ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಚಂದ್ರಯಾನ-3 ನಾಡಿದ್ದು ಅಂದರೆ ಆ. 23ರ ಸಂಜೆ 6.04ಕ್ಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ ಎಂದು ಈಗಾಗಲೇ ಘೋಷಣೆ ಆಗಿದೆ. ಅದಾಗ್ಯೂ ಈ ಲ್ಯಾಂಡಿಂಗ್​ನಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ಈಗ ಬಹಿರಂಗಗೊಂಡಿದೆ.
ಇಂಥದ್ದೊಂದು ಸಂಗತಿ ಇಸ್ರೋದಿಂದಲೇ ಹೊರಬಿದ್ದಿದೆ. ಅರ್ಥಾತ್, ಇಸ್ರೋದ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್​ನ ನಿರ್ದೇಶಕ ನಿಲೇಶ್ ಎಂ. ದೇಸಾಯಿ ಈ ಕುರಿತು ಮಾಹಿತಿ ನೀಡಿದ್ದಾರೆ. ಇಂದು ಮಾಧ್ಯಮದವರ ಜತೆ ಪ್ರತಿಕ್ರಿಯೆ ನೀಡಿದ ಅವರು, ಚಂದ್ರಯಾನ ಲ್ಯಾಂಡಿಂಗ್​ನಲ್ಲಿ ಬದಲಾವಣೆ ಆಗಬಹುದಾದ ಸಾಧ್ಯತೆ ಇರುವುದನ್ನೂ ಹೇಳಿಕೊಂಡರು.
ಇದನ್ನೂ ಓದಿ:ಪತಿ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು: ಮಕ್ಕಳಿಬ್ಬರ ಸಹಿತ ವಿಡಿಯೋ ಮಾಡಿ ಸಹಾಯ ಕೇಳಿದ ಪತ್ನಿ
ಆ ಪ್ರಕಾರ ಚಂದ್ರಯಾನ ಲ್ಯಾಂಡಿಂಗ್ ಆ. 23ರಂದು ಆಗದಿದ್ದರೆ ಆ. 27ರಂದು ಆಗಲಿದೆ ಎಂಬ ವಿಷಯ ಬಹಿರಂಗಗೊಂಡಿದೆ. ‘ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಲ್ಯಾಂಡರ್ ಮಾಡ್ಯೂಲ್‌ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಅದನ್ನು ಇಳಿಸುವುದು ಸೂಕ್ತವೇ ಅಥವಾ ಬೇಡವೇ ಎಂಬುದರ ಕುರಿತು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ವೇಳೆ, ಯಾವುದೇ ಅಂಶವು ಅನುಕೂಲಕರವಾಗಿಲ್ಲ ಎಂದು ತೋರಿದರೆ, ನಾವು ಆ. 27ರಂದು ಚಂದ್ರನ ಮೇಲೆ ಮಾಡ್ಯೂಲ್ ಇಳಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
Chandrayaan-3 Mission:🇮🇳Chandrayaan-3 is set to land on the moon 🌖on August 23, 2023, around 18:04 Hrs. IST.Thanks for the wishes and positivity!Let’s continue experiencing the journey togetheras the action unfolds LIVE at:ISRO Websitehttps://t.co/osrHMk7MZLYouTube…pic.twitter.com/zyu1sdVpoE— ISRO (@isro)August 20, 2023
Chandrayaan-3 Mission:🇮🇳Chandrayaan-3 is set to land on the moon 🌖on August 23, 2023, around 18:04 Hrs. IST.Thanks for the wishes and positivity!Let’s continue experiencing the journey togetheras the action unfolds LIVE at:ISRO Websitehttps://t.co/osrHMk7MZLYouTube…pic.twitter.com/zyu1sdVpoE
ಇದನ್ನೂ ಓದಿ:ಮತ್ತೊಂದು ಗಡಿ ಮೀರಿದ ಪ್ರೇಮ: ಭಾರತೀಯ ಪ್ರೇಮಿಗಾಗಿ ದೇಶ ಬಿಟ್ಟು ಬಂದ ಪ್ರೇಯಸಿ!
ಚಂದ್ರಯಾನ 3 ಜುಲೈ 14ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಸ್ಪೇಸ್ ಸೆಂಟರ್​ನಿಂದ ಉಡಾವಣೆಗೊಂಡಿತ್ತು. ಆ. 23ರಂದು ಚಂದ್ರಯಾನ ಲ್ಯಾಂಡ್ ಆಗುವ ಕುರಿತು ಘೋಷಣೆ ಮಾಡಲಾಗಿತ್ತು. ಆದರೆ ಲೇಟೆಸ್ಟ್​ ಅಪ್​ಡೇಟ್ ಪ್ರಕಾರ ಅದು ಆ. 27ರಂದು ನಡೆದರೂ ಅಚ್ಚರಿ ಏನಿಲ್ಲ ಎಂಬಂತಾಗಿದೆ.
#WATCH| Nilesh M Desai, Director, Space Applications Centre-ISRO, Ahmedabad on Chandrayaan-3 landing on the Moon"On August 23, two hours before Chandrayaan-3 lands on the Moon, we will take a decision on whether or not it will be appropriate to land it at that time based on…pic.twitter.com/JZKrMQ9p6F— ANI (@ANI)August 21, 2023
#WATCH| Nilesh M Desai, Director, Space Applications Centre-ISRO, Ahmedabad on Chandrayaan-3 landing on the Moon"On August 23, two hours before Chandrayaan-3 lands on the Moon, we will take a decision on whether or not it will be appropriate to land it at that time based on…pic.twitter.com/JZKrMQ9p6F
ಚಂದ್ರಯಾನ-3: ತಿರುಪತಿಯಲ್ಲಷ್ಟೇ ಅಲ್ಲ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಪೂಜೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
