ಮಹಾರಾಷ್ಟ್ರ:ಆ.19ರಂದು ನಡೆದ ಘಟನೆಯ ವಿಡಿಯೋ ಇಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 24 ವರ್ಷದ ಓಲಾ ಕ್ಯಾಬ್ ಚಾಲಕನನ್ನು ಮನಬಂದಂತೆ ಥಳಿಸಿದ ದುಬಾರಿ ಮೌಲ್ಯದ ಆಡಿ ಕಾರಿನ ಮಾಲೀಕ, ಅಸಹಾಯಕ ಡ್ರೈವರ್​ನ ಎತ್ತಿ ಬಿಸಾಡಿರುವ ಘಟನೆ ನೋಡುಗರನ್ನು ಭಾರೀ ಆತಂಕಕ್ಕೆ ದೂಡಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ಮೇಲೆ ಹಲ್ಲೆಗೈದ ವ್ಯಕ್ತಿಯ ವಿರುದ್ಧ ಇದೀಗ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಗಣೇಶೋತ್ಸವ ಅರ್ಥಪೂರ್ಣ ಆಚರಣೆಗೆ ಸಲಹೆ
ಅಸಲಿಗೆ ಆ.19ರಂದು ನಡೆದಿದ್ದೇನು?
ಮಹಾರಾಷ್ಟ್ರದ ಘಾಟ್ಕೋಪರ್ ಬಳಿ ಓಲಾ ಕ್ಯಾಬ್​ ಚಾಲಕನೊಬ್ಬ ಆಡಿ ಕಾರಿನ ಹಿಂದೆಯೇ ತನ್ನ ಕಾರನ್ನು ಚಲಾಯಿಸಿಕೊಂಡು ಕಟ್ಟದ ಸಂಕೀರ್ಣದೊಳಗೆ ಬಂದಿದ್ದಾನೆ. ಈ ವೇಳೆ ಆಡಿ ಕಾರು ಮಾಲೀಕ ತನ್ನ ವಾಹನವನ್ನು ನಿಲ್ಲಿಸಿದ್ದಾನೆ. ಆಡಿ ಹಿಂದೆಯೇ ಬಂದ ಕ್ಯಾಬ್ ಚಾಲಕ ಅಂತರ ಕಾಯ್ದುಕೊಳ್ಳದೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ದೊಡ್ಡ ವ್ಯಕ್ತಿ ಏಕಾಏಕಿ ಅಮಾಯಕ ಚಾಲಕನ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.
On Camera: Video shows Audi owner slamming Ola driver to ground over minor car sideswipe in#Mumbai#Ola#Viral#Mumbai#ViralVideopic.twitter.com/GljdL6Yew8
— TIMES NOW (@TimesNow)August 30, 2024

ಸದ್ಯ ವಿಡಿಯೋ ಜಾಲತಾಣಗಳಲ್ಲಿ ಹಂಚಿಕೆಯಾದ ಕ್ಷಣಮಾತ್ರದಲ್ಲಿ ಭಾರೀ ವೈರಲ್ ಆಗಿದ್ದು, ಅಹಂಕಾರ ತುಂಬಿದ ಆಡಿ ಮಾಲೀಕನಿಗೆ ನೆಟ್ಟಿಗರು ಹಿಡಿಶಾಪ ಹಾಕಿದ್ದಾರೆ. ಘಟನೆಯ ವಿಡಿಯೋವನ್ನು ಪರಿಶೀಲಿಸಿರುವ ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 117 (ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನುಂಟುಮಾಡುವುದು), 351 (ಅಪರಾಧ ಬೆದರಿಕೆ), ಮತ್ತು 352ರ (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿ ಎಫ್​ಐಆರ್​ ದಾಖಲಿಸಿದ್ದಾರೆ,(ಏಜೆನ್ಸೀಸ್).
14 ತಿಂಗಳು ಕಿಡ್ನ್ಯಾಪರ್​ ಜತೆಗಿತ್ತು 2 ವರ್ಷದ ಕೂಸು! ಅರೆಸ್ಟ್​ ಆದ್ರೂ ತಾಯಿ ಬಳಿ ಹೋಗದೆ ಆತನನ್ನೇ ತಬ್ಬಿಡಿದು ಕಣ್ಣೀರು

ಐಪಿಎಲ್ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ ಉಳಿಸಿಕೊಳ್ಳಲ್ಲ RCB! ಅದಕ್ಕೆ ಈ ಮೂರು ಅಂಶಗಳೇ ಕಾರಣ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + seven =
Remember me
