ನವದೆಹಲಿ :ಭಾರತೀಯ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾದ ಬಲಿಷ್ಠ ತಂಡವನ್ನು 1-0 ಅಂತರದಿಂದ ಸೋಲಿಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್​ ಸೆಮಿಫೈನಲ್ಸ್​ ಪ್ರವೇಶಿಸಿದೆ. ವರ್ಲ್ಡ್​ ನಂ.4 ತಂಡವಾದ ಆಸ್ಟ್ರೇಲಿಯಾ ತಂಡವನ್ನು ವರ್ಲ್ಡ್​ ನಂ.10 ಆಗಿರುವ ಭಾರತ ತಂಡ ಮಣಿಸಿರುವುದಕ್ಕೆ ಆಟಗಾರ್ತಿಯರಿಗೆ ಪ್ರಶಂಸೆಯ ಹೊಳೆ ಹರಿದಿದೆ.
ಈ ಸಾಧನೆಗೆ ಭಾರತಕ್ಕೆ ಆಸ್ಟ್ರೇಲಿಯಾದ ಹೈಕಮಿಷನರ್​ ಆಗಿರುವ ಬ್ಯಾರ್ರಿ ಒ’ಫೆರ್ರೆಲ್​ ಅವರು ಕೂಡ ಭಾರತೀಯ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. “ವೆಲ್​ ಡನ್​!” ಎಂದು ಶ್ಲಾಘಿಸಿರುವ ಅವರು, “ಅದು ಕಠಿಣವಾದ ಪಂದ್ಯವಾಗಿತ್ತು. ಆದರೆ ನಿಮ್ಮ ಡಿಫೆನ್ಸ್​​ ಕೊನೆಯವರೆಗೂ ಪಟ್ಟಾಗಿ ಮುಂದುವರೆದಿತ್ತು” ಎಂದಿದ್ದಾರೆ.
ಇದನ್ನೂ ಓದಿ:ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್​ ಸೇರಲಿದೆ ಯುವಪಡೆ! ಆ ಲಿಸ್ಟ್ ಇಲ್ಲಿದೆ
ಜೊತೆಗೆ, ಉತ್ತಮ ಆಟಗಾರಿಕೆ ಪ್ರದರ್ಶಿಸಿದ ಭಾರತ ತಂಡದ ಸವಿತಾ ಪೂನಿಯ ಅವರನ್ನು “ಗ್ರೇಟ್​ ವಾಲ್​ ಆಫ್​ ಇಂಡಿಯ” ಎಂದು ಕರೆದು “ಸವಿತಾರನ್ನು ಮಣಿಸಲು ಸಾಧ್ಯವಾಗಲಿಲ್ಲ” ಎಂದು ಟ್ವೀಟ್​ ಮಾಡಿರುವ ಒ’ಫೆರ್ರೆಲ್​, “ಬೆಸ್ಟ್​ ಆಫ್​ ಲಕ್​ ಇನ್ ಸೆಮಿ ಅಂಡ್​ ಗ್ರ್ಯಾಂಡ್​ ಫೈನಲ್ಸ್​” ಎಂದು ಭಾರತ ತಂಡಕ್ಕೆ ಮುಂದಿನ ಪಂದ್ಯಕ್ಕೆ ಶುಭ ಕೋರಿದ್ದಾರೆ.(ಏಜೆನ್ಸೀಸ್)
ಮಿಜೊರಾಂ ಸಂಸದರ ವಿರುದ್ಧದ ಕೇಸ್ ವಾಪಸ್​ : ಅಸ್ಸಾಂ ಸಿಎಂ
ಗ್ಯಾಸ್ಟ್ರಿಕ್ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ ಇದು ಬಲು ಉಪಯುಕ್ತ!




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
