ಕೋಲ್ಕತಾ:ಬಿರ್​ಭುಂ ಜಿಲ್ಲೆಯ ಗ್ರಾಮವೊಂದರಲ್ಲಿ ಚಿಕ್ಕಮ್ಮ ಒಬ್ಬಳು 2 ವರ್ಷದ ಮಗುವನ್ನು ಕಬೋರ್ಡ್​ನಲ್ಲಿ 6 ಗಂಟೆ ಕೂಡಿ ಹಾಕಿದ ಕೊಂದಿದ್ದಾಳೆ. ಆ ಮಗುವಿನ ತಾಯಿಯೊಂದಿಗಿನ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗಿದೆ.
ಮಗುವನ್ನು ಕೊಂದ ತಾಜ್​ಮೀರಾ ಬೀಬಿ ಎಂಬಾಕೆಯನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಾಜ್​ಮೀರಾ ಬೀಬಿ ಮತ್ತು ಶಂಪಾ ಬೀಬಿ ಸಹೋದರಿಯರಾಗಿದ್ದು ಒಂದೇ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಹಾಗಾಗಿ ಇಬ್ಬರೂ ಪರಸ್ಪರ ದ್ವೇಷಿಸುತ್ತಿದ್ದರು ಎನ್ನಲಾಗಿದೆ. ಹೀಗಿರುವಾಗ ತಾಜ್​ಮೀರಾ ಬೀಬಿಯ ಪುತ್ರ ಹಾಗೂ ಶಂಪಾ ಬೀಬಿ ಎಂಬಾಕೆಯ 2 ವರ್ಷದ ಪುತ್ರ ಆಟಿಕೆ ವಿಷಯವಾಗಿ ಜಗಳವಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಾಜ್​ಮೀರಾ ತನ್ನ ಮಗನ ಪರವಹಿಸಿಕೊಂಡು ಶಂಪಾ ಬೀಬಿಯ ಪುತ್ರನನ್ನು ಥಳಿಸಿದ್ದಳು. ಪೆಟ್ಟುತಾಳಲಾರದೆ ಕಿರಿಯ ಜೀವ ಪ್ರಜ್ಞೆ ತಪ್ಪಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನ ಕೊಲೆ: ದುಷ್ಕರ್ಮಿಗಳ ಪತ್ತೆ ಪೊಲೀಸರ ಶೋಧ
ಮಗು ಪ್ರಜ್ಞೆ ತಪ್ಪಿರುವುದನ್ನು ಕಂಡರೆ ಮತ್ತೆಲ್ಲಿ ಗಲಾಟೆಯಾಗುತ್ತದೋ ಎಂಬ ಭೀತಿಯಲ್ಲಿ ಪ್ರಜ್ಞಾಶೂನ್ಯ ಮಗುವನ್ನು ತಾಜ್ಮೀರಾ ತನ್ನ ಕಬೋರ್ಡ್​ನಲ್ಲಿ ಮುಚ್ಚಿಟ್ಟಿದ್ದಳು. ಸ್ವಲ್ಪ ಹೊತ್ತಾದ ನಂತರ ಮಗುವಿನ ತಾಯಿ ಮಗುವಿಗಾಗಿ ಹುಡುಕಾಡಲಾರಂಭಿಸಿದ್ದಳು. ಆಕೆಯೊಂದಿಗೆ ಸೇರಿಕೊಂಡು ತಾನೂ ಮಗುವನ್ನು ಹುಡುಕಾಡುತ್ತಿರುವಂತೆ ಒಡಾಡಿದ್ದಳು. ಹಲವು ಗಂಟೆಗಳಾದರೂ ಮಗು ಕಾಣದಾದಾಗ ಮಗುವಿನ ತಾಯಿ ದೂರು ಕೊಟ್ಟಿದ್ದಳು ಎಂದು ತಿಳಿಸಿದ್ದಾರೆ.
ಮನೆಗೆ ಹೋಗಿ ಶೋಧ ಕಾರ್ಯ ಆರಂಭಿಸಲಾಯಿತು. ಅನುಮಾನವಿರುವ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿತ್ತು. ಅಷ್ಟರಲ್ಲಿ ತಾಜ್​ಮೀರಾ ಬೀಬಿಯ ಕಬೋರ್ಡ್​ನಲ್ಲಿ ಮಗು ಪತ್ತೆಯಾಯಿತು. ಅಂದಾಜು 6 ಗಂಟೆ ಕಬೋರ್ಡ್​ನಲ್ಲಿ ಇರಿಸಿದ್ದರಿಂದ, ಅದು ಉಸಿರುಗಟ್ಟಿ ಮೃತಪಟ್ಟಿತ್ತು. ಆ ಈ ಬಗ್ಗೆ ಪ್ರಶ್ನಿಸಿದಾಗ ತಾಜ್​ಮೀರಾ ಮೊದಲಿಗೆ ತನಗೆ ಏನೂ ಗೊತ್ತಿಲ್ಲ ಎಂದು ನಾಟಕವಾಡಿದ್ದಳು. ಆದರೆ ವಿಚಾರಣೆ ತೀವ್ರಗೊಳ್ಳುತ್ತಿರುವಂತೆ ಸತ್ಯವನ್ನು ಒಪ್ಪಿಕೊಂಡಳು. ಇದೀಗ ಆಕೆಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಒಂದೇ ಸಿನಿಮಾದಲ್ಲಿ ಸಮಂತಾ ರಶ್ಮಿಕಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eight =
Remember me
