|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಚುನಾವಣೆ ವರ್ಷ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ನಾಯಕತ್ವದ ಪೈಪೋಟಿ ತೀವ್ರಗೊಂಡಿದ್ದು, ಈ ಬೆಳವಣಿಗೆ ಪಕ್ಷದ ಹೈಕಮಾಂಡ್​ಗೆ ಕಸಿವಿಸಿ ತಂದಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆಗಳು ರಾಜಕೀಯ ನಾಯಕರ ಇಮೇಜ್ ಹೆಚ್ಚಿಸಿದ ಉದಾಹರಣೆ ಇದೆ. ಇದೇ ಹಾದಿಯಲ್ಲಿ ಚುನಾವಣೆಗೆ ಮುನ್ನ ನಾಯಕತ್ವ ಚಹರೆ ಕಟ್ಟಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಸಂಘಟಿಸಿದ್ದಾರೆ. ಇದು ಸಿದ್ದರಾಮಯ್ಯ ಆಪ್ತ ಶಾಸಕರಿಗೆ ಸಹ್ಯವೆನಿಸಿಲ್ಲ. ಹಳೇ ಮೈಸೂರು ಭಾಗವನ್ನು ಗಮನದಲ್ಲಿಟ್ಟುಕೊಂಡು ಶಿವಕುಮಾರ್ ಪಾದಯಾತ್ರೆಗೆ ವೇಳಾಪಟ್ಟಿ ಸಿದ್ಧಮಾಡಿಕೊಂಡು ಪೂರ್ವಭಾವಿ ಸಿದ್ಧತಾ ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಆಪ್ತ ಶಾಸಕರು ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ದೂರು ನೀಡಿದ್ದರು. ಈ ದೂರನ್ನು ಮುಂದಿಟ್ಟುಕೊಂಡು ಎಲ್ಲರೆದುರು ಇರಿಸುಮುರಿಸಾಗುವಂತೆ ಡಿಕೆಶಿಗೆ ಸಿದ್ದರಾಮಯ್ಯ ಬಿಸಿಮುಟ್ಟಿಸಿದ್ದರು. ತಮ್ಮ ಜಿಲ್ಲೆಗಳಲ್ಲಿ ತಮ್ಮ ಗಮನಕ್ಕೆ ತೆಗೆದುಕೊಳ್ಳದೇ ಸಭೆ ನಡೆಸುವಂತಿಲ್ಲ ಎಂದು ತಾಕೀತು ಮಾಡಿದ್ದರು. ಇದರ ಭಾಗವಾಗಿಯೇ ಸಿದ್ದರಾಮಯ್ಯರನ್ನು ಮೀರಿ ಬೆಳೆಯುವ ಡಿಕೆಶಿ ಪ್ರಯತ್ನದ ವಿರುದ್ಧ ಕೆಲ ಶಾಸಕರು ಹೈಕಮಾಂಡ್ ಮಟ್ಟದಲ್ಲಿ ದೂರು ನೀಡಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ದೆಹಲಿಗೆ ತೆಳಿದ್ದ ಶಾಸಕರೊಬ್ಬರು ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದು, ಈ ವೇಳೆ ‘ಡಿಕೆಶಿಯನ್ನು ನಿಯಂತ್ರಿಸಿ’ ಎಂಬರ್ಥದಲ್ಲಿ ಮನವಿ ಮಾಡಿ, ಪ್ರತಿಪಕ್ಷ ನಾಯಕರು ಬೇಸರಗೊಂಡಿದ್ದಾರೆಂಬ ಅಂಶವನ್ನು ಗಮನಕ್ಕೆ ತಂದಿದ್ದಾರೆಂದು ಗೊತ್ತಾಗಿದೆ. ವಾರದ ಹಿಂದಷ್ಟೇ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಾಯಕರ ನಡುವೆ ಶೀತಲ ಸಮರ ನಡೆದಿತ್ತು. ಇದಕ್ಕೆ ಪಕ್ಷದ ಹಲವು ಶಾಸಕರು, ನಾಯಕರು ಸಾಕ್ಷಿಯಾಗಿದ್ದರು. ಇಬ್ಬರು ನಾಯಕರು ಅಕ್ಕಪಕ್ಕ ಕುಳಿತಿದ್ದರು ಎಲ್ಲರೆದುರು ಮುಖಕೊಟ್ಟು ಮಾತನಾಡದೇ ಪದಗಳ ವಿನಿಮಯ ಮಾಡಿಕೊಂಡಿರುವುದು, ಜತೆಗೆ ಡಿಕೆಶಿಗೆ ಫರ್ವನು ರೀತಿ ಸೂಚನೆ ನೀಡಿದ್ದು ಪಕ್ಷದಲ್ಲಿ ಬಹು ರ್ಚಚಿತ ವಿಷಯವಾಗಿದೆ. ಇದರ ಮುಂದುವರಿದ ಭಾಗವಾಗಿ ದೆಹಲಿಯಲ್ಲಿ ಸಿದ್ದರಾಮಯ್ಯ ಆಪ್ತ ಶಾಸಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಟ್ಟದಲ್ಲಿ ದೂರಿತ್ತಿದ್ದಾರೆಂದು ಗೊತ್ತಾಗಿದೆ. ಡಿಕೆಶಿ ಜತೆಗೆ ಗುರುತಿಸಿಕೊಂಡ ಶಾಸಕರೊಬ್ಬರು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿ, ರಾಜಕೀಯ ಪಕ್ಷಗಳಲ್ಲಿ ನಾಯಕತ್ವಕ್ಕೆ ಪೈಪೋಟಿ ನಡೆಯುವುದು ಸಹಜ ಮತ್ತು ಸಾಮಾನ್ಯ. ದೆಹಲಿಯಲ್ಲಿ ದೂರು ಕೊಟ್ಟ ವಿಚಾರ ಗಮನಕ್ಕೆ ಬಂದಿಲ್ಲ. ಆದರೆ, ಹಿರಿಯ ನಾಯಕರೆನಿಸಿಕೊಂಡವರ ಆಪ್ತ ಶಾಸಕರು ಪಕ್ಷದ ಅಧ್ಯಕ್ಷರ ವಿರುದ್ಧದ ನಡವಳಿಕೆ ಸರಿಕಾಣಲಿಲ್ಲ. ಸೂಕ್ತ ವೇದಿಕೆಯಲ್ಲಿ ಇದನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತದೆ ಎಂದರಲ್ಲದೇ, ಇಂತಹ ಬೆಳವಣಿಗೆ ಕಂದಕ ಹೆಚ್ಚಾಗಲು ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು. ಪಕ್ಷದ ಅಧ್ಯಕ್ಷರ ವಿರುದ್ಧ ದೆಹಲಿಯಲ್ಲಿ ನಮ್ಮವರೇ ಕೆಲವರು ಚಾಡಿ ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ಇಂತಹ ದೂರಿಗೆ ಸ್ಪಂದಿಸುವುದಿಲ್ಲ ಎಂದು ನಂಬಿದ್ದೇವೆ ಎಂದರು.
ಏರಿದ ಡಿಕೆಶಿ ತಕ್ಕಡಿ?:ಡಿ.ಕೆ.ಶಿವಕುಮಾರ್ ತಕ್ಕಡಿ ಏಳುತ್ತಿಲ್ಲ ಎಂದು ಸಿದ್ದರಾಮಯ್ಯ ಆಪ್ತರು ಮಾಧ್ಯಮಗಳ ಕ್ಯಾಮರಾ ಸಮ್ಮುಖ ಪಿಸುಗುಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ವಿಧಾನಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಡಿಕೆಶಿ ತಕ್ಕಡಿ ಏರಲು ಆರಂಭವಾಗಿದೆ ಎಂದು ಅಧ್ಯಕ್ಷರ ಆಪ್ತರು ಹೇಳಿಕೊಳ್ಳಲಾರಂಭಿದ್ದಾರೆ. ಮುಂದೆ ನಡೆಯುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೂ ಪಕ್ಷದ ಅಧ್ಯಕ್ಷರು ಗಮನ ಹರಿಸಿದ್ದು, ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರಲು ಜವಾಬ್ದಾರಿ ನೀಡುತ್ತಾರೆ. ಅಲ್ಲಿಯೂ ಉತ್ತಮ ಫಲಿತಾಂಶ ಬರಲಿದೆ, ಇದು ಪಕ್ಷದ ಅಧ್ಯಕ್ಷರ ತಕ್ಕಡಿಯನ್ನು ಮತ್ತಷ್ಟು ಎತ್ತರಕ್ಕೆ ಏರುವಂತೆ ಮಾಡಲಿದೆ ಎಂದು ಮುಖಂಡರೊಬ್ಬರು ತಿಳಿಸಿದರು.
ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಹಾಗೂ ಚುನಾವಣೆಗೆ ಯಾರ ನಾಯಕತ್ವ ವಿಷಯವಾಗಿ ಕಾಂಗ್ರೆಸ್​ನಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಮತ್ತೆ ಹೊಗೆಯಾಡಲು ಆರಂಭವಾಗಿದೆ. ಚುನಾವಣೆಗೆ ವರ್ಷ ಹತ್ತಿರ ಬರುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಮೇಲೆ ಹಿಡಿತ ತಪ್ಪದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ. ಇದೇ ವೇಳೆ ನಾಯಕತ್ವದ ಬಗ್ಗೆ ಕಳೆದ ಎರಡು ದಿನಗಳಿಂದ ಹೇಳಿಕೆ ಕೇಳಿಕೆ ಆರಂಭವಾಗಿದೆ. ತಮ್ಮ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಡಿಕೆಶಿ ಹೇಳಿದ್ದಾರೆಂಬ ಮಾತಿಗೆ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ, ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತೇವೆ ಎಂದು ದಾಳ ಉರುಳಿಸಿದ್ದಾರೆ. ನಾನು ಶಾಸಕಾಂಗ ಪಕ್ಷದ ನಾಯಕ, ಡಿಕೆಶಿಯವರು ಕೆಪಿಸಿಸಿ ಅಧ್ಯಕ್ಷರು, ಹಾಗೆಯೇ ಖರ್ಗೆ ಕೂಡ ಇದ್ದಾರೆ. ನಾವು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಒಕ್ಕಲಿಗ ಟ್ರಂಪ್ ಕಾರ್ಡ್:ಹಳೇ ಮೈಸೂರು ಭಾಗದಲ್ಲಿ ಕಳೆದ ಬಾರಿ ಎಚ್.ಡಿ. ಕುಮಾರಸ್ವಾಮಿ ಹಿಂದೆ ಹೋಗಿದ್ದ ಒಕ್ಕಲಿಗ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಡಿಕೆಶಿಯವರು ಎಚ್​ಡಿಕೆ ಹಾದಿಯಲ್ಲೇ ಸಾಗುವ ಸುಳಿವು ನೀಡಿದ್ದಾರೆ. 2018ರ ವಿಧಾನಸಭೆ ಚುನಾವಣೆ ವೇಳೆ, ತಮಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿದೆ ಎಂಬ ಟ್ರಂಪ್ ಕಾರ್ಡ್ ಬಳಸಿ ಎಚ್​ಡಿಕೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರಲು ಪ್ರಯತ್ನಿಸಿದ್ದರು. ಈ ಬಾರಿ ಡಿಕೆಶಿ ಪಾದಯಾತ್ರೆ ಮೂಲಕ ಇದೇ ದಾಟಿಯಲ್ಲಿ ಹೊರಟಿದ್ದಾರೆಂಬ ಚರ್ಚೆ ಕಾಂಗ್ರೆಸ್​ನಲ್ಲಿದೆ. ತಮ್ಮ ಪರವಾದ ಶಾಸಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬಂದರೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವೇಳೆ ತಮಗೆ ಮೇಲುಗೈ ಸಾಧ್ಯ ಎಂದರಿತಿದ್ದು, ಈ ನಿಟ್ಟಿನಲ್ಲಿ ವಿವಿಧ ಪಟ್ಟುಗಳನ್ನು ಹಾಕಲಾರಂಭಿಸಿದ್ದಾರೆ.
ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್​; ಇನ್​ಸ್ಪೆಕ್ಟರ್​-ಎಎಸ್​ಐ ವಿರುದ್ಧ ದಾಖಲಾಯಿತು ಎಫ್​​ಐಆರ್​

ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
