ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ವಿದೇಶ ಹಾಗೂ ರಾಜ್ಯಗಳ ಪ್ರವಾಸದ ವೇಳೆ ನೀಡಲಾಗುವ ಸ್ಮರಣಿಕೆಗಳ ಐದನೇ ವಾರ್ಷಿಕ ಹರಾಜಿನಲ್ಲಿ ಸುಮಾರು ಎರಡು ಸಾವಿರ ಮಂದಿ ಬಿಡ್ ಕೂಗಿರುವುದಾಗಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಲ್ಲಿ ಭಗವಾನ್ ಲಕ್ಷ್ಮೀ ನಾರಾಯಣ ವಿಠ್ಠಲ್, ರುಕ್ಮಿಣಿ ಮತ್ತು ಬನಾರಸ್‌ ಘಾಟ್​ ಪೇಂಟಿಂಗ್​ಗೆ ಹೆಚ್ಚಿನ ಬೇಡಿಕೆ ಇದೆ. ಕಲಾವಿದ ಪರೇಶ್ ಮೇಟಿ ಅವರು ರಚಿಸಿರುವ ಬನಾರಸ್​ ಘಾಟ್​ ಚಿತ್ರವು 74.5 ಲಕ್ಷಕ್ಕೆ ಬಿಕರಿಯಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ವಿದೇಶ ಹಾಗೂ ರಾಜ್ಯಗಳ ಪ್ರವಾಸದ ವೇಳೆ ನೀಡಲಾಗುವ ಸ್ಮರಣಿಕೆಗಳ ಹರಾಜು ಪ್ರಕ್ರಿಯೆಯು ಅಕ್ಟೋಬರ್​ 2ರಂದು ಪ್ರಾರಂಭವಾಗಿದ್ದು, ಅಕ್ಟೋಬರ್​ 31ರವರೆಗೂ ನಡೆಯಲಿದೆ. 900ಕ್ಕೂ ಹೆಚ್ಚು ಸ್ಮರಣಿಕೆಗಳನ್ನು ಹರಾಜಿನಿಂದ ಬರುವ ಆದಾಯವನ್ನು ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುವುದು.
ಇದನ್ನೂ ಓದಿ:ತೀವ್ರ ಸ್ವರೂಪ ಪಡೆದುಕೊಂಡ ಹಮೂನ್ ಚಂಡಮಾರುತ; 7 ರಾಜ್ಯಗಳಲ್ಲಿ ಕಟ್ಟೆಚ್ಚರ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಪ್ರಧಾನಿ ಮೋದಿಗೆ ನೀಡಿರುವ ವಿಠ್ಠಲ ಹಾಗೂ ರುಕ್ಮಿಣಿಯ ಸ್ಮರಣಿಕೆಗೆ ಹೆಚ್ಚಿನ ಬೇಡಿಕೆಯಿದ್ದು, ಇಲ್ಲಿವರೆಗೂ 46 ಮಂದಿ ಬಿಡ್​ ಸಲ್ಲಿಸಿದ್ದಾರೆ. ಈ ಸ್ಮರಣಿಕೆಯ ದರವು ಪ್ರಸ್ತುತ ದುಪ್ಪಟ್ಟಾಗಿದೆ. ಕಾಮಧೇನು ಸ್ಮರಣಿಕೆಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಈವರೆಗೂ 39 ಮಂದಿ ಇದಕ್ಕೆ ಬಿಡ್​ ಸಲ್ಲಿಸಿದ್ದಾರೆ. ಜೆರುಸಲೇಮ್​ನಲ್ಲಿ ಪ್ರಧಾನಿಗೆ ನೀಡಲಾದ ಸ್ಮರಣಿಕೆಯನ್ನು ಖರೀದಿಸಲು ಈವರೆಗೆ 38 ಮಂದಿ ಆನ್​ಲೈನ್​ನಲ್ಲಿ ಬಿಡ್​ ಸಲ್ಲಿಸಿದ್ದಾರೆ.
ಇದಲ್ಲದೆ ಖ್ಯಾತ ಕಲಾವಿದ ಪರೇಶ್ ಮೇಟಿ ಅವರು ರಚಿಸಿರುವ ಬನಾರಸ್​ ಘಾಟ್​ ಚಿತ್ರವು 74.5 ಲಕ್ಷಕ್ಕೆ ಬಿಕರಿಯಾಗಿದೆ. ಇದಕ್ಕೆ ಮೂಲ ಬೆಲೆ 64 ಲಕ್ಷ ರೂಪಾಯಿ ನಿಗದಿಪಡಿಸಲಾಗಿದ್ದು, ಏಳು ಮಂದಿ ಇದಕ್ಕೆ ಬಿಡ್​ ಸಲ್ಲಿಸಿದ್ದಾರೆ. ಈ ಪೈಕಿ ವ್ಯಕ್ತಿಯೊಬ್ಬರು 74.5 ಲಕ್ಷ ರೂಪಾಯಿ ಬಿಡ್​ ಕೂಗಿದ್ದಾರೆ. ಕಳೆದ ವರ್ಷ ಥಾಮಸ್ ಕಪ್ ವಿಜೇತ ಕೆ.ಶ್ರೀಕಾಂತ್ ಸಹಿ ಮಾಡಿದ ಬ್ಯಾಡ್ಮಿಂಟನ್ ರಾಕೆಟ್ ಗರಿಷ್ಠ ₹51 ಲಕ್ಷ ಬಿಡ್ ಆಯಿತ್ತು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ ಸ್ಮರಣಿಕೆಗಳನ್ನು ಆನ್​​​ಲೈನ್​​​ ಹರಾಜು ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಅ.31ರವರೆಗೆ ಇದೆ ಎಂದು ಹೇಳಲಾಗಿದೆ. ಇದರಲ್ಲಿ ಸೊಗಸಾದ ಶಿಲ್ಪಗಳು, ವರ್ಣಚಿತ್ರಗಳು, ರೇಖಾಚಿತ್ರಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆಗಳು, ಪೇಟ ಇನ್ನಿತರ ವಸ್ತುಗಳನ್ನು ಒಳಗೊಂಡಿದೆ. ಇನ್ನು ಈ ವಸ್ತುಗಳನ್ನು ನೀವು ಪಡೆಯಬೇಕೆಂದರೆ ಆನ್​​ಲೈನ್​ ಮೂಲಕ PM Momentos ಪೋರ್ಟಲ್​​ಗೆ ಭೇಟಿ ನೀಡಬೇಕು. ಇಲ್ಲಿ ನೀವು ಪ್ರಧಾನಿ ಮೋದಿ ಅವರಿಗೆ ಸಿಕ್ಕ ಸ್ಮರಣಿಕೆಗಳನ್ನು ಬಿಡ್ ಮಾಡಿ ಪಡೆಯಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + twelve =
Remember me
