ಮುಂಬೈ:ಮಹಾರಾಷ್ಟ್ರದ ಖತರ್ನಾಕ್ ಖದೀಮರು ತೆಲಂಗಾಣ ಮೂಲದ ಯಾತ್ರಿಗಳ ಮೇಲೆ ದಾಳಿ ಮಾಡಿ ಹಣ ದೋಚಿರುವ ಆತಂಕಕಾರಿ ಘಟನೆ ಮಹಾರಾಷ್ಟ್ರದ ವಾಸಿಯಲ್ಲಿ ನಡೆದಿದೆ.
ಸಂತ್ರಸ್ತರೆಲ್ಲರು ತೆಲಂಗಾಣದ ವಿಕಾರಬಾದ್​ ಜಿಲ್ಲೆಯವರು. ಸಂತ್ರಸ್ತರ ಮೇಲೆ ಖದೀಮರು ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.​ವಿಕಾರಬಾದ್​ನ ಕೆರಮುಲು ಬಂಡವೆಲ್ಕಿರ್ಕಳ ಗ್ರಾಮದ ಶಾಲಾ ಮುಖ್ಯೋಪಧ್ಯಾಯ ಹಾಗೂ ಕುಲ್ಕಾಚಾರ್ಲಾದ ತೆಲಂಗಾಣ ಗ್ರಾಮೀಣ ಬ್ಯಾಂಕ್​ ಮ್ಯಾನೇಜರ್​ ರಮೇಶ್ ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದಲ್ಲಿರುವ ಶಿರಡಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇಬ್ಬರು ತಮ್ಮ ಕುಟುಂಬದೊಂದಿಗೆ ಯಾತ್ರೆ ಮುಗಿಸಿ ಶುಕ್ರವಾರ ಮರಳಿ ಬರುತ್ತಿದ್ದರು. ವಾಸಿ ಸಮೀಪ ಬಂದಾಗ ಕಾರು ಪಂಕ್ಚರ್​ ಆಗಿದೆ. ಖದೀಮರು ಮೊಳೆಗಳನ್ನು ಇಟ್ಟು ಕಾರು ಪಂಚರ್​ ಮಾಡಿದ್ದಾರೆ.
ಇದನ್ನೂ ಓದಿರಿ:ಪ್ರಾಮಿಸ್​ ದಿನದಂದೇ ಪ್ರೀತಿ ತಿರಸ್ಕರಿಸಿದ ಯುವತಿಗೆ ಸಾವಿನ ಶಿಕ್ಷೆ ಕೊಟ್ಟ ಪ್ರಿಯಕರ!
ಇತ್ತ ಖದೀಮರನ್ನು ನೋಡಿ ಪಂಚರ್ ಕಾರಿನಲ್ಲಿ ಎಸ್ಕೇಪ್​ ಆಗಲು ಪ್ರಯತ್ನಿಸಿದಾಗ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ. ಉದ್ರಿಕ್ತಗೊಂಡಿದ್ದ ಖದೀಮರ ಗುಂಪು ಇಬ್ಬರ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ. ಲಾಂಗು ಮಚ್ಚುಗಳನ್ನು ಮುಂದಿಟ್ಟು ಬೆದರಿಸಿ ಹಣ, ಆಭರಣಗಳನ್ನು ದೋಚಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ನನ್ನನ್ನು ಸಾವಿನ ಕಡೆಗೆ ನೂಕಲಾಗುತ್ತಿದೆ: ಪ್ರಧಾನಿ ಮೋದಿಗೆ ಟ್ವೀಟ್​ ಟ್ಯಾಗ್​ ಮಾಡಿ ಕಣ್ಣೀರಿಟ್ಟ ನಟಿ!

ಪ್ರಾಮಿಸ್​ ದಿನದಂದೇ ಪ್ರೀತಿ ತಿರಸ್ಕರಿಸಿದ ಯುವತಿಗೆ ಸಾವಿನ ಶಿಕ್ಷೆ ಕೊಟ್ಟ ಪ್ರಿಯಕರ!

ರೇಪ್ ಮಾಡಿದ ಎಂದಳು, ಆದರೆ ಕೈಯಲ್ಲಿ ಅವನ ಹೆಸರ ಟಾಟೂ ಇತ್ತು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − four =
Remember me
