ಬ್ರಿಟೀಷರಿಂದ ಸ್ವಾತಂತ್ರ್ಯಪಡೆದು 75ನೇ ವಸಂತಕ್ಕೆ ಕಾಲಿಡಲಿರುವ ಭಾರತಕ್ಕೆ ನಾಳೆ (ಆಗಸ್ಟ್ 15) ಅಮೃತಗಳಿಗೆಯ ಸಂಭ್ರಮ. ಈ ಸುಂದರ ಕ್ಷಣವನ್ನು ಆನಂದಿಸಲು ಪ್ರತಿಯೊಬ್ಬ ಭಾರತೀಯನು ಕಾತುರದಿಂದ ಕಾಯುತ್ತಿದ್ದಾನೆ. ಭಾರತ ಮಾತ್ರವಲ್ಲದೆ ಆಗಸ್ಟ್ 15 ರಂದು ಕೆಲ ರಾಷ್ಟ್ರಗಳು ಕೂಡ ಸ್ವತಂತ್ರ್ಯಗೊಂಡಿದ್ದು, ಆ ದೇಶಗಳ ಮಾಹಿತಿ ಇಲ್ಲಿದೆ.
ಆಗಸ್ಟ್ 15ನೇ ತಾರೀಖು ಪ್ರತಿ ಭಾರತೀಯರಿಗೂ ಪ್ರಮುಖ ದಿನ. 1947 ರಲ್ಲಿ ಬ್ರಿಟೀಷರಿಂದ ಸ್ವಾತಂತ್ರ್ಯಗೊಂಡ ಭಾರತಕ್ಕೆ ಭಾನುವಾರ ಅಮೃತ ಘಳಿಗೆಯ ಸಂಭ್ರಮ. ಭಾರತ ಮಾತ್ರವಲ್ಲದೇ ಆಗಸ್ಟ್ 15ಕ್ಕೆ ಸ್ವಾತಂತ್ರ್ಯಗೊಂಡ ಕೆಲ ದೇಶಗಳು ಕೂಡ ಆ.15 ರಂದು ರಾಷ್ಟ್ರೀಯ ದಿನಾಚರಣೆ ಆಚರಿಸಲಿವೆ. ಅವುಗಳಲ್ಲಿ ಬಹ್ರೇನ್, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ಲಿಚ್ಟೆನ್‌ಸ್ಟೈನ್, ದಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶಗಳು ಕೂಡ ‘ನ್ಯಾಶಿನಲ್ ಡೇ’ ಆಚರಿಸಲಿವೆ.
ಬಹ್ರೇನ್:
ಭಾರತದಂತೆ ಈ ದೇಶವು ಕೂಡ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ ಭಾರತ ಸ್ವಾತಂತ್ರ್ಯಗೊಂಡ ಹಲವು ವರ್ಷಗಳ ಬಳಿಕ ಅಂದರೆ 1971 ಆಗಸ್ಟ್ 15 ರಂದು ಸಂಪೂರ್ಣ ಸ್ವತಂತ್ರ್ಯ ದೇಶವಾಗಿ ಘೋಷಿಸಿಕೊಂಡಿತು. ಆದರೂ ಕೂಡ ಈ ದೇಶ ಆ. 15 ರಂದು ಆಚರಣೆ ಮಾಡುವುದಿಲ್ಲ. ಬದಲಾಗಿ ಡಿಸೆಂಬರ್ 16 ರಂದು ಆಚರಿಸುತ್ತಾರೆ. ಕಾರಣ ಬಹ್ರೇನ್ ದೇಶದ ಮೊದಲ ಎಮಿರ್ (ಅಡಳಿತಗಾರ) ಇಸಾಬಿನ್ ಸಲ್ಮಾನ್ ಅಲ್ ಖಲೀಫನ ಅಪ್ಪಣೆ.
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ:
2ನೇ ಮಹಾಯುದ್ದದ ಕೊನೆಯಲ್ಲಿ ಆಗಸ್ಟ್ 15 ರಂದು ಜಪಾನಿಯರಿಂದ ಸ್ವಾತಂತ್ರ್ಯಗೊಂಡ ಉತ್ತರ ಮತ್ತು ದಕ್ಷಿಣ ಕೊರಿಯಾ, ಈ ದಿನವನ್ನು ‘ಕೊರಿಯಾ ರಾಷ್ಟ್ರೀಯ ವಿಮೋಚನಾ ದಿನ’ ಎಂದು ಘೋಷಿಸಿಕೊಂಡಿವೆ. ಸತತ 35 ವರ್ಷಗಳ ಕಾಲ ಜಪಾನಿಯರ ಆಳ್ವಿಕೆಗೆ ಒಳಪಟ್ಟಿದ್ದ ಈ ದೇಶಗಳು ನಂತರ ಪ್ರತ್ಯೇಕವಾದವು.
ಲಿಚ್ಟೆನ್‌ಸ್ಟೈನ್:
ಈ ದೇಶದ ಹೆಸರು ಜರ್ಮನ್ ಭಾಷೆಯ ಒಂದು ಪದವಾಗಿದ್ದು, ಆಸ್ಟ್ರಿಯಾ ಮತ್ತು ಸ್ವಿಜರ್ಲೆಂಡ್ ದೇಶದ ನಡುವೆ ಇದೆ. ಈ ದೇಶ ಕೂಡ ಆಗಸ್ಟ್ 15ಕ್ಕೆ ರಾಷ್ಟ್ರೀಯ ದಿನ ಘೋಷಿಸಿಕೊಂಡಿದೆ. ಇಲ್ಲಿ ಆಡಳಿತ ನಡೆಸುತ್ತಿದ್ದ ರಾಜಕುಮಾರ 2ನೇ ಫ್ರಾಂನ್ ಜೋಸೆಫ್ ಆಗಸ್ಟ್ 15 ರಂದು ಜನಿಸಿದ ಎಂಬ ನಂಬಿಕೆ ಈ ದೇಶದ ಜನರದ್ದಾಗಿದೆ.
ರಿಪಬ್ಲಿಕ್ ಆಫ್ ಕಾಂಗೋ:
1960 ಆಗಸ್ಟ್ 15 ರಂದು ಫ್ರೆಂಚ್​​ರಿಂದ ಸ್ವಾತಂತ್ರ್ಯ ಪಡೆದ ಕಾಂಗೋ ದೇಶ ರಿಪಬ್ಲಿಕ್ ಆಫ್ ಕಾಂಗೋವಾಗಿ ಉಗಮಗೊಂಡಿತು. ಆಫ್ರಿಕಾ ಖಂಡದ ಮಧ್ಯ ಭಾಗದಲ್ಲಿರುವ ಈ ದೇಶ 1880ರಲ್ಲಿ ಫ್ರೆಂಚರ ಆಳ್ವಿಕೆಗೆ ಒಳಪಟ್ಟಿತು. ಫೆಲ್​ಬುರ್ಟ್ ಯುಲೂ ಎಂಬಾತ ಸ್ವತಂತ್ರ್ಯ ಕಾಂಗೋ ದೇಶದ ಮೊದಲ ಪ್ರಧಾನಿಯಾಗಿ 1963ರ ವರೆಗೆ ಆಡಳಿತ ನಡೆಸಿದರು.


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight + 18 =
Remember me
