ಆಗ್ರಾ:ಮಥುರಾ ಕೃಷ್ಣಜನ್ಮಭೂಮಿಯ ದೇವಸ್ಥಾನ ನೆಲಸಮಗೊಳಿಸಿದ್ದು ಔರಂಗಜೇಬ್ ಎಂದು ಆರ್​ಟಿಐ ಮಾಹಿತಿ ಹೇಳಿದೆ. ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ (ಎಎಸ್​ಐ) ಆರ್​ಟಿಐ ಅರ್ಜಿಗೆ ಪ್ರತಿಕ್ರಿಯಿಸಿ ನೀಡಿರುವ ದಾಖಲೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ.
ಕೃಷ್ಣಜನ್ಮಭೂಮಿ ದೇವಸ್ಥಾನ ಸಂಕೀರ್ಣ ಕುರಿತ 1920ರ ನವೆಂಬರ್ ಗೆಜೆಟ್​ನಿಂದ ಈ ಮಾಹಿತಿ ಹೊರಹೊಮ್ಮಿದೆ. ಎಎಸ್​ಐ ಗೆಜೆಟ್​ನ ಆಯ್ದ ಭಾಗಗಳನ್ನು ಹಂಚಿಕೊಂಡಿದ್ದು, ‘ಕತ್ರಾ ದಿಬ್ಬಗಳ ಭಾಗವು ನಜುಲ್ ಹಿಡುವಳಿದಾರರ ಸ್ವಾಧೀನದಲ್ಲಿ ಇರಲಿಲ್ಲ. ಮೊದಲು ಆ ಸ್ಥಳದಲ್ಲಿ ಕೇಶವದೇವನ ದೇವಸ್ಥಾನವಿದ್ದು, ಬಳಿಕ ಅದನ್ನು ಕೆಡವಿ ನಂತರ ಔರಂಗಜೇಬ್​ನ ಮಸೀದಿ ನಿರ್ವಿುಸಲಾಯಿತು’ ಎಂಬುದನ್ನು ತಿಳಿಸಿದೆ.
ಉತ್ತರಪ್ರದೇಶದ ಮಣಿಪುರಿಯ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಎಂಬವರು ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಆಗ್ರಾ ವೃತ್ತದ ಎಎಸ್​ಐನ ಸುಪರಿಂಟೆಂಡೆಂಟ್ ಆರ್ಕೆಯೊಲಜಿಸ್ಟ್ ಕಚೇರಿ ಈ ಮಾಹಿತಿ ನೀಡಿದೆ.
ಕೃಷ್ಣಜನ್ಮಭೂಮಿ ದೇವಸ್ಥಾನ ಸಂಕೀರ್ಣದ ಭಾಗ ಎನ್ನಲಾದ ಕೇಶವದೇವ ದೇವಸ್ಥಾನದ ನೆಲಸಮ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಸಿಂಗ್ ಆರ್​ಟಿಐ ಮೂಲಕ ಆಗ್ರಹಿಸಿದ್ದರು.ಆರ್​ಟಿಐ ನೀಡಿದ್ದ ಮಾಹಿತಿಯಲ್ಲಿ ‘ಕೃಷ್ಣಜನ್ಮಭೂಮಿ’ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ ಮೊಘಲ್ ಚಕ್ರವರ್ತಿಯ ವಿವಾದಿತ ಸ್ಥಳದಲ್ಲಿ ಮೊದಲಿದ್ದ ಕೇಶವದೇವ ದೇವಸ್ಥಾನ ಕೆಡವಲಾಗಿತ್ತು ಎನ್ನುವುದನ್ನು ಖಚಿತಪಡಿಸಲಾಗಿದೆ.
ಈ ಪ್ರಮುಖ ಸಾಕ್ಷ್ಯವನ್ನು ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಂದಿಡಲಾಗುವುದು ಎಂದು ಶ್ರೀಕೃಷ್ಣಜನ್ಮಭೂಮಿ ಮುಕ್ತಿ ನ್ಯಾಸದ ಅಧ್ಯಕ್ಷ, ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಫೆ. 22ರಂದು ಅಲಹಾಬಾದ್ ಹೈಕೋರ್ಟ್​ನಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಎಎಸ್​ಐ ನೀಡಿದ ಮಾಹಿತಿ ಸಲ್ಲಿಸಲಿರುವುದಾಗಿ ಮಹೇಂದ್ರ ತಿಳಿಸಿದ್ದಾರೆ.
ಮಹಾಭಾರತ ವಿವಾದ ಹಿಂದು ಪರ ತೀರ್ಪು
ಮೇರಠ್: ಜ್ಞಾನವಾಪಿ ಪ್ರಕರಣದಲ್ಲಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸುವ ಸಂಬಂಧ ಇತ್ತೀಚೆಗೆ ಹಿಂದುಗಳ ಪರ ತೀರ್ಪು ಬಂದಿದ್ದು, ಇದೀಗ ‘ಮಹಾಭಾರತ’ ವಿವಾದಕ್ಕೆ ಸಂಬಂಧಿತ ಪ್ರಕರಣದಲ್ಲೂ ಸದ್ಯಕ್ಕೆ ಹಿಂದುಪರ ಆದೇಶ ಪ್ರಕಟವಾಗಿದೆ. ಈ ಮೂಲಕ 53 ವರ್ಷಗಳ ಹಿಂದೆ ದಾಖಲಿಸಿದ್ದ ಪ್ರಕರಣ ಒಂದು ಹಂತಕ್ಕೆ ಇತ್ಯರ್ಥಗೊಂಡಿದೆ.
