ನವದೆಹಲಿ:ಜಾಗತಿಕವಾಗಿ ಚೀನಾ ವಿರೋಧಿ ರಾಷ್ಟ್ರಗಳು ಒಂದಾಗಬೇಕು ಎಂದು ಅಮೆರಿಕದ ಸಂಸತ್​ ಸದಸ್ಯ ಜಾನ್​ ಕೆನಡಿ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ, ಅಮೆರಿಕ ಮತ್ತು ಜಪಾನ್​ ಜತೆ ನೌಕಾ ಸಮರಭ್ಯಾಸ ನಡೆಸಲು ಆಸ್ಟ್ರೇಲಿಯಾ ಮುಂದಾಗಿದೆ.
ಮಲಬಾರ್​ ನೌಕಾ ಸಮರಭ್ಯಾಸ ಎಂಬ ಹೆಸರಿನ ಈ ಸಮರಭ್ಯಾಸ ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಭಾರತ, ಅಮೆರಿಕ ಮತ್ತು ಜಪಾನ್​ನ ನೌಕಾಪಡೆಗಳು ಮಾತ್ರವೇ ಈ ಸಮರಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ, ಈ ಬಾರಿ ಆಸ್ಟ್ರೇಲಿಯಾವನ್ನು ಸೇರಿಸಿಕೊಳ್ಳಲು ಚಿಂತನೆ ನಡೆದಿದೆ.
ಇದನ್ನೂ ಓದಿ:ನೀ ಹಾಳಾಗಿ ಹೋಗ್ತ್ಯಾ ಅಂದ ಅನುಪಮ್ಗೆ ಹಲವರು ಹೇಳಿದ್ದರಂತೆ …
ಒಂದು ವೇಳೆ ಆಸ್ಟ್ರೇಲಿಯಾವನ್ನು ಈ ಸಮರಭ್ಯಾಸಕ್ಕೆ ಸೇರಿಸಿಕೊಳ್ಳಲು ಭಾರತ ನಿರ್ಧರಿಸಿದರೆ, ಇಂಡೋ-ಪೆಸಿಫಿಕ್​ ಮಹಾಸಾಗರದ ವ್ಯಾಪ್ತಿಯಲ್ಲಿ ಚತುಷ್ಕೋನ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬಂದಂತೆ ಆಗಲಿದೆ. ತನ್ಮೂಲಕ ಈ ಪ್ರದೇಶದಲ್ಲಿ ತನ್ನ ಸೇನಾಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾಕ್ಕೆ ಸೆಡ್ಡು ಹೊಡೆಯಲು ಅನುಕೂಲವಾಗುತ್ತದೆ ಎನ್ನಲಾಗಿದೆ.
2017ರಲ್ಲೇ ಓಂಕಾರ:ಇಂಡೋ-ಪೆಸಿಫಿಕ್​ ಸಮುದ್ರ ಮಾರ್ಗ ಯಾವುದೇ ಒಂದು ರಾಷ್ಟ್ರದ ಏಕಚಕ್ರಾದಿಪತ್ಯಕ್ಕೆ ಒಳಗಾಗದಂತೆ ಹಾಗೂ ಇಂಥ ಮನೋಭಾವ ಹೊಂದಿರುವ ಚೀನಾವನ್ನು ಕಟ್ಟಿಹಾಕುವ ಉದ್ದೇಶದಿಂದ ಭಾರತ, ಅಮೆರಿಕ, ಜಪಾನ್​ ಮತ್ತು ಆಸ್ಟ್ರೇಲಿಯಾ 2017ರ ನವೆಂಬರ್​ನಲ್ಲೇ ಚತುಷ್ಕೋನ ಮೈತ್ರಿಕೂಟ ರಚಿಸಿಕೊಂಡಿದ್ದವು. ಆದರೆ ಮಲಬಾರ್​ ನೌಕಾ ಸಮರಭ್ಯಾಸದಲ್ಲಿ ಮಾತ್ರ ಆಸ್ಟ್ರೇಲಿಯಾವನ್ನು ಸೇರಿಸಿಕೊಂಡಿರಲಿಲ್ಲ. ಇದೀಗ ಇಲ್ಲಿಯೂ ಕೂಡ ಆಸ್ಟ್ರೇಲಿಯಾವನ್ನು ಸೇರಿಸಿಕೊಂಡು, ಚತುಷ್ಕೋನ ಮೈತ್ರಿಕೂಟವನ್ನು ಅನ್ವರ್ಥಕಗೊಳಿಸಲು ಭಾರತ ಚಿಂತನೆ ನಡೆಸಿದೆ.
ಹೈಕೋರ್ಟ್​ ಹೊರಗೆ ತರಕಾರಿ ಮಾರುತ್ತಿರುವ ವಕೀಲ; ಇದಕ್ಕಿದೆ ಎರಡು ಕಾರಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
