ಕೊಚ್ಚಿ:ಗಂಡನನ್ನು ಬೆದರಿಸುವ ಸಲುವಾಗಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿಯ ಸ್ಥಿತಿ ಇದೀಗ ಗಂಭೀರವಾಗಿದ್ದು, ಸತ್ತು ಹೋಗಿರುವ ಮಗುವನ್ನು ಹೊರ ತೆಗೆಯಲು ಮೂರು ದಿನಗಳಿಂದ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪರಸ್ಸಾಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಅರುಣಿಮಾ (27), ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಕೆ. ಈಕೆಯ ಗಂಡ ಅಜಯ್​ ಪ್ರಕಾಶ್​ ಓರ್ವ ಯೋಧ. ಘಟನೆ ನಡೆಯುವ ಸಮಯದಲ್ಲಿ ಅಜಯ್​ ಮನೆಯಲ್ಲೇ ಇದ್ದ. ಸೇನೆಯಿಂದ ರಜೆಯ ಮೇಲೆ ಊರಿಗೆ ಬಂದಿದ್ದಾಗಲೇ ಅರುಣಿಮಾ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅರುಣಿಮಾಳನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗ್ಯಾಸ್​ ಸ್ಫೋಟದಿಂದ ಘಟನೆ ಸಂಭವಿಸಿದೆ ಎಂದು ಆರಂಭದಲ್ಲಿ ಅಜಯ್​ ಆಸ್ಪತ್ರೆಗೆ ಹೇಳಿಕೆ ನೀಡಿದ್ದ.
ಅರುಣಿಮಾ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಘಟನೆಯ ಬೆನ್ನಲ್ಲೇ ಪಾರಸ್ಸಾಲಾದಲ್ಲಿರುವ ಅಜಯ್​ ಮನೆಯನ್ನು ಪೊಲೀಸರು ಸೀಲ್​ ಮಾಡಿದ್ದಾರೆ. ಮ್ಯಾಜಿಸ್ಟ್ರೇಟ್ ಸೇರಿದಂತೆ ಹಲವರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪತಿಗೆ ಬೆದರಿಕೆ ಹಾಕಲು ಈ ಕೃತ್ಯ ಎಸಗಿದ್ದಾಳೆ ಎಂದು ಆಕೆಯ ತಂದೆ ತಿಳಿಸಿದ್ದಾರೆ.(ಏಜೆನ್ಸೀಸ್​)
ನಿಮ್ಮ ಕಣ್ಣಿಗೊಂದು ಸವಾಲ್​: ಸಾಧ್ಯವಾದರೆ ಹೂವುಗಳ ಮಧ್ಯೆ ಇರುವ ನಾಯಿಯನ್ನು ಗುರುತಿಸಿ….

ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಹಾವೇರಿಗೆ ಇಂದಿನಿಂದ ವಿಶೇಷ ರೈಲು ಸಂಚಾರ

ಸಿನಿಮಾ ಶೈಲಿಯಲ್ಲಿ ಬಾಲಕನ ಅಪಹರಣ; ಸಿಂಗಂ ಶೈಲಿಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − ten =
Remember me
