ಬೆಂಗಳೂರು:ಟೆಸ್ಟ್​ ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್​​​ಮ್ಯಾನ್​ ಚೇತೇಶ್ವರ್​​ ಪೂಜಾರ ಅವರಿಗೆ ಬೌಲಿಂಗ್​​​ ಮಾಡುವುದು ಕಷ್ಟಕರ ಮತ್ತು ಅವರನ್ನು ಔಟ್​ ಮಾಡುವುದೇ ಒಂದು ದೊಡ್ಡ ಥ್ರಿಲ್​ ಎಂದು ಆಸ್ಟ್ರೇಲಿಯಾದ ವೇಗದ ಬೌಲರ್​ ಜೋಶ್​ ಹೇಜಲ್​ವುಡ್​ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ RCB ಪಾಡ್​ಕ್ಯಾಸ್ಟ್​ನಲ್ಲಿ ಮಾತನಾಡಿದ ಆಸ್ಟ್ರೇಲಿಯಾ ವೇಗಿ ಜೋಶ್​ ಹೇಜಲ್​ವುಡ್​ ಟೆಸ್ಟ್​ ಪಂದ್ಯದ ವೇಳೆ ಬೌಲರ್​ಗಳಿಗೆ ಪೂಜಾರ ಅವರನ್ನು ಔಟ್​ ಮಾಡುವುದು ಬಹಳ ರೋಮಾಂಚನಕಾರಿಯಾಗಿ ಇರುತ್ತದೆ. ಇದರರ್ಥ ಅವರನ್ನು ಔಟ್​ ಮಾಡಲು ಸಾಕಷ್ಟು ಶ್ರಮ ಹಾಕಿರುತ್ತೇವೆ. ಅವರಿಗೆ(ಚೇತೇಶ್ವರ್​​ ಪೂಜಾರ) ಈಗಾಗಲೇ ಸಾಕಷ್ಟು ಬೌಲ್​ ಮಾಡಿರುತ್ತೇವೆ. ಅಂತಿಮವಾಗಿ ಪೂಜಾರ ಅವರ ವಿಕೆಟ್​ ಕಬಳಿಸುವುದು ಬೌಲರ್​ಗೆ ಹೆಚ್ಚು ಗೌರವ ತಂದುಕೊಡುತ್ತದೆ ಎಂದು ಹೇಳಿದ್ಧಾರೆ.
ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಸರಣಿ ನಡೆಯುವ ವೇಳೆ ಚೇತೇಶ್ವರ್​​ ಪೂಜಾರ ಅವರೊಂದಿಗೆ ಸಾಕಷ್ಟು ಜಗಳ ಆಡಿದ್ಧೇನೆ. ಆಸ್ಟ್ರೇಲಿಯನ್ನರು ಹೆಚ್ಚು ದ್ವೇಷಿಸಲು ಇಷ್ಟ ಪಡುವ ಬ್ಯಾಟ್ಸ್​​ಮ್ಯಾನ್ ಪೂಜಾರ​​. ಇದನ್ನೆಲ್ಲಾ ಹೊರತುಪಡಿಸಿದರೆ ಅವರೊಬ್ಬ ಉತ್ತಮ ಆಟಗಾರ ಎಂದು RCB ಪಾಡ್​ಕ್ಯಾಸ್ಟ್​ನಲ್ಲಿ ಜೋಶ್​ ಹೇಜಲ್​ವುಡ್​ ಹೇಳಿದ್ದಾರೆ.
ಇದನ್ನು ಓದಿ:ವಿದ್ಯಾರ್ಥಿನಿ ಅಂಕಪಟ್ಟಿಯಲ್ಲಿ ‘She Has Passed Away’ ಎಂದು ಬರೆದ ಶಿಕ್ಷಕ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
