ಖಮ್ಮಮ್​:ದಿನೇದಿನೆ ಮನುಷ್ಯರಲ್ಲಿ ಮಾನವೀಯತೆ ನಶಿಸಿ ಹೋಗುತ್ತಿದೆಯಾ? ರಕ್ತ ಸಂಬಂಧ ಎಂಬುದನ್ನು ನೋಡದೆ ಮೃಗೀಯ ವರ್ತಿಸುವಂತಹ ಘಟನೆಗಳು, ಮಾನವನ ಮೌಲ್ಯಗಳು ಕುಸಿಯುತ್ತಿವೆ ಎಂಬುದನ್ನು ಎತ್ತಿ ತೋರಿಸುವಂತಹ ಪ್ರಸಂಗಗಳು ಆಗಾಗ ಬೆಳಕಿಗೆ ಬರುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಇದೀಗ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕಾಮುಕ ಸಹೋದರನೊಬ್ಬ ಸ್ವಂತ ಸಹೋದರಿ ಮೇಲೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಭದ್ರಾದ್ರಿ ಕೊಟ್ಟಗುಡೆಮ್​ ಜಿಲ್ಲೆಯಲ್ಲಿ ನಡೆದಿದೆ. ತಂದೆಯಿಲ್ಲದ ಸಂತ್ರಸ್ತೆ ತನ್ನ ತಾಯಿ ಮತ್ತು ಸಹೋದರನ ಜತೆ ವಾಸವಿದ್ದಳು. ಈ ಕ್ರೌರ್ಯದ ಬಗ್ಗೆ ತಾಯಿ ಮತ್ತು ಅಜ್ಜಿಗೆ ಹೇಳಿಕೊಂಡರು ಸಹ ತಲೆಕೆಡಿಸಿಕೊಳ್ಳದ ಪಾಲಕರು ಕಾಮುಕನ ಬೆಂಬಲಕ್ಕೆ ನಿಂತಿದ್ದು ಶೋಚನೀಯ ಸಂಗತಿಯಾಗಿದೆ.
ಪಾಲಕರು ಸಂತ್ರಸ್ತೆಯ ಬೆಂಬಲಕ್ಕೆ ನಿಲ್ಲದಿದ್ದಾಗ ಆಕೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಹೇಳಿಕೆಯಂತೆ ಸ್ವಂತ ಅಣ್ಣನೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಭದ್ರಾದ್ರಿ ಎಂದು ಗುರುತಿಸಲಾಗಿದೆ. ಈತ ಕೆಲವು ತಿಂಗಳಿಂದ ಸಹೋದರಿಗೆ ಕಿರುಕುಳ ನೀಡಿತ್ತಿದ್ದನಂತೆ. ಈ ಬಗ್ಗೆ ತಾಯಿಯ ಬಳಿ ಹೇಳಿಕೊಂಡರು ಯಾವುದೇ ಸಹಾಯ ಮಾಡಿಲ್ಲ.
ಇದನ್ನೂ ಓದಿರಿ:90 ರೂ. ಇದ್ದ ಬಸ್​ ಟಿಕೆಟ್​ ದರ 180ಕ್ಕೆ ಏರಿಕೆ! ಪ್ರಯಾಣಿಕರೇ ಮನೆಯಿಂದ ಹೊರ ಹೋಗುವ ಮುನ್ನ ಜೇಬಲ್ಲಿ ಕಾಸಿದ್ಯಾ ನೋಡಿ
ಇದಾದ ಬಳಿಕ ಅಜ್ಜಿ ಮತ್ತು ತಾತನ ಮನೆಗೆ ಸಂತ್ರಸ್ತೆ ತನ್ನ ನೋವನ್ನು ಹೇಳಿಕೊಳ್ಳಲು ಹೋದರೆ ಅಲ್ಲಿಯೂ ಸಹ ಅವರು ಆಕೆಗೆ ಬೆಂಬಲ ನೀಡಲಿಲ್ಲ. ಅದರ ಬದಲಾಗಿ ಅಜ್ಜಿ-ತಾತನ ಮಗನೇ ಸಂತ್ರಸ್ತೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಕಷ್ಟ ಹೇಳಿಕೊಳ್ಳಲು ಹೋದವಳ ಮೇಲೆ ಮತ್ತೆ ದೌರ್ಜನ್ಯ ನಡೆದಿದೆ. ಅಲ್ಲದೆ, ಈ ಬಗ್ಗೆ ಯಾರಿಗೂ ಹೇಳಿದಂತೆ ಬೆದರಿಕೆಯನ್ನು ಹಾಕಿದ್ದಾರೆ.
ಆದರೆ, ಕೊನೆಗೂ ಏನಾದರೂ ಆಗಲಿ ಎಂದು ಧೈರ್ಯ ಮಾಡಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ದ್ವಿಚಕ್ರ ವಾಹನದಲ್ಲಿ ಇವಿಎಂ ಸಾಗಿಸ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!

ಮನೆಯ ಫ್ರಿಡ್ಜ್​ನಲ್ಲಿತ್ತು ಮೃತದೇಹ: ನಿಗೂಢ ಕೇಸ್​ ಬೆನ್ನತ್ತಿ ಹೋದ ಪೊಲೀಸರಿಗೆ ಮಹಿಳೆಯ ಕರಾಳ ಮುಖ ಬಯಲು!

Web Exclusive | ಇಂಜಿನಿಯರಿಂಗ್ ವ್ಯಾಸಂಗಕ್ಕೆ ನಿರಾಸಕ್ತಿ, ಖಾಸಗಿ ಸಂಸ್ಥೆಗಳಲ್ಲಿ ಮುಚ್ಚುವ ಸ್ಥಿತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
