ಇಂದೋರ್:ಹಿಂದೂ ಯುವಕನ ಜೊತೆ ಮುಸ್ಲಿಂ ಹುಡುಗಿಯೊಬ್ಬಳು ರಾತ್ರಿ ಊಟಕ್ಕೆ ಹೋಗಿ ವಾಪಾಸ್‌ ಬರುವಾಗ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.
ಮುಸ್ಲಿಂ ಹುಡುಗಿ ಹಾಗೂ ಆಕೆಯ ಸ್ನೇಹಿತ ಗುರುವಾರ ರಾತ್ರಿ ರೆಸ್ಟೋರೆಂಟ್​ನಲ್ಲಿ ಊಟ ಮಾಡಿ ಹೊರಬರುವ ವೇಳೆ ಯುವಕರ ಗುಂಪೊಂದು ಅವರನ್ನು ಹಿಂಬಾಲಿಸಿ ರಸ್ತೆಯ ಮಧ್ಯೆ ತಡೆದಿದೆ. ಈ ವೇಳೆ ಮುಸ್ಲಿಂ ಹುಡುಗಿಗೆ, ನೀವು ಹಿಜಾಬ್ ಧರಿಸಿದ್ದೀರಿ, ಆದರೆ ನೀವು ಇಸ್ಲಾಂ ಧರ್ಮದ ಕಾನೂನನ್ನು ಅನುಸರಿಸುತ್ತಿಲ್ಲ. ಮುಸ್ಲಿಮೇತರರೊಂದಿಗೆ ಹೊರಗೆ ಊಟಕ್ಕೆ ಹೋಗುವ ಬದಲು ಆನ್‌ಲೈನ್‌ನಲ್ಲಿಯೇ ಆರ್ಡರ್ ಮಾಡಬಹುದಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರ್ ಪತ್ನಿ ಉದ್ಯೋಗಕ್ಕೆ ಕೊಕ್; ಅಮಾನವೀಯ ಆದೇಶವನ್ನು ಹಿಂಪಡೆಯಲು ಬಿಜೆಪಿ ಆಗ್ರಹ
ಆಗ ಹುಡುಗಿಯು, ತಾನು ಊಟಕ್ಕೆ ಹೋಗಲು ತನ್ನ ಮನೆಯಲ್ಲಿ ಪೋಷಕರ ಅನುಮತಿ ಇದೆ ಎಂದು ಹೇಳಿದ್ದು, ಹೀಗೆ ಮಾತಿಗೆ ಮಾತು ಬೆಳೆದು ಹಿಂದೂ ಯುವಕನಿಗೆ ಥಳಿಸಲು ಯುವಕರ ಗುಂಪು ಮುಂದಾಗಿದೆ. ಈ ವೇಳೆ ದಾರಿಹೋಕರು ಆತನನ್ನು ಬಿಡಿಸಲು ಮುಂದಾದಾಗ ಯುವಕರ ಗುಂಪಿನಲ್ಲಿನ ಓರ್ವ ವ್ಯಕ್ತಿಯು ದಾರಿಹೋಕರಿಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ.
ಇನ್ನು, ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
