ತಿರುವನಂತಪುರ:ಭಾರತೀಯ ಸೇನೆಯ ಯೋಧನ ಮೇಲೆ ಹಲ್ಲೆ ನಡೆಸಿ, ಆತನ ಬೆನ್ನಿನ ಮೇಲೆ ಪಿಎಫ್​ಐ ಎಂದು ಬರೆದ ಪ್ರಕರಣವೊಂದು ನಡೆದಿದೆ. ಕೇರಳದ ಕೊಲ್ಲಂ ಎಂಬಲ್ಲಿ ಸೋಮವಾರ ಈ ಪ್ರಕರಣ ನಡೆದಿದೆ.
ಹಲ್ವೀಲ್ ಶೈನ್ ಎಂಬಾತ ಹಲ್ಲೆಗೀಡಾದ ಸೈನಿಕ. ಈ ಯೋಧನನ್ನು ಮನೆಯಿಂದ ಹೊರಗೆಳೆದು ತಂದ ದುಷ್ಕರ್ಮಿಗಳು ಕೈಗಳನ್ನು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ ಥಳಿಸಿ ಒದ್ದು ವಿಕೃತಿ ಮೆರೆದಿದ್ದರು ಎಂಬುದು ತಿಳಿದುಬಂದಿದೆ. ಹಲ್ಲೆಗೀಡಾದ ಯೋಧ ರಾಜಸ್ಥಾನದಲ್ಲಿರುವ ಸೇನೆಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕ್ಯಾನಿಕಲ್ ಕೇಡರ್​ನಲ್ಲಿ ಕರ್ತವ್ಯದಲ್ಲಿದ್ದವರು ಎಂದು ತಿಳಿದುಬಂದಿದೆ.
ಬಳಿಕ ಯೋಧನ ಬೆನ್ನಿನ ಮೇಲೆ ಪಿಎಫ್​ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಎಂಬುದಾಗಿ ಬರೆದಿದ್ದರು. ದುಷ್ಕರ್ಮಿಗಳ ತಂಡದಲ್ಲಿ ಆರು ಮಂದಿ ಇದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಫ್​ಐ ನಿಷೇಧಿತ ಸಂಘಟನೆಯಾಗಿದ್ದು, ಈ ಹಲ್ಲೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ನಾಳೆ ಇಡೀ ಬೆಂಗಳೂರು ಬಂದ್ ಆಗ್ಬೇಕು; ಅದಾಗ್ಯೂ ವ್ಯಾಪಾರ ಮಾಡಿದ್ರೆ ಮುಂದಾಗುವ ತೊಂದರೆಗೆ ನೀವೇ ಹೊಣೆ: ಬಿಎಸ್​ವೈ

ಮೀನು ಮಾರುವವರಿಗೂ ಎಚ್ಚರಿಕೆ: ಆ ಒಂದು ದಿನ ಮಾರಾಟ ಮಾಡಿದರೆ ಕಾನೂನು ಕ್ರಮ, ದಂಡನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
