು ಬ್ಯಾಂಕುಗಳು ಪರಿಶೀಲಿಸಬೇಕು. ಅದರ ಮಾಸಿಕ ವರದಿಯನ್ನು ಪ್ರತಿ ತಿಂಗಳ 5ನೇ ತಾರೀಕಿನೊಳಗೆ (ಉದಾ: ಅಕ್ಟೋಬರ್​ ವರದಿಯನ್ನು ನ. 5ರ ಒಳಗೆ) ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬೇಕು. ಇದನ್ನು ಆಧರಿಸಿ ಯಾವ ಎಟಿಎಂನಲ್ಲಿ 10 ತಾಸಿಗಿಂತ ಹೆಚ್ಚು ಕಾಲ ಹಣವಿವು ದಿಲ್ಲವೋ ಅಂತಹದಕ್ಕೆ ಆರ್​ಬಿಐ ದಂಡ ಹಾಕಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + three =
Remember me
