ಕೊಲ್ಲಂ:ಕರೊನಾ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ರೋಗಿಯ ಸಂಬಂಧಿಯ ಮೇಲೆ ಆಂಬ್ಯುಲೆನ್ಸ್​ ಚಾಲಕ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದ್ದು, ಚಾಲಕನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಆಂಬ್ಯುಲೆನ್ಸ್​ ಚಾಲಕನನ್ನು ಕೊಲ್ಲಂನ ಛಾವರ ಮೂಲದ ಸಾಜಿ ಕುತ್ತನ್ ಎಂದು ಗುರುತಿಸಲಾಗಿದೆ. ಕೋವಿಡ್​ನಿಂದಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಜೂನ್​ 3ರಂದು ಆಂಬ್ಯುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕರೊನಾ ರೋಗಿಗೆ ಬೆಂಬಲವಾಗಿ ಆಂಬ್ಯುಲೆನ್ಸ್​ನಲ್ಲಿ ರೋಗಿಯ ಸಂಬಂಧಿ ಯುವತಿಯೊಬ್ಬಳು ಜತೆಯಾಗಿ ತೆರಳಿದ್ದರು. ರೋಗಿಯನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿಂದ ವಾಪಸ್ಸಾಗುವ ಮುನ್ನ ಆಸ್ಪತ್ರೆಯ ಒಳಗಡೆ ಹೋದ ಸಾಜಿ ಕುತ್ತನ್​ ಗ್ಲೌಸ್​ ಹಾಕಿಕೊಂಡು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಈ ಸಂಬಂಧ ಸಂತ್ರಸ್ತ ಯುವತಿ ಕೇರಳ ಮುಖ್ಯಮಂತ್ರಿ ಕಚೇರಿಗೆ ಲಿಖಿತ ದೂರು ದಾಖಲಿಸಿದ್ದು, ಸಿಎಂ ಕಚೇರಿಯಿಂದ ಬಂದ ಸೂಚನೆ ಮೇರೆಗೆ ಆರೋಜಿ ಸಾಜಿ ಕುತ್ತನ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.(ಏಜೆನ್ಸೀಸ್​)
ಜೂನ್ 30ರೊಳಗೆ ಲಸಿಕೆ ಪಡೆದವರಿಗೆಲ್ಲಾ ಉಚಿತ ಮೊಬೈಲ್ ರೀಚಾರ್ಜ್!

ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

ದೇಶದ್ರೋಹ ಪ್ರಕರಣ: ಲಕ್ಷದ್ವೀಪ ನಟಿ ಆಯಿಷಾ ಸುಲ್ತಾನಗೆ ಬಿಗ್​ ರಿಲೀಫ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + two =
Remember me
