ಮುಂಬೈ: ನೌಕಾಪಡೆ ನಿವೃತ್ತ ಅಧಿಕಾರಿಯ ಮೇಲೆ ಶಿವಸೇನೆಯ ಸುಮಾರು 12 ಕಾರ್ಯಕರ್ತರು ತೀವ್ರ ದಾಳಿ ನಡೆಸಿದ್ದರು. ಮನೆಯಿಂದ ಹೊರಗೆ ಕಳಿದು ಹೊಡೆದ ಪರಿಣಾಮ 66 ವರ್ಷದ ನಿವೃತ್ತ ಅಧಿಕಾರಿಯ ಕಣ್ಣಿಗೆ ಗಂಭೀರ ಗಾಯವಾಗಿದೆ.
ಗಾಯಗೊಂಡ ಮದನ್​ ಶರ್ಮಾ ಅವರೊಂದಿಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರೂ ಕೂಡ ಮಾತುಕತೆ ನಡೆಸಿದ್ದಾರೆ.  ಇಷ್ಟೆಲ್ಲ ಆದಮೇಲೆ ಘಟನೆಗೆ ಸಂಬಂಧಪಟ್ಟಂತೆ ಶಿವಸೇನೆ ಪ್ರತಿಕ್ರಿಯೆ ನೀಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರ ಕಾರ್ಟೂನ್​ ಶೇರ್​ ಮಾಡಿದ್ದಕ್ಕೆ ಉದ್ರಿಕ್ತಗೊಂಡವರು ಸ್ವಯಂ ಪ್ರೇರಣೆಯಿಂದ ಈ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ.ಇದನ್ನೂ ಓದಿ:ಒಂಟಿ ಮನೆಯಲ್ಲಿ ಡಬಲ್​ ಮರ್ಡರ್​; ವೃದ್ಧ ದಂಪತಿಯ ಭೀಕರ ಹತ್ಯೆ
ಶಿವಸೇನೆ ಮುಖ್ಯಸ್ಥ, ವಕ್ತಾರ ಸಂಜಯ್​ ರಾವತ್​ ಅವರು ಮಾತನಾಡಿ, ಮಹಾರಾಷ್ಟ್ರದಲ್ಲಿ ಕಾನೂನುಗಳನ್ನು ಕೈಗೆ ತೆಗೆದುಕೊಳ್ಳುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಇದು ಉದ್ಧವ್ ಠಾಕ್ರೆಯವರ ನೀತಿ ಎಂದು ತಿಳಿಸಿದ್ದಾರೆ.ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್​ ಶರ್ಮಾ ಅವರು ಉದ್ಧವ್ ಠಾಕ್ರೆಯವರನ್ನು ಅವಹೇಳನ ಮಾಡುವಂಥ ವ್ಯಂಗ್ಯಚಿತ್ರವನ್ನು ವಾಟ್ಸ್​​ಆ್ಯಪ್​​ನಲ್ಲಿ ಫಾರ್​ವಾರ್ಡ್ ಮಾಡಿದ್ದರು. ಇದರಿಂದಾಗಿ ಶಿವಸೈನಿಕರು ಸಿಟ್ಟಾಗಿ, ಸ್ವಯಂಪ್ರೇರಿತರಾಗಿ ಹಲ್ಲೆ ಮಾಡಿದ್ದಾರೆ. ದಾಳಿ ಮಾಡಿದವರನ್ನು ಆಗಲೇ ಬಂಧಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ವೇದಿಕೆ ಮೇಲೆ ಸಚಿವರ ಕೂದಲು ಕತ್ತರಿಸಿದ…60,000 ರೂ.ಪಡೆದ !
ಈ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸಿದೆ. ಸಂಯಮ ಎರಡೂ ಕಡೆಯಿಂದಲೂ ಇರಬೇಕಿತ್ತು. ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಅಥವಾ ಮುಖ್ಯಮಂತ್ರಿಗಳು ಸೇರಿ ಗಣ್ಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದರೆ ಅವರ ಬೆಂಬಲಿಗರು ನಿಯಂತ್ರಣ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)
VIDEO: ನೌಕಾಪಡೆ ನಿವೃತ್ತ ಅಧಿಕಾರಿಯನ್ನು ಥಳಿಸಿದ ಶಿವಸೇನೆ ಗೂಂಡಾಗಳು; ಕಣ್ಣಿಗೆ ಗಂಭೀರ ಗಾಯ

ಫೇಸ್‌ಬುಕ್ ಅಧಿಕಾರಿಯ ವಿಚಾರಣೆಗೆ ಮುಂದಾದ ವಿಧಾನಸಭೆ ಸಮಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
