ನವದೆಹಲಿ:ಕೋವಿಡ್​ 19 ಸಂಪೂರ್ಣ ನಿಯಂತ್ರಣಕ್ಕೆ ಬಂದು ಸ್ತಬ್ಧವಾಗಿರುವ ವಿಶ್ವ ಸಾಮಾನ್ಯ ಸ್ಥಿತಿಗೆ ಮರಳಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯನ್ನು (ಡಬ್ಲ್ಯೂಎಚ್​ಒ) ಮರುರಚಿಸಬೇಕು ಎಂಬ ಭಾರತದ ಆಗ್ರಹಕ್ಕೆ ಆಸ್ಟ್ರೆಲಿಯಾ ಬೆಂಬಲ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಭಾರತದಲ್ಲಿನ ಆಸ್ಟ್ರೇಲಿಯಾದ ನಿಯೋಜಿತ ರಾಯಭಾರಿ ಬ್ಯಾರಿ ಓ ಫರೆಲ್​, ಕೋವಿಡ್​ ಆತಂಕ ದೂರಾದ ಬಳಿಕ ವಿಶ್ವವನ್ನು ಮರುರೂಪಿಸುವ ಬಗ್ಗೆ ನಿರಂತರವಾಗಿ ಚರ್ಚೆಗಳು ಸಾಗಿವೆ. ಉದಾಹರಣೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಡಬ್ಲ್ಯೂಎಚ್​ಒ ಅನ್ನು ಮರುರಚಿಸಬೇಕು ಎಂದು ಜಿ20 ರಾಷ್ಟ್ರಗಳ ನಾಯಕರ ವರ್ಚುಯಲ್​ ಸಭೆಯಲ್ಲಿ ಆಗ್ರಹಿಸಿದ್ದರು. ಇದಕ್ಕೆ ಆಸ್ಟ್ರೇಲಿಯಾ ಸರ್ಕಾರದ ಬೆಂಬಲ ಕೂಡ ಇದೆ ಎಂದು ಹೇಳಿದರು.
ಕೋವಿಡ್​ ಪರಿಸ್ಥಿತಿಯನ್ನು ಡಬ್ಲ್ಯೂಎಚ್​ಒ ನಿಭಾಯಿಸಿದ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಎಂಬುದು ಆಸ್ಟ್ರೇಲಿಯಾ ಸರ್ಕಾರದ ಅಭಿಪ್ರಾಯವಾಗಿದೆ. ಆದರೆ, ಕೋವಿಡ್​ ಪರಿಸ್ಥಿತಿ ಸುಧಾರಿಸಿದ ಬಳಿಕ ಇದನ್ನು ಮಾಡಬಹುದು ಎಂದು ತಿಳಿಸಿದ್ದಾರೆ.
ಆಸೀಸ್​ ಪ್ರಜೆಗಳು ಸ್ವದೇಶಕ್ಕೆ:ಕೋವಿಡ್​ ಸಂಬಂಧಿತ ಲಾಕ್​ಡೌನ್​ಗಳು ಮತ್ತು ಸಂಚಾರ ನಿರ್ಬಂಧದಿಂದಾಗಿ ಆಸ್ಟ್ರೇಲಿಯಾದ ಪ್ರಜೆಗಳು ವಿವಿಧ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದಾರೆ. ಭಾರತದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಆದರೂ ಇದುವರೆಗೆ 2 ಸಾವಿರ ಜನರನ್ನು ಸ್ವದೇಶಕ್ಕೆ ರವಾನಿಸಲಾಗಿದೆ. ಮುಂದಿನ ವಾರ ಇನ್ನು ನಾಲ್ಕು ವಿಮಾನಗಳಲ್ಲಿ ಉಳಿದವರನ್ನು ಕೂಡ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಸಿಲುಕಿಕೊಂಡಿರುವ ಜನರಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂ. (500 ಡಾಲರ್​) ಧನಸಹಾಯ ನೀಡಲಾಗಿದೆ ಎಂದು ಹೇಳಿದ್ದಾರೆ.
ಕೋವಿಡ್​ ಲಾಕ್​ಡೌನ್​ ಹಿನ್ನೆಲೆ; ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳ ಮುಂದೂಡಿಕೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:two − one =
Remember me
