ವಾರಾಣಸಿ:ಅಯೋಧ್ಯಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ  ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೂಮಿಪೂಜೆ ನಡೆಸಲು ನಿಗದಿ ಪಡಿಸಲಾಗಿರುವ ಆಗಸ್ಟ್​ 5ರ ಮುಹೂರ್ತ ಶುಭಪ್ರದವಲ್ಲ ಎಂದು ವಾರಾಣಸಿಯ ಶ್ರೀಗಳು ಹಾಗೂ ಸಂತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ರೆ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಶ್ರೀಗಳ ಬಳಿಕ ಈಗ, ಸ್ವಾಮಿ ಶ್ರೀ ಅವಿಕ್ತೇಶ್ವರಾನಂದ ಹಾಗೂ ಸುಮೇರು ಪೀಠದ ಶ್ರೀ ನರೇಂದ್ರಾನಂದ ಮಹಾರಾಜ್​ ಕೂಡ ಆ.5ರ ಮುಹೂರ್ತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ;ಆತ್ಮಚರಿತ್ರೆಯಲ್ಲಿ ಮದುವೆ ವಿಚಾರ ಪ್ರಸ್ತಾಪಿಸಿದ್ದಕ್ಕೆ 30 ಕೋಟಿ ರೂ.ಗೆ ಬೇಡಿಕೆಯಿಟ್ಟ ಮಾಜಿ ಪತ್ನಿ
ಆಗಸ್ಟ್​ನಲ್ಲಿ ಭೂಮಿ ಪೂಜೆಗೆ ಯಾವುದೇ ಶುಭ ಮುಹೂರ್ತಗಳಿಲ್ಲ. ಅವರು ತಮ್ಮ ಅನುಕೂಲಕ್ಕಾಗಿ ಭೂಮಿಪೂಜೆ ನಡೆಸುತ್ತಿದ್ದಾರೆ. ಶಾಸ್ತ್ರಸಮ್ಮತವಾಗಿ ಭೂಮಿ ಪೂಜೆ ನಡೆಯದಿದ್ದರೆ, ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ಸ್ವಾಮಿ ಶ್ರೀ ಅವಿಕ್ತೇಶ್ವರಾನಂದ ಶ್ರಿಗಳು ಹೇಳಿದ್ದಾರೆ.
ಶ್ರೀರಾಮ ಮಂದಿರಕ್ಕೆ 1990 ನವೆಂಬರ್​ 5ರಂದೇ ವಿಎಚ್​ಪಿ ಮುಖಂಡರು, ಅಂದಿನ ಆರ್​ಎಸ್​ಎಸ್​ ಮುಖ್ಯಸ್ಥರು ಹಾಗೂ ಶ್ರೀಗಳ ಸಮ್ಮುಖದಲ್ಲಿ ಭೂಮಿಪೂಜೆ ನಡೆಸಲಾಗಿದೆ ಎಂದು ಶ್ರೀ ನರೇಂದ್ರಾನಂದ ಮಹಾರಾಜ್​ ಹೇಳಿದ್ದಾರೆ.
ಇದನ್ನೂ ಓದಿ;ಸೆಪ್ಟಂಬರ್​ 5ರಂದು ಶಾಲಾ- ಕಾಲೇಜುಗಳ ಮರು ಆರಂಭ; ಎಲ್ಲಿ? ಯಾರು ಹೇಳಿದ್ದು?
ನಮಗೆ ರಾಮ ಜನ್ಮಭೂಮಿ ಟ್ರಸ್ಟ್​ನಲ್ಲಿ ಯಾವುದೇ ಹುದ್ದೆ ಬೇಡ. ಮಂದಿರ ನಿರ್ಮಾಣ ಕಾರ್ಯ ಶುಭಕಾಲದಲ್ಲಿ ಆರಂಭವಾಗಬೇಕು ಎಂಬುದಷ್ಟೇ ನಮ್ಮ ಇಚ್ಛೆಯಾಗಿದೆ. ಇಂಥ ಅಶುಭ ಗಳಿಗೆಯಲ್ಲಿ ಭೂಮಿಪೂಜೆ ನಡೆಸುವುದು ಬೇಡ ಎಂದು ಶ್ರೀ ಅವಿಕ್ತೇಶ್ವರಾನಂದ ಶ್ರಿಗಳು ಹೇಳಿದ್ದಾರೆ.
ಆಕ್ಸ್​ಫರ್ಡ ವಿವಿ ಕರೊನಾ ಲಸಿಕೆ ಅರ್ಧದಷ್ಟು ಭಾರತಕ್ಕೆ; ಉತ್ಪಾದಕ ಕಂಪನಿ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + sixteen =
Remember me
