ನವದೆಹಲಿ:ದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ತಿಂಗಳ ಸರಾಸರಿಗಿಂತ ಶೇ.27 ಹೆಚ್ಚಳ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 120 ವರ್ಷಗಳಲ್ಲಿ ಆಗಸ್ಟ್​ನಲ್ಲಿ ಆದ ಮಳೆಯಲ್ಲಿ ಇದು ನಾಲ್ಕನೇ ಹೆಚ್ಚಿನ ಮಳೆ ಎನ್ನಲಾಗಿದೆ.
1926ರ ಆಗಸ್ಟ್​ನಲ್ಲಿ ತಿಂಗಳ ಸರಾಸರಿಗಿಂತ ಶೇ.33 ಹೆಚ್ಚು ಮಳೆಯಾಗಿತ್ತು. ನಂತರ 1976ರಲ್ಲಿ ಶೇ.28.4, 1973ರಲ್ಲಿ ಶೇ. 27.8 ಹೆಚ್ಚು ಮಳೆಯಾಗಿತ್ತು. 44 ವರ್ಷಗಳ ನಂತರ ಇದೀಗ ಶೇ.27 ಹೆಚ್ಚು ಮಳೆಯಾಗಿದೆ. ಜೂನ್ 1ರಿಂದ ಆಗಸ್ಟ್ 31ರವರೆಗೆ ಸರಾಸರಿಗಿಂತ ಶೇ.10 ಹೆಚ್ಚು ಮಳೆಯಾಗಿದೆ ಎಂದು ಐಎಂಡಿಯ ವಿಜ್ಞಾನಿ ಆರ್.ಕೆ. ಜೆನಮಾನಿ ತಿಳಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಐದು ಕಡಿಮೆ ಒತ್ತಡ ಪ್ರದೇಶಗಳು ನಿರ್ವಣವಾಗಿದ್ದು ಈ ಪ್ರಮಾಣದ ಮಳೆಗೆ ಕಾರಣ ಎಂದು ಹೇಳಿದ್ದಾರೆ. ಚಂಡಮಾರುತ ಏಳುವ ಮೊದಲನೇ ಹಂತವಾಗಿ ಕಡಿಮೆ ಒತ್ತಡ ಪ್ರದೇಶ ನಿರ್ವಣವಾಗುತ್ತದೆ. ಆದರೆ ಎಲ್ಲ ಕಡಿಮೆ ಒತ್ತಡ ಪ್ರದೇಶದಿಂದ ಚಂಡಮಾರುತ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ. ಐಎಂಡಿ ಮಾಹಿತಿ ಪ್ರಕಾರ ದೇಶದ ವಾಯವ್ಯ ವಿಭಾಗದಲ್ಲಿ ಎಂದಿಗಿಂತ ಶೇ.9 ಕಡಿಮೆ ಮಳೆ ವರದಿಯಾಗಿದೆ. ಕೇಂದ್ರ ಭಾಗದಲ್ಲಿ ಶೇ.21, ದಕ್ಷಿಣ ವಿಭಾಗದಲ್ಲಿ ಶೇ.20, ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಶೇ.2 ಹೆಚ್ಚಿನ ಮಳೆಯಾಗಿದೆ.
ರಾಜ್ಯದಲ್ಲಿ 3 ತಿಂಗಳಲ್ಲಿ ವಾಡಿಕೆಕ್ಕಿಂತ ಹೆಚ್ಚು ಮಳೆ
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಮೂರು ತಿಂಗಳಲ್ಲಿ ಮುಂಗಾರು ಮಳೆ ವಾಡಿಕೆಕ್ಕಿಂತ ಹೆಚ್ಚು ಬಿದ್ದಿದೆ. ಜೂನ್​ನಿಂದ ಆಗಸ್ಟ್​ವರೆಗೆ ಕರಾವಳಿಯಲ್ಲಿ 679 ಮಿಮೀ ಮಳೆಯಾಗಬೇಕಿತ್ತು. 782 ಮಿಮೀ ಮಳೆಯಾಗುವ ಮೂಲಕ ಶೇ.15 ಹೆಚ್ಚು ಸುರಿದಿದೆ. ಅದೇರೀತಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 220.7 ಮಿಮೀ ಮಳೆಯಾಗಬೇಕಿತ್ತು. 386 ಮಿಮೀ ಮಳೆಯಾಗಿದ್ದು, ಶೇ.75 ಹೆಚ್ಚು ಬಿದ್ದಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಯಂತೆ 250.3 ಮಿಮೀ ಮಳೆಯಾಗಬೇಕಿದ್ದು, ಶೇ.38 ಹೆಚ್ಚು ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡದಲ್ಲಿ ಶೇ.13, ಚಿಕ್ಕಮಗಳೂರಿನಲ್ಲಿ ಶೇ.9, ಹಾಸನದಲ್ಲಿ ಶೇ.6, ಕೊಡಗಿನಲ್ಲಿ ಶೇ.11 ಹಾಗೂ ಶಿವಮೊಗ್ಗದಲ್ಲಿ ಶೇ.6 ಮಳೆ ಕೊರತೆಯಾಗಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ.
13 ಜಿಲ್ಲೇಲಿ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನದಲ್ಲಿ ಸೆ.2ರಂದು ಯೆಲ್ಲೋ ಅಲರ್ಟ್ ಇದ್ದರೆ, ಸೆ.3ರಿಂದ 2 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 15 =
Remember me
