ತಿರುವನಂತಪುರಂ:ಕೇರಳ ಸಚಿವಾಲಯದ ಕಟ್ಟಡದಲ್ಲಿ ಮಂಗಳವಾರ (ಆಗಸ್ಟ್​ 25) ಸಂಭವಿಸಿದ ಅಗ್ನಿ ದುರಂತಕ್ಕೆ ಬೇರೆಯದೇ ವ್ಯಾಖ್ಯಾನ ನೀಡಲಾಗುತ್ತಿದೆ.
ಮಂಗಳವಾರ ಮಧ್ಯಾಹ್ನ ಸಚಿವಾಲಯದ ಸೌತ್​ ಸ್ಯಾಂಡ್​ವಿಚ್​ ಬ್ಲಾಕ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸಿಎಂ ಕಚೇರಿಗೆ ಸಮೀಪದಲ್ಲಿಯೇ ಈ ಅವಘಡ ಸಂಭವಿಸಿತ್ತು.ಸಾಮಾನ್ಯ ಆಡಳಿತ ವಿಭಾಗದ ಸಿಬ್ಬಂದಿ ಮೇಲ್ಭಾಗದಲ್ಲಿದ್ದ ವೈರಿಂಗ್​ನಿಂದ ಏಳುತ್ತಿರುವುದನ್ನು ಗಮನಿಸಿದ್ದರು. ಕೆಲ ಹೊತ್ತಿನಲ್ಲಿಯೇ ಬೆಂಕಿಯೂ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.
ಇದನ್ನೂ ಓದಿ;ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…!
ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಗಳು ಚಿನ್ನದ ಕಳ್ಳಸಾಗಾಟ ಪ್ರಕರಣದಲ್ಲಿನ ಸಾಕ್ಷ್ಯಾಧಾರಗಳ ನಾಶಕ್ಕೆ ನಡೆಸಲಾದ ಕೃತ್ಯ’ ಎಂದೇ ಆರೋಪಿಸಿವೆ.ಅಲ್ಲದೇ, ಕಾಂಗ್ರೆಸ್​ ಹಾಗೂ ಬಿಜೆಪಿ ಶಾಸಕರು ಇದನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್​ ಅವರನ್ನು ಪೊಲೀಸರು ಬಂಧಿಸಿದರು.
ಚಿನ್ನದ ಕಳ್ಳ ಸಾಗಣೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಹಾಗೂ ತನಿಖೆಯ ದಿಕ್ಕನ್ನು ತಪ್ಪಿಸಲು ಬೆಂಕಿ ಹಚ್ಚುವ ಕೆಲಸ ಮಾಡಲಾಗಿದೆ. ದಾಖಲೆಗಳನ್ನು ಸುಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಇದನ್ನೂ ಓದಿ;ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….!
ಸದ್ಯ ಚಿನ್ನ ಕಳ್ಳ ಸಾಗಾಟದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − six =
Remember me
