ಅಹಮದಾಬಾದ್​: ಜೆಪಿ ಮುಖಂಡನೋರ್ವನ ಹತ್ಯೆಗೆ ಗ್ಯಾಂಗ್​ಸ್ಟರ್ ಚೋಟಾ ಶಕೀಲ್​ ನಡೆಸಿದ್ದ ಸಂಚನ್ನು ಗುಜರಾತ್​ ಆ್ಯಂಟಿ ಟೆರರಿಸ್ಟ್​ ಸ್ಕ್ವಾಡ್​ (ಗುಜರಾತ್ ಭಯೋತ್ಪಾದನಾ ನಿಗ್ರಹ ದಳ) ವಿಫಲಗೊಳಿಸಿದೆ.
ಬಿಜೆಪಿ ಮುಖಂಡನೋರ್ವನನ್ನು ಕೊಲ್ಲಲು ಚೋಟಾ ಶಕೀಲ್​ ಕಳಿಸಿದ್ದ ಶಾರ್ಪ್​ ಶೂಟರ್​​ನನ್ನು ಎಟಿಎಸ್​ ಅಧಿಕಾರಿಗಳು ಬಂಧಿಸಿದ್ದಾರೆ.ಈ ಹಂತಕ ಅಹ್ಮದಾಬಾದ್​​ನ ರಿಲೀಫ್​ ರೋಡ್​​ನಲ್ಲಿರುವ ಹೋಟೆಲ್​ವೊಂದರಲ್ಲಿ ತಂಗಿದ್ದ. ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಎಟಿಎಸ್​ ತಂಡದ ಮೇಲೆ ಆತ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ ಯಾರಿಗೂ ಏನೂ ಅಪಾಯವಾಗಲಿಲ್ಲ. ನಂತರ ಅವನನ್ನು ಬಂಧಿಸಲಾಗಿದೆ ಎಂದು ಉಗ್ರ ನಿಗ್ರಹ ದಳದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.ಇದನ್ನೂ ಓದಿ:ಇಬ್ಬರು ಮಹಿಳೆಯರಿಗೆ ಮರಣದಂಡನೆ: ಮಾಟಮಂತ್ರಕ್ಕಾಗಿ 4 ವರ್ಷದ ಗಂಡುಮಗುವನ್ನು ಕೊಂದ ದುಷ್ಟ ಹೆಂಗಸರು…
ಆರೋಪಿಯಿಂದ ಎರಡು ಪಿಸ್ತೂಲ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆತ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ ಎಂದು ಹೇಳಿದ್ದಾರೆ. ಈತ ಮುಂಬೈನವನಾಗಿದ್ದು, ಮಂಗಳವಾರ ಇಲ್ಲಿಗೆ ಬಂದಿದ್ದ. ಅಂದು ರಾತ್ರಿಯೇ ಆತ ಎಟಿಎಸ್​ ಬಳಿ ಸಿಕ್ಕಿಬಿದ್ದಿದ್ದಾನೆ.ರಾಜ್ಯ ಬಿಜೆಪಿ ಮುಖಂಡ ಗೋರ್ಧನ್ ಜಡಾಫಿಯಾ ಹತ್ಯೆಗಾಗಿ ಈ ಶೂಟರ್​ ಬಂದಿದ್ದ. ಯಾವುದೇ ಹಾನಿ ಆಗುವ ಮೊದಲೇ ಎಟಿಎಸ್​ ಅದನ್ನು ತಡೆದಿದೆ. ಈ ಬಗ್ಗೆ ಗೃಹ ಸಚಿವ ಪ್ರದೀಪ್​ಸಿನ್ಹ್​ ಜಡೇಜಾ ಅವರು ಗೋರ್ಧನ್​ ಅವರಿಗೂ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಸುಶಾಂತ್​ಗೆ ಡಿಪ್ರೆಶನ್​ ಇತ್ತು ಅಂತ ಜನ ಯಾಕೆ ನಂಬ್ತಿಲ್ಲ? ಸ್ವರ ಪ್ರಶ್ನೆ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nine =
Remember me
