ಬೆಂಗಳೂರು:ತಮಿಳುನಾಡಿನಿಂದ ಬಂದಿದ್ದ ಡಿಎಂಕೆ ನಾಯಕನೊಬ್ಬನ ಮೇಲೆ ಬೆಂಗಳೂರಿನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹಿಂಬಾಲಿಸಿಕೊಂಡು ಬಂದಿದ್ದ ವಿರೋಧಿಗಳು ಹೋಟೆಲೊಂದರಲ್ಲಿ ಚಹಾ ಕುಡಿಯುತ್ತಿರುವಾಗ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ಡಿಎಂಕೆ ನಾಯಕ ವಿ.ಕೆ.ಗುರುಸ್ವಾಮಿ (55) ಹಲ್ಲೆಗೀಡಾದ ವ್ಯಕ್ತಿ. ಬಾಣಸವಾಡಿಯ ಕಮ್ಮನಹಳ್ಳಿ ಸುಖಸಾಗರ್ ಹೊಟೇಲ್ ಒಳಗೆ ಈ ಘಟನೆ ನಡೆದಿದೆ. ತಮಿಳುನಾಡಿನಿಂದ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಐವರು, ಗುರುಸ್ವಾಮಿ ಚಹಾ ಕುಡಿಯುತ್ತಿದ್ದಾಗ ಮಚ್ಚು ಲಾಂಗ್​ನಿಂದ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಶಾಲಾ ಬಸ್​ನಿಂದ ಕೆಳಕ್ಕೆ ಬಿದ್ದ ಬಾಲಕ; ತಲೆ ಮೇಲೇ ಸಾಗಿದ ವಾಹನ, ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಗುರುಸ್ವಾಮಿ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಲ್ಲೆಗೊಳಾಗಿರುವ ಗುರುಸ್ವಾಮಿಗೆ ಎಐಎಡಿಎಂಕೆ ನಾಯಕ ಅಟ್ಯಾಕ್ ಪಾಂಡಿಯನ್ ಜೊತೆಗೆ ಹಲವು ವರ್ಷಗಳಿಂದ ವೈರತ್ವ ಇದೆ ಎನ್ನಲಾಗಿದೆ. ಇವರಿಬ್ಬರ ಗ್ಯಾಂಗ್​ವಾರ್​​ನಿಂದಾಗಿ ಸರಣಿ ಕೊಲೆಗಳಾಗಿದ್ದು, 20 ಮಂದಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇದೆ. ತಮಿಳುನಾಡಿನಲ್ಲಿ ಇವರ ಗ್ಯಾಂಗ್​ವಾರ್ ಸಾಕಷ್ಟು ಸದ್ದು ಮಾಡಿತ್ತು.
ಇದನ್ನೂ ಓದಿ:ರಾತ್ರಿ ಪೊಲೀಸ್ ಭದ್ರತೆ ಇಲ್ಲದೆ ಹೋಗಿ ಮೈನಿಂಗ್ ಮಾಫಿಯಾ ತಡೆದ ಮಹಿಳಾ ಅಧಿಕಾರಿ
ಹಳೇ ದ್ವೇಷದ ಹಿನ್ನೆಲೆಯಲ್ಲಿ ತಮಿಳುನಾಡಿನಿಂದಲೇ ಗುರುಸ್ವಾಮಿಯನ್ನು ಈ ತಂಡ ಹಿಂಬಾಲಿಸಿಕೊಂಡು ಬಂದಿತ್ತು. ಲಿಟಿಗೇಷನ್ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಗುರುಸ್ವಾಮಿ ಬೆಂಗಳೂರಿಗೆ ಬಂದಿದ್ದ. ಹೋಟೆಲ್​ನಲ್ಲಿ ಬ್ರೋಕರ್ ಜತೆ ಮಾತನಾಡುತ್ತಿದ್ದಾಗ ಈ ದಾಳಿ ನಡೆದಿದೆ. ಗುರುಸ್ವಾಮಿ ಪರಿಸ್ಥಿತಿ ಗಂಭೀರವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉದ್ಯಮಿ ಮನೆ ಮೇಲೆ ಗುಂಡಿನ ದಾಳಿ, ಪುತ್ರ ಕೂದಲೆಳೆಯ ಅಂತರದಲ್ಲಿ ಪಾರು; ನಾಯಿಗಳಿಗೆ ಗುಂಡು ತಾಗಿ 1 ಶ್ವಾನ ಸಾವು

ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