ಮಹಾಭಾರತದಲ್ಲಿ ಅರಗಿನ ಮನೆ ಪ್ರಸಂಗ ನಡೆದ ಸ್ಥಳ ಎಂದು ಹಿಂದುಗಳು ನಂಬಿರುವ ಉತ್ತರಪ್ರದೇಶದ ಬಾಘ್​ಪಟ್ ಜಿಲ್ಲೆಯ ಬರ್ನಾವಾ ಗ್ರಾಮದ 100 ಬಿಘ ಭೂಮಿ ವಿರುದ್ಧ ಅದನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಮುಸ್ಲಿಮರು ಅರ್ಜಿ ಸಲ್ಲಿಸಿದ್ದರು. ಆದರೆ ಮುಸ್ಲಿಮರ ಈ ಅರ್ಜಿಯನ್ನು ಬಾಘ್​ಪಟ್​ನ ಕೋರ್ಟ್ ಆಫ್ ಸಿವಿಲ್ ಜಡ್ಜ್ (ಜೂನಿಯರ್ ಡಿವಿಜನ್) ಸೋಮವಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ಬರ್ನಾವಾದ ಹಿಂಡೋನ್ ಮತ್ತು ಕೃಷ್ಣಿ ನದಿ ಸಂಗಮದ ಪಕ್ಕದಲ್ಲಿರುವ ಪುರಾತನ ದಿಬ್ಬದ ಮೇಲೆ ಈ ಸ್ಥಳ ನೆಲೆಯಾಗಿದ್ದು, ಇದು ಸೂಫಿ ಸಂತ ಬದ್ರುದ್ದೀನ್ ಷಾ ಸಮಾಧಿ ಮತ್ತು ಸ್ಮಶಾನ ಹೊಂದಿದೆ ಎಂಬ ಬಹುಕಾಲದ ವಿವಾದವಿದೆ.
ಪ್ರಸ್ತುತ ಇದು ಭಾರತೀಯ ಪುರಾತತ್ವ ಸಮೀಕ್ಷೆಯಡಿ ಸಂರಕ್ಷಿತ ತಾಣವಾಗಿದೆ. ಸ್ಮಶಾನದ ಉಸ್ತುವಾರಿ ಹೊಂದಿದ್ದ ಮುಕಿಂ ಖಾನ್ ಎಂಬವರು 1970ರಲ್ಲಿ ಈ ಸ್ಥಳಕ್ಕೆ ಸಂಬಂಧಿಸಿದಂತೆ ಮಾಲೀಕತ್ವ ಘೋಷಿಸಿ ಕೇಸು ದಾಖಲಿಸಿದ್ದರು. ಅಲ್ಲದೆ ಹಿಂದುಗಳು ಈ ಸ್ಥಳವನ್ನು ಅತಿಕ್ರಮಣ ಮಾಡುವುದರಿಂದ, ಹವನಗಳನ್ನು ನಡೆಸಿ ಸ್ಮಶಾನ ಹಾಳು ಮಾಡುವುದರಿಂದ ರಕ್ಷಣೆ ಒದಗಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಸ್ಥಳೀಯ ಅರ್ಚಕರಾಗಿದ್ದ ಕೃಷ್ಣದತ್ತ ಮಹಾರಾಜ್ ಅವರನ್ನು ಈ ಪ್ರಕರಣದ ಪ್ರತಿವಾದಿ ಆಗಿಸಲಾಗಿತ್ತು. ಪ್ರತಿವಾದಿ ಪರ ವಕೀಲರು 1920ರ ಡಿ.12ರ ಗೆಜೆಟ್ ದಾಖಲೆ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ದಿಬ್ಬದ ಪ್ರದೇಶ ಲಕ್ಷಗೃಹ ಎಂಬಿತರ ಉಲ್ಲೇಖ ಅದರಲ್ಲಿದೆ. 1920ರಲ್ಲಿ ಈ ಸ್ಥಳ ಸಮಾಧಿ ಇಲ್ಲವೇ ಸ್ಮಶಾನ ಆಗಿತ್ತು ಎನ್ನುವ ಕುರಿತು ಮುಸ್ಲಿಮರು ದಾಖಲೆ ಸಲ್ಲಿಸಲು ಸಾಧ್ಯವಾಗದ್ದನ್ನು ಗಮನಿಸಿದ ನ್ಯಾಯಾಲಯ ಮುಸ್ಲಿಮರ ಕಡೆಯ ಅರ್ಜಿ ವಜಾ ಗೊಳಿಸಿದೆ. ಆದರೆ ಮುಸ್ಲಿಂ ಪರ ವಕೀಲರು ಈ ಪ್ರಕರಣ ಸಂಬಂಧ ಮೇಲಿನ ನ್ಯಾಯಾಲಯಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ 16 ಎಕರೆ ಭೂಮಿ ಕಬಳಿಕೆ ಆರೋಪ: ಮಾಜಿ ರೌಡಿ ಜೇಡರಹಳ್ಳಿ ಕೃಷ್ಣಪ್ಪ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
