ಮುಂಬೈ:ಮುಖ್ಯಮಂತ್ರಿ ಏಕನಾಥ್​ ಸಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಔರಂಗಾಬಾದ್​ ಮತ್ತು ಉಸ್ಮಾನಾಬಾದ್​ ಜಿಲ್ಲೆಗಳ ಹೆಸರುಗಳನ್ನು ಕ್ರಮವಾಗಿ ಛತ್ರಪತಿ ಶಿವಾಜಿನಗರ ಮತ್ತು ಧಾರಾಶಿವ ಎಂದು ಮರುನಾಮಕರಣಗೊಳಿಸಿ ಆದೇಶ ಹೊರಡಿಸಿದೆ.
ಕಳೆದ ಜುಲೈನಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಜಿಲ್ಲೆಗಳ ಹೆಸರನ್ನು ಬದಲಾಯಿಸುವ ಬಗ್ಗೆ ಒಪ್ಪಿಗೆ ಪಡೆಯಲಾಗಿತ್ತು. ಹಾಗೆಯೇ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಗಳನ್ನೂ ಆಹ್ವಾನಿಸಲಾಗಿತ್ತು. ಅದರಂತೆ ಔರಂಗಾಬಾದ್​ ಅನ್ನು ಛತ್ರಪತಿ ಶಿವಾಜಿನಗರವೆಂದೂ ಹಾಗೂ ಉಸ್ಮಾನಾಬಾದ್​ ಅನ್ನು ಧಾರಾಶಿವ ಎಂದು ಮರುನಾಮಕರಣಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಔರಂಗಾಬಾದ್​ ಮತ್ತು ಉಸ್ಮಾನಾಬಾದ್​ ಹೆಸರುಗಳ ಮರುನಾಮಕಾರಣಕ್ಕೆ ಹಿಂದಿನ ಮಹಾ ವಿಕಾಸ ಅಡಿ (ಎಂವಿಎ) ಸರ್ಕಾರದ ಕ್ಯಾಬಿನೆಟ್​ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ರಾಜಕೀಯ ಬೆಳವಣಿಗೆಯಿಂದಾಗಿ 2022ರ ಜೂನ್​ 29ರಂದು ಅಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​ ಠಾಕ್ರೆ ರಾಜೀನಾಮೆ ನೀಡಿದ್ದರು.
“ಉದ್ಧವ್​ ಠಾಕ್ರೆ ಮಾಡಲಿಕ್ಕೆ ಆಗದ ಕೆಲಸವನ್ನು ನಮ್ಮ ಸರ್ಕಾರವು ಸಚಿವ ಸಂಪುಟದ ಪೂರ್ಣ ಬಹುಮತದೊಂದಿಗೆ ಕಾನೂನಾತ್ಮಕವಾಗಿ ಮಾಡಿದೆ’ ಎಂದು ಸಿಎಂ ಏಕನಾಥ್​ ಸಿಂಧೆ ಮತ್ತು ಉಪಮುಖ್ಯಮಂತ್ರಿ ದೆವೇಂದ್ರ ಡ್ನವಿಸ್​ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 8 =
Remember me
