ಕೇರಳ:‘ನನ್ನನ್ನು ಸುಮಾರು 45 ದಿನಗಳ ಕಾಲ ಅವರು ಪ್ರಾಣಿಗಳ ಥರ ಕಾಡಿದರು, ಆಗ ಒಬ್ಬರೂ ಸಹಾಯಕ್ಕೆ ಬರಲಿಲ್ಲ. ನಾನು ರಾಜ್ಯವನ್ನು ತೊರೆಯುತ್ತಿದ್ದೇನೆ ಎಂದು ಯಾರೂ ತಪ್ಪು ತಿಳಿಯಬೇಡಿ, ಅವರೇ ನನ್ನನ್ನು ಹೊರಗೆ ಹಾಕಿದರು..’– ಹೀಗೆಂದು ಕೋಟ್ಯಧಿಪತಿ ಉದ್ಯಮಿಯೊಬ್ಬರು ಸಂಕಟವನ್ನು ತೋಡಿಕೊಂಡಿದ್ದು, ಅವರೀಗ ಇನ್ನೊಂದು ರಾಜ್ಯದತ್ತ ಮುಖ ಮಾಡಿದ್ದು, ಅಲ್ಲಿಯೇ ಕೋಟಿಗಟ್ಟಲೆ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಅಷ್ಟಕ್ಕೂ ಅವರು ಹೀಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ಕೇರಳ ಸರ್ಕಾರದ ಕುರಿತು.
ಕೇರಳದ ಗಾರ್ಮೆಂಟ್​ ಕ್ಷೇತ್ರದಲ್ಲಿನ ದೊಡ್ಡ ಹೆಸರಾಗಿರುವ ‘ಕಿಟೆಕ್ಸ್​’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಾಬು ಎಂ. ಜಾಕೊಬ್​ ಕೇರಳ ಸರ್ಕಾರದ ಕುರಿತು ಈ ರೀತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ ಸುಮಾರು 3,500 ಕೋಟಿ ರೂ. ಹೂಡಿಕೆ ನಡೆಸುವ ಕುರಿತು ಅಲ್ಲಿನ ಸರ್ಕಾರದ ಜತೆ ಮಾತುಕತೆ ನಡೆಸುವ ಸಲುವಾಗಿ ಹೊರಟಿದ್ದ ಅವರು, ವಿಮಾನನಿಲ್ದಾಣದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ನಾನು 3,500 ಕೋಟಿ ರೂ. ಹೂಡಿಕೆಯನ್ನು ಹಿಂದೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದಾಗ ಕೇರಳ ಸರ್ಕಾರದಿಂದ ಒಬ್ಬರೂ ನನ್ನನ್ನು ಯಾಕೆ ಏನು ಎಂದು ಕೇಳಲಿಲ್ಲ. ಆದರೆ ಬೇರೆ 9 ರಾಜ್ಯಗಳ ಮುಖ್ಯಮಂತ್ರಿ, ಕೈಗಾರಿಕಾ ಮಂತ್ರಿಗಳಿಂದ ನನಗೆ ಕರೆಗಳು ಬಂದಿದ್ದವು. ಇವತ್ತು ನನಗೆ ತೆಲಂಗಾಣ ಸರ್ಕಾರದವರು ಮಾತುಕತೆಗೆ ಬರಲು ಪ್ರೈವೇಟ್​ ಜೆಟ್ ಕಳುಹಿಸಿದ್ದಾರೆ. ನೆರೆಯ ರಾಜ್ಯಗಳು ಬದಲಾಗುತ್ತಿದ್ದರೂ, ಜಗತ್ತೇ ಬದಲಾಗುತ್ತಿದ್ದರೂ ಕೇರಳ ಇನ್ನೂ ಹಳೆಯ ಕಾಲದಲ್ಲೇ ಇದೆ ಎಂದ ಜಾಕೊಬ್, ಕೇರಳ ಸರ್ಕಾರ ತಮಗೆ ಕೊಟ್ಟ ಹಿಂಸೆಯನ್ನು ವಿವರಿಸಿದರು.
ಇದನ್ನೂ ಓದಿ:‘ಕಪಿಲ್​ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?
ನಾನಿವತ್ತು ತುಂಬಾ ದುಃಖಿತನಾಗಿದ್ದೇನೆ. ನೋವಲ್ಲಿರುವ ನನಗೆ ಬೇರೆ ದಾರಿ ಇಲ್ಲ. ಒಬ್ಬ ಉದ್ಯಮಿಗೆ ಮಾನಸಿಕ ಶಾಂತಿ ಮುಖ್ಯ, ಅದು ಇಲ್ಲಿಲ್ಲ. ಕಳೆದ 45 ದಿನಗಳಲ್ಲಿ ಅವರು ನನ್ನನ್ನು ಪ್ರಾಣಿಗಳ ರೀತಿ ಕಾಡಿದರು, ಆಗ ಯಾರೂ ನೆರವಿಗೆ ಬರಲಿಲ್ಲ. ನನ್ನ ಕಥೆ ಬಿಡಿ, ನಾನು ಹೇಗೋ ನಿಭಾಯಿಸುತ್ತೇನೆ. ಆದರೆ ಸಣ್ಣಪುಟ್ಟ ವ್ಯವಹಾರಸ್ಥರ ಪರಿಸ್ಥಿತಿ ತುಂಬಾ ಕಷ್ಟ. ಹೀಗೇ ಆದರೆ ಕೇರಳದಲ್ಲಿನ ಯುವಕರೆಲ್ಲ ಊರುಬಿಟ್ಟು, ಅದು ಹಿರಿಯನಾಗರಿಕರಷ್ಟೇ ಇರುವ ರಾಜ್ಯವಾದರೂ ಅಚ್ಚರಿ ಇಲ್ಲ ಎಂದು ಜಾಕೊಬ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)
ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಅಂದ್ರು 281 ವೈದ್ಯರು!; ಯಾಕೆ, ಯಾರಲ್ಲಿ?

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ಯೋಗೀಶ್​ ಗೌಡ ಕೊಲೆ ಪ್ರಕರಣ: ಪತ್ನಿಯ ಮುಖದಲ್ಲಿ ನಗು, ಅಳುತ್ತಿದ್ದ ಅಧಿಕಾರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 4 =
Remember me
