ನವದೆಹಲಿ:ಟೀಮ್​ ಇಂಡಿಯಾ ಮಾಜಿ ಆಟಗಾರ ಯುವರಾಜ್​ ಸಿಂಗ್​ ಅವರ ತಾಯಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ಮಹಿಳೆಯೊಬ್ಬಳನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.
ಯುವಿ ಅವರು ತಾಯಿ ಶಬ್ನಮ್​ ಸಿಂಗ್​ ನೀಡಿದ ದೂರಿನ ಆಧಾರದ ಮೇಲೆ ಹೇಮಾ ಕೌಶಿಕ್​ ಎಂಬಾಕೆಯನ್ನು ಬಂಧಿಸಲಾಗಿದೆ. ಯುವಿ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಿ, ಬೆದರಿಸಿ ಹಣ ಸುಲಿಗೆ ಮಾಡಲು ಆರೋಪಿ ಹೇಮಾ ಪ್ರಯತ್ನಿಸಿದ್ದಾಳೆ.
ಇದನ್ನೂ ಓದಿ:ಬಿಪಿಎಲ್ ಹೆಲ್ತ್ ಕಾರ್ಡ್| ಹೊಸ ಅರ್ಜಿದಾರರಿಗೆ ಸಿಹಿ ಸುದ್ದಿ; ಚಿಕಿತ್ಸಾ ಸೌಲಭ್ಯಕ್ಕೆ ಬಳಕೆ
ಅನಾರೋಗ್ಯದಿಂದ ಬಳಲುತ್ತಿರುವ ಯುವಿ ಸಹೋದರ ಸೊರ್ವಾರ್​ ಸಿಂಗ್​ರನ್ನು ನೋಡಿಕೊಳ್ಳಲು ಮಹಿಳೆಯನ್ನು ನೇಮಿಸಲಾಗಿತ್ತು. ಆದರೆ, ಆಕೆಯ ಕೆಲಸದಿಂದ ಅಸಮಾಧಾನಗೊಂಡ ಯುವಿ ಕುಟುಂಬ ಆಕೆಯನ್ನು 20 ದಿನಗಳ ನಂತರ ಕೆಲಸದಿಂದ ತೆಗೆದು ಹಾಕಿದ್ದರು. ಇದೇ ದ್ವೇಷದಲ್ಲಿ ಆರೋಪಿ ಹೇಮಾ ಯುವಿ ತಾಯಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಳು. ಇದಾದ ಬಳಿಕ ಶಬ್ನಮ್​ ಸಿಂಗ್​ ದೂರು ನೀಡಿದ್ದರು.
40 ಲಕ್ಷ ರೂಪಾಯಿ ನೀಡದಿದ್ದರೆ ಸೋರ್ವರ್ ಸಿಂಗ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಕುಟುಂಬದ ಗೌರವವನ್ನು ಹಾಳು ಮಾಡುವುದಾಗಿ ಹೇಮಾ ಬೆದರಿಕೆ ಹಾಕಿದ್ದಳು. ದೂರು ನೀಡಿದ ಬಳಿಕ ಹೇಮಾಳನ್ನು ಬಲೆಗೆ ಕೆಡವಲು ಪೊಲೀಸ್ ಪ್ಲ್ಯಾನ್​ ಮಾಡಿ, ಹೇಮಾ ಕೇಳಿದ ಹಣದಲ್ಲಿ ಮೊದಲ ಹಂತವಾಗಿ 5 ಲಕ್ಷ ರೂಪಾಯಿ ಕೊಡುವುದಾಗಿ ಯುವಿ ಕುಟುಂಬದಿಂದ ಆಕೆಗೆ ಮಸೇಜ್​ ಕಳುಹಿಸಲಾಯಿತು. ಹಣ ಸಿಗುತ್ತದೆ ಎಂಬ ಖುಷಿಯಲ್ಲಿ ಅದನ್ನು ವಸೂಲಿ ಮಾಡಲು ಹೇಮಾ ಆಗಮಿಸಿದಾಗ ಆಕೆಯನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದೆ. ಸದ್ಯ ವಿಚಾರಣೆ ಮುಂದುವರಿದಿದೆ.(ಏಜೆನ್ಸೀಸ್​)
ಕಾರ್ಗಿಲ್ ವೀರರಿಗೆ ದೇಶದ ನಮನ

ಸಮಾಜದ ಸತ್ಪ್ರಜೆಗಳಾಗೋಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
